ಜಾಲಂದರ

Author : ಕಲಾ ಭಾಗ್ವತ್

Pages 340

₹ 400.00




Year of Publication: 2023
Published by: ಸ್ನೇಹಾ ಎಂಟರ್ ಪ್ರೈಸಸ್
Address: #138, 2ನೇ ಮಹಡಿ, 7 ನೇ ’ ಸಿ’ ಮುಖ್ಯ ರಸ್ತೆ ಹಂಪಿನಗರ, ಬೆಂಗಳೂರು-560104
Phone: 9448870461

Synopsys

‘ಜಾಲಂದರ’ ಕೃತಿಯು ಕಲಾ ಭಾಗ್ವತ್ ಅವರ ಆಯ್ದ ಲೇಖನಗಳ ಸಂಕಲನವಾಗಿದೆ. ಕೃತಿ ಕುರಿತು ನಾಡೋಜ ಪ್ರೊ. ಹಂಪನಾ ಅವರು ಹೀಗೆ ಹೇಳಿದ್ದಾರೆ; ಕಲಾ ಭಾಗ್ವತ್ ಅವರ ಓದಿನ ಹರಹನ್ನು, ಆಯ್ಕೆಯ ವೈವಿಧ್ಯವನ್ನು ಏಕಕಾಲದಲ್ಲಿ ಪ್ರತಿಫಲಿಸುವ ಈ ವಿಶಿಷ್ಟ ಕೃತಿಯ ಓದಿನ ಸಂಕೀರ್ಣವಾದದ್ದು. ಹಳಗನ್ನಡದ ಪಂಪ ಯುಗದ ಕವಿಗಳ ಮತ್ತು ಹರಿಹರನ ಚಂಪೂ ಕಾವ್ಯಾಂತರ್ಗತ ವಸ್ತುವನ್ನೂ ನಡುಗನ್ನಡದ ದಾಸ ಸಾಹಿತ್ಯವನ್ನೂ ಪರಾಮರ್ಶಿಸುವಾಗ ಅಂದಿನ ಚಾರಿತ್ರಿಕ ಹಾಗೂ ಸಾಮಾಜಿಕ ಪರಿಸರದ ಹಿನ್ನೆಲೆಯಲ್ಲಿ ಚರ್ಚಿಸುತ್ತಾರೆ. ಆದರೆ ಈ ಸಂಕಲನದ ಬರೆಹ ಹಳಗನ್ನಡಕ್ಕಷ್ಟೇ ಸೀಮಿತವಾಗಿಲ್ಲ. ಲೇಖಕಿಯ ಆಯ್ಕೆಯ ಬೀಸು ಆಧುನಿಕ ಸಾಹಿತ್ಯವನ್ನೂ ಆತುಕೊಂಡಿದೆ. ಸಮಕಾಲೀನ ಮುಂಬೈ ಸಾಹಿತ್ಯದ ಸತ್ವ ಮತ್ತು ಕಾಂತಿಯನ್ನು ಚಿಂಚಿಸಿದ ಕೃತಿ- ಕೃತಿಕಾರರನ್ನು ವಿಶ್ಲೇಷಿಸಿದ್ದಾರೆ. ಇನ್ನೂ ಮುಂದುವರೆದು ಇಲ್ಲನ ವಿವೇಚನೆ ಮತ್ತು ಪರಿಚಯದ ವ್ಯಾಪ್ತಿಯಲ್ಲಿ ವೈದ್ಯರು, ಸಾಹಸ ಮೆರೆದವರು, ಸಂಶೋಧಕರು, ಇವೆಲ್ಲದರ ಪ್ರೇರಕ ಶಕ್ತಿ ಕೇಂದ್ರವಾದ ಕನ್ನಡ ವಿಭಾಗವು ಸಮಾವೇಶವಾಗಿವೆ. ಇಲ್ಲಿ ಸಂಚಯವಾಗಿರುವ ಲೇಖನಗಳು ಕೇವಲ ಪರಿಚಯಾತ್ಮಕ ಪ್ರಾಥಮಿಕ ನೆಲೆಯಲ್ಲಿ ಪರ್ಯವಸಾನಗೊಳ್ಳುವುದಿಲ್ಲ. ಕಲಾ ಭಾಗ್ವತರ ಕೃತಿಯ ದೊಡ್ಡ ಪರಿಪ್ರೇಕ್ಯದಲ್ಲಿ ಅಳವಟ್ಟಿರುವ ಎಲ್ಲ ಬಿಡಿ ಸ್ವಯಂಪೂರ್ಣವಾಗಿವೆ. ನಿರೂಪಣೆಯ ಶೈಲಿ ಪೆಡಸಾಗದೆ ಸುಭಗವಾಗಿದೆ. ಸಂಶೋಧನೆಗೆ ಬೇಕಾದ ಖಚಿತತೆ ಮತ್ತು ಸೃಜನ ಸಾಹಿತ್ಯ ವಿಮರ್ಶೆಗೆ ತಕ್ಕ ಹದ ಇವರ ಗದ್ಯದ ಧನಾತ್ಮಕ ಗುಣ ಎಂದು ತಿಳಿಸಿದ್ದಾರೆ.

About the Author

ಕಲಾ ಭಾಗ್ವತ್

ಮುಂಬೈನ ಉದಯೋನ್ಮುಖ ಪ್ರತಿಭಾವಂತ ಲೇಖಕರಲ್ಲಿ ಕಲಾ ಚಿದಾನಂದ ಭಾಗ್ವತ್ ಅವರದು ಎದ್ದು ಕಾಣುವ ಹೆಸರು. ಮೂಲತಃ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಸಮೀಪದ ಹಳದೀಪುರದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ಅವರು ಉತ್ಕಟ ಸಾಹಿತ್ಯಾಭಿಮಾನಿ. ಮುಂಬೈ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ. ಎ ಪದವಿ ಪಡೆದಿರುವ ಕಲಾ ಅವರು ಗಮಕ, ಸಂಗೀತ ಕ್ಷೇತ್ರದಲ್ಲೂ ಹಿಡಿತ ಸಾಧಿಸಿದ್ದಾರೆ. ನಾಡಿನ ಅನೇಕ ಪತ್ರಿಕೆಗಳಲ್ಲಿ ಅವರ ಕವಿತೆ, ಕತೆ, ಬಿಡಿ ಬರಹಗಳು ಬೆಳಕು ಕಂಡಿವೆ.ʻವೈದ್ಯ ಭೂಷಣ ಡಾ. ಬಿ.ಎಂ ಹೆಗ್ಡೆ' ಇದು ಕಲಾ ಭಾಗ್ವತ್ ಅವರ ಚೊಚ್ಚಲ ಕೃತಿ ...

READ MORE

Related Books