ಅಭಿವೃದ್ದಿ ವಾಸ್ತವ ಮತ್ತು ವಿಕಲ್ಪ

Author : ಉದಯ ಕುಮಾರ ಇರ್ವತ್ತೂರು

Pages 172




Year of Publication: 2007
Published by: ದಾಮಿನಿ ಸಾಹಿತ್ಯ
Address: 559, 9ನೆ ಮುಖ್ಯ ರಸ್ತೆ, ವಿಜಯ ನಗರ ಬೆಂಗಳೂರು- 560001

Synopsys

ಲೇಖಕ ಡಾ. ಉದಯ ಕುಮಾರ ಇರ್ವತ್ತೂರು ಅವರ ವಿಮರ್ಶಾತ್ಮಕ ಕೃತಿ ʻಅಭಿವೃದ್ಧಿ ವಾಸ್ತವ ಮತ್ತು ವಿಕಲ್ಪʼ. ಪುಸ್ತಕದ ಬೆನ್ನುಡಿಯಲ್ಲಿ ಡಾ. ತೀ.ನಂ. ಶ್ರೀಧರ ಅವರು, “ನಮ್ಮ ದೇಶದ ಅಭಿವೃದ್ಧಿ, ಆರ್ಥಿಕ ನೀತಿ, ಜಾಗತೀಕರಣ, ಉದಾರೀಕರಣ ಇತ್ಯಾದಿ ವಿಷಯಗಳ ಬಗ್ಗೆ ಕನ್ನಡದಲ್ಲಿ ಶಿಸ್ತಿನ ಹಾಗೂ ವಿಮರ್ಶಾತ್ಮಕ ಬರವಣಿಗೆಯ ಕೊರತೆಯಿರುವ ಸದ್ಯದ ಪರಿಸ್ಥಿತಿಯಲ್ಲಿ ಅಂತರ್ ಶಿಸ್ತೀಯ ನೆಲೆಯಲ್ಲಿ ಉದಯಕುಮಾರ್ ಅವರು ಬರೆದಿರುವ ಈ ಮಸ್ತಕ ಅತ್ಯಂತ ಸ್ವಾಗತಾರ್ಹವಾದದ್ದು. ಅಭಿವೃದ್ಧಿ ಚರ್ಚೆಗಳ ಬಗ್ಗೆ ಕನ್ನಡದಲ್ಲಿ ನಿರಂತರವಾಗಿ ಬರೆಯುತ್ತಿರುವ ಉದಯಕುಮಾರ್ ಅವರು ಕನ್ನಡದ ಓದುಗರಿಗೆ ಚಿರಪರಿಚಿತರು. ಇದರಲ್ಲಿ ತೊಂಬತ್ತರ ದಶಕದ ಆರಂಭದಲ್ಲಿ ಭಾರತ ರೂಪಿಸಿದ ಹೊಸ ಆರ್ಥಿಕ ನೀತಿ, ಅದರ ತಾತ್ವಿಕ ನೆಲೆಗಟ್ಟುಗಳು ಮತ್ತು ನಮ್ಮ ಸಮಾಜದ ಹತ್ತು ಹಲವು ಕ್ಷೇತ್ರಗಳ ಮೇಲೆ ಈ ಆರ್ಥಿಕ ನೀತಿಯು ಬೀರಿದ ಪರಿಣಾಮಗಳನ್ನು ಅತ್ಯಂತ ಸರಳವಾಗಿ ಆದರೆ ಅಷ್ಟೆ ಶಿಸ್ತುಬದ್ಧವಾಗಿ ಚರ್ಚಿಸಿದ್ದಾರೆ. ಪಶ್ಚಿಮ ರಾಷ್ಟಗಳ 'ಅಭಿವೃದ್ಧಿ' ಅನುಭವಗಳಿಂದ ಮೂಡಿಬಂದ ಅಭಿವೃದ್ಧಿಯ ಬಗೆಗಿನ ಪ್ರಭಾವೀ ಚರ್ಚೆಗಳು ಮತ್ತು ವ್ಯಾಖ್ಯಾನಗಳು ಏಕಮುಖ ಧೋರಣೆಯಿಂದ ಬಡ ಹಾಗೂ ಹಿಂದುಳಿದ ದೇಶಗಳ ಅಭಿವೃದ್ಧಿಯನ್ನು ಅರಿಯುವ ಹಾಗೂ ರೂಪಿಸುವ ಪ್ರಯತ್ನವನ್ನಿಂದು ನಾವು ಕಾಣುತ್ತಿದ್ದೇವೆ. ಇಂತಹ ಧೋರಣೆಯಿಂದ ರೂಪಿತವಾದ ಆರ್ಥಿಕ ಅಭಿವೃದ್ಧಿ ನೀತಿ ಮತ್ತು ಕಾರ್ಯಕ್ರಮಗಳು ಹಿಂದುಳಿದ ದೇಶಗಳ ಸಾಮಾಜಿಕ ವ್ಯವಸ್ಥೆ ಮತ್ತು ವಿನ್ಯಾಸದ ಸ್ವರೂಪದಲ್ಲಿ ಅವಶ್ಯವಾಗಿ ಆಗಬೇಕಾದ ಮೂಲಭೂತ ಬದಲಾವಣೆಗಳ ವಿಷಯಗಳನ್ನು ಅವು ಉದ್ದೇಶಪೂರ್ವಕವಾಗಿ ಮರೆಮಾಚುತ್ತಿವೆ. ನಾವಿದನ್ನು ತೊಂಬತ್ತರ ದಶಕದಲ್ಲಿ ಭಾರತದಲ್ಲಿ ರೂಪುಗೊಂಡ ಅಭಿವೃದ್ದಿ ಕಲ್ಪನೆ ಮತ್ತು ಹೊಸ ಆರ್ಥಿಕ ನೀತಿಯಲ್ಲಿ ಕಾಣುತ್ತೇವೆ. ಈ ವಿಷಯಗಳನ್ನು ಉದಯಕುಮಾರ್ ಅವರು ತಮ್ಮ ಭಾರತದ ಅಭಿವೃದ್ಧಿ ಹಾಗೂ ಹೊಸ ಆರ್ಥಿಕ ನೀತಿಯ ಮೇಲಿನ ಬರಹಗಳಲ್ಲಿ ತಾತ್ವಿಕ ಸೂಕ್ಷ್ಮತೆಗಳ ಅರಿವಿನಿಂದ ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ. ಜೊತೆಗೆ, ಭಾರತ ಅನುಸರಿಸಿದ ಅಭಿವೃದ್ಧಿ ಪಥ ಮತ್ತು ರೂಪಿಸಿದ ಹೊಸ ಆರ್ಥಿಕ ನೀತಿಗಳು ಮಹಿಳಾ ಅಭಿವೃದ್ಧಿ , ಪರಿಸರ, ಪ್ರಜಾಪ್ರಭುತ್ವ, ಧರ್ಮ, ಪ್ರತ್ಯೇಕತೆ, ಪ್ರಾದೇಶಿಕ ಅಸಮತೋಲನ ಇತ್ಯಾದಿ ಪ್ರಮುಖ ಸಂಗತಿಗಳ ಮೇಲೆ ಹೇಗೆ ಪ್ರಭಾವಬೀರಿವೆಯೆಂಬುದನ್ನು ಅತ್ಯಂತ ಸೂಕ್ಷ್ಮವಾಗಿ ಅವಲೋಕಿಸಿದ್ದಾರೆ. ಪುಸ್ತಕದ ಈ ಎಲ್ಲ ಬರಹಗಳು ಭಾರತದ ಅಭಿವೃದ್ಧಿ ಮತ್ತು ಅದರ ವಿವಿಧ ಆಯಾಮಗಳ ಸೂಕ್ಷ್ಮತೆಯ ಪರಿಚಯ ಮಾಡಿಕೊಡುತ್ತವೆ” ಎಂದು ಹೇಳಿದ್ದಾರೆ.

About the Author

ಉದಯ ಕುಮಾರ ಇರ್ವತ್ತೂರು
(01 June 1960)

ಡಾ. ಉದಯ ಕುಮಾರ್‌ ಇರ್ವತ್ತೂರು ಅವರು ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳದವರು. ತಂದೆ ನೇಮಿರಾಜ್‌ ಹಾಗೂ ತಾಯಿ ಮಾಲತಿ. ಮಂಗಳೂರಿನ ಹಂಪನಕಟ್ಟೆಯ ಯೂನಿವರ್ಸಿಟಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ ಸದ್ಯ ನಿವೃತ್ತರಾಗಿದ್ದಾರೆ. ಬರವಣಿಗೆ ಇವರ ನೆಚ್ಚಿನ ಹವ್ಯಾಸ. ಈವರೆಗೆ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ಅವುಗಳು; ವಾಣಿಜ್ಯ ಶಾಸ್ತ್ರ,- ಕನ್ನಡ ವಿಶ್ವವಿದ್ಯಾಲಯ ಹಂಪಿ, ಅಭಿವೃದ್ಧಿ: ವಾಸ್ತವ ಮತ್ತು ವಿಕಲ್ಪ, ಉಡುಪಿ ಜಿಲ್ಲೆ, ಸರ್ವೋದಯ ಮತ್ತು ಅಭಿವೃದ್ದಿ, ಗೆಲುವಿನ ದುಃಖ ಮತ್ತು ಸೋಲಿನ ಸುಃಖ ಇತ್ಯಾದಿ. ...

READ MORE

Related Books