ಮನೋವಿಜ್ಞಾನದಲ್ಲಿ ಸಾಕಷ್ಟು ಪುಸ್ತಕಗಳು ಲಭ್ಯವಿದ್ದರೂ, ಇ-ಬುಕ್ ಮತ್ತು ಹಾರ್ಡ್ ಕಾಪಿ ಬುಕ್ ಸ್ವರೂಪದಲ್ಲಿ ಇಂಡಿಯನ್ ಸೈಕಾಲಜಿ / ಸೈಕಾಲಜಿ ಆಫ್ ಇಂಡಿಯಾ / ಭಾರತೀಯ ಮತ್ತು ಪಾರಮಾರ್ಥಿಕ ಮನೋವಿಜ್ಞಾನ ಮತ್ತು ಕುರಿತು ಹೆಚ್ಚಿಗೆ ಕೃತಿ ಇಲ್ಲ. ಪ್ರಸ್ತುತ ಪುಸ್ತಕವು ಅಂತಹ ಕಲ್ಪನೆಗಳು ಮತ್ತು ಪರಿಕಲ್ಪನೆಗಳನ್ನೊಳಗೊಂಡ ಭಾರತೀಯ ಮತ್ತು ಪಾರಮಾರ್ಥಿಕ ಮನೋವಿಜ್ಞಾನದ ಪುಸ್ತಕ, ಸಾಮಾನ್ಯ ವಿದ್ಯಾರ್ಥಿಗಳು, ತತ್ವಶಾಸ್ತ್ರದ ಹರಿಕಾರ ವಿದ್ಯಾರ್ಥಿಗಳು ಮತ್ತು ಸಾಮಾನ್ಯರು, ಸಾಮರಸ್ಯದ ಜೀವನವನ್ನು ನಡೆಸಲು; ಹಾಗು ಆಸಕ್ತಿ ಹೊಂದಿರುವ ಎಲ್ಲಾ ಜನರಲ್ಲಿ ಅದ್ಯಾತ್ಮಿಕ-ವೈಜ್ಞಾನಿಕ ಜ್ಞಾನ ಬಿತ್ತನೆ ಮಾಡುವ ಪ್ರಯತ್ನವಾಗಿದೆ. ಪ್ರಸ್ತುತ ಕೆಲಸವು ತುಂಬಾ ಸರಳವಾಗಿದೆ ಮತ್ತು ಸ್ಥಳೀಯ ತತ್ವಶಾಸ್ತ್ರ, ನಡವಳಿಕೆ ಮತ್ತು ಅರಿವಿನ ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳಲು ಮನೋವಿಜ್ಞಾನ ಮತ್ತು ತತ್ವ ಶಾಸ್ತ್ರ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಪ್ರಯತ್ನಿಸುತ್ತದೆ ಅಲ್ಲದೆ ಮನೋವಿಜ್ಞಾನ ಮತ್ತು ತತ್ವಶಾಸ್ತ್ರದ ಪದವೀಧರ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಪಠ್ಯಕ್ರಮದ ಹೆಚ್ಚಿನ ವಿಷಯಗಳನ್ನು ಒಂದು ನೋಟದಲ್ಲಿ ಒಳಗೊಂಡಿದೆ.
ವಿನಯ್ ಕುಮಾರ್ ವಿ ನಾಯಕ್ ಇವರು ಸ್ಪರ್ಶ ಕ್ರಿಯೇಷನ್ಸ್, ದತ್ತಾತ್ರೇಯ ಫಿಲ್ಮ್ಸ್, rrprime.com (ಒಟಿಟಿ), ಕ್ರಾಂತಿ ಸ್ಪರ್ಶ ಟಿ.ವಿ ಮತ್ತು ಫೈವ್ ಲೇಯರ್ಸ್ ಆಪ್ತ ಸಮಾಲೋಚನಾ ಕೇಂದ್ರದ ಮಾಲೀಕರಾಗಿದ್ದು, ಇಂಡಿಯನ್ ಲಿಬೆರಲ್ ಅಂಡ್ ರೇವಲ್ಯೂಷನರಿ ಸಿಟಿಜನ್ಸ್ ಆಫ್ ಕರ್ನಾಟಕ (ರಿ) ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ಪ್ರತಿಭಟನೆ’ ಕನ್ನಡ ಮಾಸಿಕ ಸುದ್ದಿ ಪತ್ರಿಕೆಯ ಉಪ ಸಂಪಾದಕರಾಗಿದ್ದಾರೆ. ಅಲ್ಲದೆ, ದೌರ್ಜನ್ಯ ತಡೆ, ಜಾಗೃತಿ ಮತ್ತು ಉಸ್ತುವಾರಿ ಸಮಿತಿ (ಕರ್ನಾಟಕ ಸರ್ಕಾರ)ಯ ಮಾಜಿ ಸದಸ್ಯರೂ ಹೌದು. ಕೃತಿಗಳು: ಭಾರತೀಯ ಮತ್ತು ಪಾರಮಾರ್ಥಿಕ ಮನೋವಿಜ್ಞಾನ ...
READ MORE