ವೈಶಾಖ ಶುಕ್ಲ ಪೂರ್ಣಿಮೆ

Author : ಜಿ.ಪಿ. ರಾಜರತ್ನಂ

Pages 103

₹ 0.00




Year of Publication: 1940
Published by: ಶಾಖ್ಯ ಸಾಹಿತ್ಯ ಮಂಟಪ
Address: ಮಲ್ಲೇಶ್ವರಂ, ಬೆಂಗಳೂರು

Synopsys

ವೈಶಾಖ ಶುಕ್ಲ ಪೂರ್ಣಿಮೆ ಬುದ್ಧನು ಭೂಮಿಗೆ ಅವತರಿಸಿದ ದಿನ. ಮಾತ್ರವಲ್ಲ; ಬುದ್ಧನು ಬೋಧಿಯನ್ನು ಸಾಕ್ಷಾತ್ಕರಿಸಿಕೊಂಡ ದಿನವೂ ಹೌದು. ಬುದ್ಧನು ಪರಿನಿರ್ವಾಣವನ್ನು ಸಾಧಿಸಿದ ದಿನವೂ ಹೌದು. ಹೀಗೆ ಈ ದಿನಗಳ ಪಾವಿತ್ಯ್ರತೆಯಲ್ಲಿ ಬುದ್ಧನಿಗೊಂದು ಕನ್ನಡದ ಕಾಣಿಕೆಯಾಗಿ ನೀಡಬೇಕೆಂದು ಸಂಕಲ್ಪ ತೊಟ್ಟಿದ್ದರ ಫಲವೇ ವೈಶಾಖ ಶುಕ್ಲ ಪೂರ್ಣಿಮೆ ಕೃತಿ ಎಂದು ಲೇಖಕ ಜಿ.ಪಿ. ರಾಜರತ್ನಂ ಪ್ರಸ್ತಾವನೆಯಲ್ಲಿ ಹೇಳಿದ್ದಾರೆ.

ಶ್ರೀನಿವಾಸರ ಯಶೋಧರಾ ನಾಟಕದಿಂದ ‘ಜಯಗೀತೆ, ವಿ.ಸೀ. ಅವರ ದೀಪಗಳು ಕವನ ಸಂಗ್ರಹದಿಂದ ಮಹಾತ್ಮ, ಕೆ.ವಿ.ಪುಟ್ಟಪ್ಪನವರ ಪಾಂಚಜನ್ಯ ಕವನ ಸಂಗ್ರಹದಿಂದ ಬುದ್ಧದೇವ, ಪುತಿನ ಅವರ ಹಣತೆ ಕವನ ಸಂಕಲನದಿಂದ ಬುದ್ಧ, ಶಿವರಾಮ ಕಾರಂತರ ಬೌದ್ಧಯಾತ್ರಾ ಕಾವ್ಯದಿಂದ ಬೋಧಿ ವೃಕ್ಷ, ತಿರುಮಲೆ ತಾತಾಚಾರ್ಯರ ದೇಶೀಯ ವಿದ್ಯಾಶಾಲಾ ಪತ್ರಿಕೆಯಿಂದ ಜಗಜ್ಯೋತಿ, ಕುಂದದಾ ನಂದ, ಬಾವಿಯ ಬಳಿಯ ಬಾಲೆ ಹಾಗೂ ಉರಿವ ಮನೆ , ಎಂ.ಆರ್. ಶ್ರೀನಿವಾಸ ಮೂರ್ತಿಗಳ ಕೃತಿಯಿಂದ ತಥಾಗತ, ಗೋವಿಂದ ಪೈ ಅವರ ಗಿಳಿವಿಂಡು ಕವನ ಸಂಗ್ರಹದಿಂದ ಮಹಾತ್ಮರ ಉಪವಾಸ, ಅಂಬಿಕಾತಯನ ದತ್ತರ ಬುದ್ಧಮೂರ್ತಿಯ ಅಮೃತಸ್ಮಿತ ಕವನಗಳು ಹಾಗೂ ಲೇಖನಗಳು ಹೀಗೆ ಕನ್ನಡ ನಾಡಿನ ವಿವಿಧ ಕವಿಗಳ- ಲೇಖಕರ ಕವನಗಳನ್ನು ಹಾಗೂ ಲೇಖನಗಳನ್ನು ಇಲ್ಲಿ ಸಂಗ್ರಹಿಸುವ ಮೂಲಕ ಲೇಖಕರು ಬುದ್ಧನಿಗೆ ಕನ್ನಡಿಗರ ಕಾಣಿಕೆ ಸಲ್ಲಿಸಿದ್ದಾರೆ.

About the Author

ಜಿ.ಪಿ. ರಾಜರತ್ನಂ
(05 December 1904 - 13 March 1979)

ಆಡುಮಾತಿನ ಪದಗಳ ಬಳಕೆಯ ‘ರತ್ನನ ಪದಗಳು’ ಮೂಲಕ ಜನಪ್ರಿಯರಾಗಿದ್ದ ಜಿ.ಪಿ. ರಾಜರತ್ನಂ ಅವರು ಕನ್ನಡ ಸಾಹಿತ್ಯದ ಪರಿಚಾರಿಕೆಗೂ ಹೆಸರಾಗಿದ್ದರು. ರಾಜರತ್ನಂ ಅವರು ಜನಿಸಿದ್ದು ಬೆಂಗಳೂರು ಜಿಲ್ಲೆಯ ರಾಮನಗರದಲ್ಲಿ 1908ರ ಡಿಸೆಂಬರ್ 8 ರಂದು. ತಂದೆ ಜೆ.ಪಿ. ಗೋಪಾಲಕೃಷ್ಣಯ್ಯಂಗಾರ್. ರಾಜರತ್ನಂ ಅವರು ಮೈಸೂರಿನಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಮತ್ತು ಮೈಸೂರು ಮಹಾರಾಜ ಕಾಲೇಜಿನಲ್ಲಿ ಎಂ.ಎ. ಪದವಿ ಗಳಿಸಿದರು. ಅನಂತರ ಮೈಸೂರು, ತುಮಕೂರು, ಶಿವಮೊಗ್ಗ, ಬೆಂಗಳೂರು ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು 1964ರಲ್ಲಿ ನಿವೃತ್ತರಾದ ಮೇಲೆ ಯುಜಿಸಿ ಉಪಾಧ್ಯಾಯರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು. ಕವಿ, ...

READ MORE

Related Books