‘ಕೊಂಕಣ್ಯಾಲಿ ಕಾವಿಕಲಾ’ ಕೃತಿಯು ಕೃಷ್ಣಾನಂದ ಕಾಮತ್ ಅವರ ಕಲೆಯ ಕುರಿತ ಸಂಸ್ಕೃತಿಯನ್ನು ಅನಾವರಣಗೊಳಿಸುವ ಬರವಣಿಗೆಯಾಗಿದೆ. ಈ ಕೃತಿಯು 12 ಅಧ್ಯಾಯಗಳನ್ನು ಒಳಗೊಂಡಿದ್ದು, ಮಾಂಡಾವಳ, ಕೊಂಕಣಿ ದೆವಳಾಂಚೆ ಕಾಲಮಾನ, ಕಾವಿಚಿತ್ರಾಮಚಿ ಮಾದರಿ, ಆಭಾರ ಸ್ಮರಣ, ಚಿತ್ರಾಂಚಿ ಮಾಂಡವಳ, ದೋನ ಉತ್ರಾಂ, ಕೊಂಕಣ್ಯಾಲಿ ಕಾವಿಕಲಾ, ಕಾವಿಚಿತ್ರ ಖೈಂ ಖೈಯ್ ಆಸ್ಸತಿ?, ಚಿತ್ರ ಸೊಡೊಂವಚೆ ವಿಧಾನ, ನಕ್ಷೆ, ಚಿತ್ರ, ದಾರಲ್ಯಾಲೆ ಚಿತ್ರಣ, ಹೊಸಾಡ ಶೈಲಿ, ಬಾಯಲಾಂಗಲೆ ಚಿತ್ರಣ, ಪಶು-ಪಕ್ಷಿ ಚಿತ್ರಣ, ಫುಲ, ಪಾನ, ಝಾಡ, ದರವಾನ್, ಮೂಲ ಆನಿ ವಿಕಾಸ, ಸರ್ವನಾಶ ಜಾತ್ತೇರಿ ಆಸ್ಸ, ಲೇಖಕಾನ ಕಾದಿಕಲೆಚೆರ ಪ್ರಕಟ ಕೆಲ್ಲಿ ಲೇಖನ ಆನಿ ಪುಸ್ತಕಾ, ಲೇಖಕಾಲೊ ಪರಿಚಯಡಿಯಲ್ಲಿ ಈ ಕೃತಿಯು ವಿಚಾರವಂತಿಕೆಯನ್ನು ಪ್ರಸ್ತಾಪಿಸುತ್ತದೆ.
ಖ್ಯಾತ ಸಾಹಿತಿ ಹಾಗೂ ವಿಜ್ಞಾನಿಯಾದ ಕೃಷ್ಣಾನಂದ ಕಾಮತ್ ಅವರು 1934ರ ಸೆಟ್ಪಂಬರ್ 29 ರಂದು ಜನಿಸಿದರು. ಊರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ. ತಂದೆ ಲಕ್ಷ್ಮಣ ವಾಸುದೇವ ಕಾಮತ್, ತಾಯಿ ರಮಾಬಾಯಿ. ಕನ್ನಡದಲ್ಲಿ ಅನೇಕ ವೈಜ್ಞಾನಿಕ ಕೃತಿಗಳನ್ನು ರಚಿಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕೀಟ ವಿಜ್ಞಾನದಲ್ಲಿ ಎಂಎಸ್ಸಿ ಪದವಿ, ಅಮೇರಿಕಾದ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಪರಿಸರ ಮತ್ತು ಅರಣ್ಯ ವಿಜ್ಞಾವ ವಿಷಯದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ರಾಜಸ್ಥಾನದ ಉದಯಪುರ ವಿಶ್ವವಿದ್ಯಾಲಯದ ಜಾಬ್ನೇರ ಕೃಷಿ ಕಾಲೇಜಿನಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಪಶ್ಚಿಮ ಬಂಗಾಳದ ಪ್ಲಾಸಿಯಲ್ಲಿ ಕಾಮನ್ ವೆಲ್ತ್ ಇನ್ಸ್ಟಿಟ್ಯೂಟ್ ...
READ MORE