ಬೆಳಗಿನ ಬೆರಗು

Author : ಜಿ.ಎನ್. ಮಲ್ಲಿಕಾರ್ಜುನ

Pages 180

₹ 75.00




Year of Publication: 2004
Published by: ಲೋಹಿಯಾ ಪ್ರಕಾಶನ
Address: ಬಳ್ಳಾರಿ

Synopsys

‘ಬೆಳಗಿನ ಬೆರಗು’ ಲೇಖಕ ಜಿ.ಎನ್. ಮಲ್ಲಿಕಾರ್ಜುನ ಅವರ ಲೇಖನಗಳ ಸಂಕಲನ. ಹೊಸ ಪ್ರಸ್ತುತತೆಯ ನೆಲೆಯಲ್ಲಿ ಇಲ್ಲಿಯ ಲೇಖನಗಳು ರಚಿತವಾಗಿವೆ. ರಾಜಕಾರಣ, ಆಡಳಿತಗಾರರ ತರ್ಕಗಳನ್ನು ಜನಸಾಮಾನ್ಯರಿಗೆ ಅರ್ಥೈಸುವ ಸಲುವಾಗಿಯೇ ಲೇಖಕರು ಸರಳ ಭಾಷೆಯಲ್ಲಿ ಆಡಳಿತ ವ್ಯವಸ್ಥೆಯ ಲೋಪದೋಷಗಳನ್ನು ಇಲ್ಲಿ ದಾಖಲಿಸಿದ್ದಾರೆ.

About the Author

ಜಿ.ಎನ್. ಮಲ್ಲಿಕಾರ್ಜುನ

. ...

READ MORE

Reviews

ಹೊಸತು-2004- ಡಿಸೆಂಬರ್‌

ಇಂದಿನ ಜಾಗತಿಕ ವಿದ್ಯಮಾನಗಳನ್ನು ಅವಲೋಕಿಸಿ ಚರ್ಚಿಸುವ ಗಂಭೀರ ಲೇಖನಗಳು, ಆರ್ಥಿಕ ಸುಧಾರಣೆ ಮತ್ತು ಸಮಾಜವಾದದ ಬಗ್ಗೆ ವಿಶೇಷ ಭರವಸೆಯನ್ನಿಟ್ಟುಕೊಂಡು ರೂಪಿತವಾದ ಇವು ಪ್ರಸಕ್ತ ಜಾಗತೀಕರಣದ ಸೋಲು ಗೆಲವುಗಳ ಹಿನ್ನೆಲೆಯಲ್ಲಿ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿವೆ. ಒಂದು ರಾಷ್ಟ್ರದ ಅಭಿವೃದ್ಧಿಯು ಸರಕಾರಗಳು ಕೈಗೆತ್ತಿಕೊಳ್ಳುವ ಮುಂದಾಲೋಚನೆಯ ಕಾರ್ಯಚಟುವಟಿಕೆಗಳನ್ನು ಅವಲಂಬಿಸಿರುವುದರಲ್ಲಿ ಎರಡು ಮಾತಿಲ್ಲ. ಅಭಿವೃದ್ಧಿಯ ದಾರಿಗೆ ಒಂದೇ ಒಂದು ಹೆಬ್ಬಾಗಿಲು ಎಂದು ಪ್ರಚಾರ ಗಿಟ್ಟಿಸಿಕೊಂಡ ಜಾಗತೀಕರಣ ಪ್ರಕ್ರಿಯೆ ನಮ್ಮ ದೇಶದ ಸಂದರ್ಭದಲ್ಲಿ ಕೆಲವೇ ಮಂದಿ ಉದ್ಧಾರವಾಗಿ ಕೆಳಸ್ತರದ ಬಡವರ ಪಾಲಿಗೆ ಅಸಹನೀಯ ಬದುಕನ್ನು ನೀಡಿದ್ದು ಹೇಗೆಂಬ ಶೋಧನೆಯ ಪ್ರಯತ್ನ ಮಾಡಲಾಗಿದೆ. ಜಗತ್ತಿನಾದ್ಯಂತ ನಡೆಯುತ್ತಿರುವ ಘಟನೆಗಳನ್ನಾಧರಿಸಿ ಬರೆಯಲಾಗಿದೆ.

Related Books