ಅಂಕಣ

Author : ನಿರಂಜನ

Pages 544

₹ 20.00




Published by: ಕನಾಟಕ ಸಹಕಾರೀ ಪ್ರಕಾಶನ ಮಂದಿರ,
Address: ನಿಯಮಿತ ಚಾಮರಾಜಪೇಟೆ ಬೆಂಗಳೂರು

Synopsys

‘ಅಂಕಣ’ ಕೃತಿಯು ನಿರಂಜನ ಅವರ ಸಂಪಾದಿತ 205 ಅಂಕಣಗಳ ಸಂಗ್ರಹವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ: ಖ್ಯಾತ ಕನ್ನಡ ದಿನಪತ್ರಿಕೆಯಾದ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ 1962-66ರ ನಾಲ್ಕು ವರ್ಷಗಳ ಅವಧಿಯಲ್ಲಿ ನಿರಂಜನ ಅವರು ಬರೆದ ‘ಬೇವು ಬೆಲ್ಲ’ ಅಂಕಣಗಳ ಸಂಕಲನ ಈ ಕೃತಿ. ‘ಪ್ರಜಾವಾಣಿ’ ಯಲ್ಲಿ ಆ ಬರೆಹಗಳ ಪ್ರಕಟಣೆಗೆ ಕಾರಣರಾದ ಸಂಪಾದಕ ಟಿ.ಎಸ್. ರಾಮಚಂದ್ರರಾವ್. ಈ ಅಂಕಣವನ್ನು ಲೇಖಕರಿಂದ ಬರೆಸಿದ್ದು ಎಂ.ಬಿ.ಸಿಂಗ್ ಅವರು ಹಾಗೂ ಗ್ರಂಥರೂಪದಲ್ಲಿ ಪ್ರಕಟಿಸುತ್ತಿರುವವರು ಕರ್ನಾಟಕ ಸಹಕಾರೀ ಪ್ರಕಾಶನ ಮಂದಿರದವರು. ಇಲ್ಲಿನ ರಕ್ಷಾಚಿತ್ರವನ್ನು ಬರೆದು ಕೊಟ್ಟಿರುವ ಹೆಸರಾಂತ ವ್ಯಂಗ್ಯ ಚಿತ್ರಕಾರ ಮೂರ್ತಿ, ಲೇಖನಗಳನ್ನು ಕಲೆಹಾಕಿ ಅಣಿಗೊಳಿಸಲು ನೆರವಾದ ಪ್ರಜಾವಾಣಿಯ ಸುಶೀಲಾ ಕೊಪ್ಪರ ಮತ್ತು ರಾಜಾ ಶೈಲೇಶ ಚಂದ್ರಗುಪ್ತ, ಅಂದವಾಗಿ ಮುದ್ರಿಸಿದ್ದು ಬಿ.ಎಸ್ ಹನುಂತೇಗೌಡ ಅವರು ಎಂದಿದೆ.

About the Author

ನಿರಂಜನ
(15 June 1924 - 12 March 1992)

ಕನ್ನಡದ ಪ್ರತಿಭಾವಂತ ಲೇಖಕ, ಖ್ಯಾತ ಬರಹಗಾರ ನಿರಂಜನ ಅವರು ಹುಟ್ಟಿದ್ದು 15-06-1924ರಂದು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇಸುಬ್ರಹ್ಮಣ್ಯದ ಸಮೀಪದ ಕುಳಗುಂದದಲ್ಲಿ. ತಾಯಿ ಚೆನ್ನಮ್ಮ. ಸುಳ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದು. ನೀಲೇಶ್ವರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಖ್ಯಾತ ವೈದ್ಯೆ, ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ವಿವಾಹವಾದರು.    ನಿರಂಜನ ಅವರು ಒಬ್ಬ ಖ್ಯಾತ ಬರಹಗಾರ ಹಾಗೂ ಹೋರಾಟಗಾರ. ಅವರ ಮೊದಲ ಹೆಸರು ಕುಳಕುಂದ ಶಿವರಾಯ. ಅವರು 20ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ...

READ MORE

Related Books