`ಶ್ರೀ ಚಂಡಾಲ ಸ್ಪರ್ಗಾರೋಹಣಂ’ ಅರವಿಂದ ಮಾಲಗತ್ತಿ ಅವರ ಲೇಖನಗಳ ಸಂಗ್ರಹವಾಗಿದೆ. ಸಂಸ್ಕೃತಿ ಮತ್ತು ಪರಂಪರೆಗಳು ಜನಪರವಾಗಿ ಗುರುತಿಸಲ್ಪಟ್ಟಾಗ ಮಾತ್ರ ಸುಖೀ ಸಮಾಜದ ಉದಯ ಹಾಗೂ ಬೆಳವಣಿಗೆ ಸಾಧ್ಯ. ಶ್ರೇಷ್ಠತೆ - ಶ್ರೀಮಂತಿಕೆಯ ಪಕ್ಷ ವಹಿಸಿ ಬಂದ ಸಾಂಸ್ಕೃತಿಕ ಅಧ್ಯಯನ ನಮ್ಮಲ್ಲಿ ಹೇರಳವಾಗಿ ಇದ್ದಷ್ಟು ಅದರ ಇನ್ನೊಂದು ಭಾಗವಾದ ಮರೆತುಹೋದ ದೀನ-ದಲಿತರ ಸಂಸ್ಕೃತಿಯ ವ್ಯಾಖ್ಯಾನ ಚರಿತ್ರೆಯಲ್ಲೇಕೆ ಇಲ್ಲವೆಂದು ಚಿಂತನಶೀಲ ಸಮಯೋಚಿತ ಪ್ರಶ್ನೆಯೊಂದನ್ನು ಇಲ್ಲಿ ಎತ್ತಲಾಗಿದೆ.
ಡಾ.ಅರವಿಂದ ಮಾಲಗತ್ತಿಯವರು 01-08-1956ರಂದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಜನಿಸಿದರು. ತಂದೆ ಯಲ್ಲಪ್ಪ, ತಾಯಿ ಬಸವ್ವ. ಹುಟ್ಟೂರಿನಲ್ಲಿ ಪದವಿವರೆಗೂ ವ್ಯಾಸಂಗ ಮಾಡಿ, ನಂತರ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ ಮತ್ತು ಪಿಎಚ್.ಡಿ ಪದವೀಧರರಾದ ಇವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಪ್ರಸ್ತುತ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಡಾ. ಅರವಿಂದ ಮಾಲಗತ್ತಿ ಕನ್ನಡ ಸಾಹಿತ್ಯದಲ್ಲಿ ಒಂದು ಗಮನಾರ್ಹ ಹೆಸರು. ವಿಮರ್ಶೆ, ಸಂಶೋಧನೆ ಮತ್ತು ಸೃಜನಶೀಲ ಬರವಣಿಗೆಯ ಮೂಲಕ ಹೆಸರು ಮಾಡಿದವರು. ಕಾವ್ಯದ ಮೂಲಕ ಸಾಹಿತ್ಯಲೋಕಕ್ಕೆ ಪರಿಚಿತರಾದ ಇವರು ನಂತರ ಕವನ, ಕಾದಂಬರಿ, ...
READ MOREಹೊಸತು-2004- ಅಕ್ಟೋಬರ್
ಕರ್ನಾಟಕದ ಪ್ರಧಾನ ಸಂಸ್ಕೃತಿಗಳೊಂದಿಗೆ ತಮ್ಮ ಇರುವಿಕೆಯನ್ನು ಸಾರುತ್ತ ಮುಖಾಮುಖಿ ಮಾತನಾಡುವ ಉಪಸಂಸ್ಕೃತಿ ಮತ್ತು ಪರಂಪರೆ ಬಗ್ಗೆ ವೈಚಾರಿಕವಾಗಿ ವ್ಯಾಖ್ಯಾನಿಸಿರುವ ಲೇಖನಗಳ ಸಂಗ್ರಹವಿದು, ವಿವಿಧ ಜನಾಂಗೀಯ ಸಮೂಹ ಮಧ್ಯದಿಂದೆದ್ದು ಅರಳಿರುವ ಸಂಸ್ಕೃತಿಗಳ ವಿಚಾರವಾಗಿ ಮಾತನಾಡಲು ವಿಶಾಲ ಮನೋಭಾವನೆಯ ಅಗತ್ಯ ತುಂಬಾ ಇದೆ. ಸಂಸ್ಕೃತಿ ಮತ್ತು ಪರಂಪರೆಗಳು ಜನಪರವಾಗಿ ಗುರುತಿಸಲ್ಪಟ್ಟಾಗ ಮಾತ್ರ ಸುಖೀ ಸಮಾಜದ ಉದಯ ಹಾಗೂ ಬೆಳವಣಿಗೆ ಸಾಧ್ಯ. ಶ್ರೇಷ್ಠತೆ - ಶ್ರೀಮಂತಿಕೆಯ ಪಕ್ಷ ವಹಿಸಿ ಬಂದ ಸಾಂಸ್ಕೃತಿಕ ಅಧ್ಯಯನ ನಮ್ಮಲ್ಲಿ ಹೇರಳವಾಗಿ ಇದ್ದಷ್ಟು ಅದರ ಇನ್ನೊಂದು ಭಾಗವಾದ ಮರೆತುಹೋದ ದೀನ-ದಲಿತರ ಸಂಸ್ಕೃತಿಯ ವ್ಯಾಖ್ಯಾನ ಚರಿತ್ರೆಯಲ್ಲೇಕೆ ಇಲ್ಲವೆಂದು ಚಿಂತನಶೀಲ ಸಮಯೋಚಿತ ಪ್ರಶ್ನೆಯೊಂದನ್ನು ಇಲ್ಲಿ ಎತ್ತಲಾಗಿದೆ. ಜನಜೀವನ ವಿಧಾನದಲ್ಲಿ ಒಪ್ಪಿ ಅಂಗೀಕರಿಸಲ್ಪಟ್ಟ ಒಟ್ಟು ಮೊತ್ತವೇ ಇಲ್ಲಿ ಸಂಸ್ಕೃತಿ.