ಆಗಾಗ ಓದಿವ ಪುಸ್ತಕಗಳ ಚಿಂತನೆಗಳಿಗೆ, ಲೇಖನಗಳಿಗೆ ಬರೆದ ಬರೆಹಗಳ ಸಂಕಲನವಿದು. ಪುಸ್ತಕದ ಒಳನೋಟವನ್ನು ಕಂಡುಕೊಂಡು ಓದುಗರಿಗೆ ತಿಳಿಸುವುದು ತಮ್ಮ ಉದ್ದೇಶ. ಇಲ್ಲಿಯ ಬಹುತೇಕ ಬರೆಹಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ ಎಂದು ಲೇಖಕಿ ನಾಗರೇಖಾ ಗಾಂವಕರ್ ಅವರು ಕವಾಟ ಕೃತಿಯ ಬಗ್ಗೆ ಹೇಳಿಕೊಂಡಿದ್ದಾರೆ. ಕೃತಿಗೆ ಬೆನ್ನುಡಿ ಬರೆದ ಸಾಹಿತಿ ಆರ್. ಜಿ. ಹೆಗಡೆ ‘ ಅಂಕೋಲಾ ಸೊಬಗಿನ-ಸೊಗಡಿನ ಭಾಷೆ ಬಳಸಿದ್ದು, ಬರವಣಿಗೆಯ ಸಾಂದ್ರತೆಯನ್ನು ಹೆಚ್ಚಿಸಿವೆ. ಭಾಷೆ ಮತ್ತು ಸ್ವರೂಪ ದೃಷ್ಟಿಯಿಂದ ಅವರ ಬರೆಹಗಳು ಪ್ರೌಢಿಮೆಯನ್ನು ಮರೆಯುತ್ತಿವೆ’ ಎಂದು ಪ್ರಶಂಸಿಸಿದ್ದಾರೆ.
ಸೂಕ್ಷ್ಮ ಸಂವೇದನೆಯ ಕತೆಗಾರ್ತಿ ನಾಗರೇಖಾ ಗಾಂವಕರ ಅವರು ಮೂಲತಃ ಉತ್ತರ ಕನ್ನಡದವರು. ಕನ್ನಡ ಹಾಗೂ ಇಂಗ್ಲೀಷ್‌ನಲ್ಲಿ ಸ್ನಾತಕೋತ್ತರ ಪದವಿಧರೆಯಾದ ಅವರು ಪ್ರಸ್ತುತ ದಾಂಡೇಲಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. `ಏಣಿ, ಪದಗಳೊಂದಿಗೆ ನಾನು, ಬರ್ಫದ ಬೆಂಕಿ’ (ಕವನ ಸಂಕಲನಗಳು), ಪಾಶ್ಚಿಮಾತ್ಯ ಸಾಹಿತ್ಯ ಲೋಕ, ಆಂಗ್ಲ ಸಾಹಿತ್ಯ ಲೋಕ (ಅಂಕಣ ಬರಹ ಕೃತಿ), ಸಮಾನತೆಯ ಸಂಧಿಕಾಲದಲ್ಲಿ (ಮಹಿಳಾ ಸಮಾನತೆಯ ಕುರಿತ ಅಂಕಣ ಬರಹ ಕೃತಿ), ಕವಾಟ (ಪುಸ್ತಕ ಪರಿಚಯ ಕೃತಿ) ಅವರ ಪ್ರಮುಖ ಕೃತಿಗಳು. ಅವರ ‘ಏಣಿ’ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ...
READ MORE