ಜನನಿ

Author : ವಿರೂಪಾಕ್ಷ ಬೆಳವಾಡಿ

Pages 168

₹ 170.00




Year of Publication: 2020
Published by: ಸಾಹಿತ್ಯಲೋಕ ಪಬ್ಲಿಕೇಷನ್ಸ್
Address: # 745, 12 ನೇ ಮುಖ್ಯ ರಸ್ತೆ, 3 ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು - 560 010
Phone: 9945939436

Synopsys

`ಜನನಿ’ ತಾಯ ಗರ್ಭದಿಂದ ಭೂಗರ್ಭದವರೆಗೆ ಕೃತಿಯು ವಿರೂಪಾಕ್ಷ ಬೆಳವಾಡಿ ಅವರ ಲೇಖನಸಂಕಲನವಾಗಿದೆ. ಅಮ್ಮ ಎಂಬ ಶಬ್ಧವೇ ಹಾಗೆ ಶರೀರದಲ್ಲಿ ಒಂದು ವಿದ್ಯುತ್ ಸಂಚಲನವನ್ನೇ ಮಾಡುತ್ತದೆ. ಅಮ್ಮ ಎಂಬ ಶಬ್ಧಕ್ಕೆ ಸರಿಸಾಟಿ ಮತ್ತೊಂದಿಲ್ಲ. ಅಮ್ಮ ಸಂಸಾರದ ಪ್ರತೀಕ. ಮೊದಲ ಗುರು, ಮೊದಲ ಸ್ನೇಹಿತೆ. ತನ್ನ ಕಂದನಿಗಾಗಿ ತನ್ನ ಯೌವನವನ್ನು ಮತ್ತು ಕನಸುಗಳನ್ನು ಮರೆತವಳು. ಜೀವನ ನೆಡೆಸಿದವಳು. ಇವಳು ನನಗೆ ಮೊದಲನೇಯ ತಾಯಿಯಾದರೆ ಗೋಮಾತೆ ನಮ್ಮೆಲ್ಲರ ಎರಡನೆಯ ತಾಯಿ. ಹಾಗೆಯೇ ಗಂಗಾಮಾತೆ ನಮ್ಮ ಮೂರನೆಯ ತಾಯಿ. ಭೂತಾಯಿ ನಮ್ಮ ನಾಲ್ಕನೆಯ ತಾಯಿ. ಹೀಗೆ ತಾಯಿ ಗರ್ಭದಿಂದ ಜನಿಸಿ ಭೂಗರ್ಭವನ್ನು ಹೇರುವವರೆಗೆ ಈ ನಾಲ್ಕು ಜನ ತಾಯಿಯಂದಿರ ಆಶ್ರಯದಲ್ಲಿ ನಾವು ಬದುಕನ್ನು ಕಟ್ಟಿಕೊಳ್ಳುತ್ತೇವೆ ಎಂದು ಕೃತಿಯಲ್ಲಿ ತಿಳಿಸಲಾಗಿದೆ.

About the Author

ವಿರೂಪಾಕ್ಷ ಬೆಳವಾಡಿ

ವಿರೂಪಾಕ್ಷ ಬೆಳವಾಡಿ, ಚಿಕ್ಕಮಗಳೂರು ಜಿಲ್ಲೆ ಬೆಳವಾಡಿಯವರು. ಸುಮಾರು 25 ವರ್ಷಗಳಿಂದ ಯೋಗಕ್ಷೇತ್ರದಲ್ಲಿದ್ದು ನಾಡಿನಾದ್ಯಂತ ಯೋಗದ ಮೂಲಕ ಆರೋಗ್ಯವೃದ್ಧಿಗೆ ಶ್ರಮಿಸುತ್ತಿದ್ದಾರೆ. ಯೋಗಕ್ಷೇಮ ಎಂಬ ಸಂಸ್ಥೆಯ ಮೂಲಕ ಯೋಗ ಶಿಬಿರಗಳನ್ನು ನಡೆಸುತ್ತಿದ್ದು, ಸೂರ್ಯೋಪಾಸನೆ, ಸಂಸ್ಕಾರ ಸಿಂಚನ ,ಜನನಿ, ಸಾಧನಗಳೊಂದಿಗೆ ಯೋಗಸಾಧನೆ ಎಂಬ 7 ಕೃತಿಗಳನ್ನು ರಚಿಸಿದ್ದಾರೆ. ಸಾಹಿತ್ಯಲೋಕ ಪಬ್ಲಿಕೇಷನ್ಸ್‌ನಿಂದ ಸಾವಿರದ ಸತ್ಯ ,ಜನನಿ,ಆತ್ಮದರ್ಶನ ಎಂಬ 3 ಪುಸ್ತಕಗಳು ಪ್ರಕಟವಾಗಿವೆ.  ವಿಜಯ ಕರ್ನಾಟಕ ಪತ್ರಿಕೆಯಲ್ಲಿ "ಡೈಲಿಯೋಗ" ಎಂಬ  ಹೆಸರಿನ ಯೋಗಕ್ಕೆ ಸಂಬಂಧಿಸಿದಂತೆ 650ಕ್ಕೂ ಹೆಚ್ಚು ಅಂಕಣಗಳನ್ನು ಬರೆದಿದ್ದು, ಇವರ ಯೋಗಸಾಧನೆ ಗುರುತಿಸಿ 2018ರಲ್ಲಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಹಾಗೂ ನಾಡ ಭೂಷಣ ಪ್ರಶಸ್ತಿ ಲಭಿಸಿದೆ. ...

READ MORE

Related Books