ಇಂಗ್ಲಿಷ್ ಸ್ವರ್ಗಕ್ಕೆ ದಾರಿಯಲ್ಲ

Author : ಕೆ. ಸತ್ಯನಾರಾಯಣ

Pages 143

₹ 120.00




Year of Publication: 2021
Published by: ಸಪ್ನ ಬುಕ್ ಹೌಸ್
Address: #11, 3ನೇ ಮುಖ್ಯ ರಸ್ತೆ, ಗಾಂಧಿನಗರ, ಬೆಂಗಳೂರು-560009
Phone: 40114455

Synopsys

‘ಇಂಗ್ಲಿಷ್ ಸ್ವರ್ಗಕ್ಕೆ ದಾರಿಯಲ್ಲ’ ಕೃತಿಯು ಕೆ. ಸತ್ಯನಾರಾಯಣ ಅವರ ಕನ್ನಡದಲ್ಲಿ ಕಲಿಯುವ ಕಲಿಸುವ ಬಗ್ಗೆ ಇರುವ ಆತಂಕ, ಪೂರ್ವಗ್ರಹಗಳ ಕುರಿತ ಲೇಖನಗಳ ಸಂಕಲನವಾಗಿದೆ. ಈ ಕೃತಿಯು 19 ಅಧ್ಯಾಯಗಳನ್ನು ಒಳಗೊಂಡಿದೆ. ಇಂಗ್ಲಿಷ್ ಸ್ವರ್ಗಕ್ಕೆ ದಾರಿಯಲ್ಲ, ಆಕಾಂಕ್ಷೆಯ ಭಾಷೆಯಾಗಿ ಕನ್ನಡ, ಕನ್ನಡದ ನಿನ್ನೆಗಳು, ಕನ್ನಡದ ಪ್ರಶ್ನೆಗಳು- ಸಮುದಾಯ ಶೋಧ, ಇಂಗ್ಲಿಷ್ ಕನ್ನಡದ ಸಂಕೀರ್ಣತೆ, ಇಂಗ್ಲಿಷ್ ಗೌಡರು ಎಂಬ ಭಯವು, ಭಾಷೆಯ ದುಸ್ಥಿತಿಯ ಹಲವು ನೆಲೆಗಳು, ಒಂದನೇ ಕ್ಲಾಸಿಗೆ ಹೋಗುವ ಮುಂಚೆ, ಬೊಂಬೆ ಲೋಕದಿಂದಾಚೆಗೆ, ಅಮೆರಿಕಾದಲ್ಲಿ ಕನ್ನಡ, ದಾಂಪತ್ಯದ ಭಾಷಾಶಾಸ್ತ್ರ, ನೆಹರೂ ಎಂಬ ಗೌಡರು, ಖಾದ್ರಿಯವರ ಇಂಗ್ಲಿಷ್ ಪ್ರೀತಿಗೆ ಜೈ, ಕ್ಲೋಸ್ ಪೇಟೆ ಅಯ್ಯನವರ ಇಂಗ್ಲಿಷ್ ಗೀಳು, ವಲಸಿಗರ ಮಕ್ಕಳ ಹಕ್ಕು, ತಾಯಿನುಡಿ, ಮಲತಾಯಿ ನುಡಿ ಮತ್ತು, ಹನ್ನೊಂದು ಜೀವನ ಸಂದರ್ಭಗಳು, ನಿಜವಾದ ಪ್ರಶ್ನೆಗಳು ಇವೆಲ್ಲವುಗಳನ್ನು ಒಳಗೊಂಡಿದೆ.

ಕೃತಿಯಲ್ಲಿ ಕೆಲವೊಂದು ವಿಚಾರಗಳನ್ನು ಲೇಖಕರು ಹೀಗೆ ಹಂಚಿಕೊಂಡಿದ್ದಾರೆ : ಕೇಂದ್ರ ಸರಕಾರದ ಸೇವೆಯಲ್ಲಿದ್ದುದರಿಂದ ನನಗೆ ಬೇರೆ ಬೇರೆ ಭಾಷೆಗಳ ರಾಜ್ಯಗಳ ಸಹೋದ್ಯೋಗಿಗಳಿದ್ದಾರೆ. ಇವರಲ್ಲಿ ಎಲ್ಲರೂ ಅಲ್ಲದಿದ್ದರೂ ಬಹುಪಾಲು ಜನ ನಾನು ಪಡೆದಿದ್ದ ಶೈಕ್ಷಣಿಕ ವಾತಾವರಣವನ್ನೆ ಹೊಂದಿದ್ದವರು. ಇವರೆಲ್ಲ ನಂತರ ಇಂಗ್ಲಿಷ್ ಕಲಿತವರು. ಸರಿಯಾಗಿ ಕಲಿತವರು. ಉನ್ನತ ಸ್ಥಾನಮಾನಗಳನ್ನು ತಲುಪಿದವರು. ಇಂಗ್ಲಿಷ್ ಭಾಷೆಯನ್ನಿರಲಿ, ಆಂಗ್ಲ ಜೀವನ ಶೈಲಿಯನ್ನು ಅನುಕರಿಸಿ, ಇಂಗ್ಲಿಷನ್ನು ದೈವಭಾಷೆಯ ಸ್ಥಾನಕ್ಕೆ ಏರಿಸಿ, ನಮ್ಮಲ್ಲಿ ಭಯ, ಆತಂಕ ಮೂಡಿಸುತ್ತಿದ್ದ ಶಿಕ್ಷಕ ಸಾಮಾಜಿಕ ಗಣ್ಯರೂ ಕೂಡ ಇದ್ದರು. ಇದೆಲ್ಲ ಬಹುಪಾಲು ದೇಶಗಳು ಎದುರಿಸಿದ ಸಮಸ್ಯೆ. ಆದರೆ ಭಾಷಾ ಮಾಧ್ಯಮದ ಪ್ರಶ್ನೆಗೆ ಇದೇ ಉತ್ತರ. ಇದೊಂದೇ ಸರಿಯಾದ ಉತ್ತರ ಎಂಬುದಿಲ್ಲ ಎಂದು. ಬ್ರಿಟಿಷ್ ಕೌನ್ಸಿಲ್ ನವರು ನಡೆಸಿದ ಸಂಶೋಧನೆಯೇ ಸಾರಿದೆ’ ಎಂದಿದ್ದಾರೆ.

About the Author

ಕೆ. ಸತ್ಯನಾರಾಯಣ
(21 April 1954)

ಕೆ.ಸತ್ಯನಾರಾಯಣ ಅವರು ಹುಟ್ಟಿದ್ದು 1954 ಏಪ್ರಿಲ್ 21 ರಂದು. ಮಂಡ್ಯ ಜಿಲ್ಲಾ ಮದ್ದೂರು ತಾಲೋಕು ಕೊಪ್ಪ ಗ್ರಾಮದಲ್ಲಿ. 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ(ಸುವರ್ಣ ಪದಕದೊಂದಿಗೆ). 1978ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ.  1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ(ಏಪ್ರಿಲ್ 2014ರಲ್ಲಿ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾಗಿ, ಬೆಂಗಳೂರು) ನಿವೃತ್ತಿ.  ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ...

READ MORE

Related Books