ಯುರೇಕಾ

Author : ಎಲ್.ಪಿ.ಕುಲಕರ್ಣಿ

Pages 136

₹ 120.00




Year of Publication: 2021
Published by: ನವಿಲುಗರಿ ಪ್ರಕಾಶನ
Address: ಹಾಸನ
Phone: 9740053988

Synopsys

' ಯುರೇಕಾ ' ದಲ್ಲಿ ಒಟ್ಟು 22 ಕುತೂಹಲಕಾರಿ ವೈಜ್ಞಾನಿಕ ಲೇಖನಗಳಿವೆ. ಮಂಗಳನ ಅಂಗಳದಲ್ಲಿ ಮಿಂಚುತ್ತಿರುವ ಭಾರತೀಯ ವಿಜ್ಞಾನಿಗಳು ಎಂಬಲ್ಲಿ ಇತ್ತಿಚೆಗೆ ನಾಸಾ ಮಂಗಳನಲ್ಲಿ ಕಳಿಸಿದ ಪರ್ಸಿವರೆನ್ಸ್ ರೋವರ್, ನ ನಿಯಂತ್ರಣವನ್ನು ಭಾರತೀಯ ಮಹಿಳಾ ವಿಜ್ಞಾನಿ ಸ್ವಾತಿ ಮೋಹನ್ ನಿರ್ವಹಿಸುತ್ತಿದ್ದರೆ ಇನ್ನೊಬ್ಬ ಭಾರತೀಯ ಜಿಯೋಲಾಜಿಸ್ಟ್ ಸಂಜೀವ ಗುಪ್ತಾ, ಮನೆಯಲ್ಲಿ ಇದ್ದುಕೊಂಡೇ ತಮ್ಮ ಲ್ಯಾಪ್ ಟಾಪ್ ಮೂಲಕ ಮಂಗಳನ ಅಂಗಳದಲ್ಲಿನ ಖನಿಜಗಳ ಪತ್ತೆ ಮಾಡುವ ಉಪಕರಣಗಳಿಗೆ ಸಂಕೇತಗಳನ್ನು ಕಳಿಸುತ್ತಿದ್ದಾರೆ. ಇನ್ನೋರ್ವ ಭಾರತೀಯ ತಂತ್ರಜ್ಞ ಬಾಬ್ ಬಲರಾಮ್ ಮಂಗಳನ ಮೇಲೆ ಹೆಲಿಕಾಪ್ಟರ್ ನ್ನು ಹಾರಿಸಿ ದಾಖಲೆ ಬರೆದಿದ್ದಾರೆ. ಪುಸ್ತಕದಲ್ಲಿ ವಿಜ್ಞಾನಿ ಪ್ರಫುಲ್ಲ ಚಂದ್ರ ರೇ, ಸತ್ಯೇಂದ್ರನಾಥ ಬೋಸ್, 2019 ರಲ್ಲಿ ರಸಾಯನಶಾಸ್ತ್ರದ ನೊಬೆಲ್ ವಿಜೇತ 97 ವರ್ಷದ ಹಿರಿಯ ಜೀವ ಜಾನ್ ಬಿ ಗುಡ್ ಎನಫ್, ವೈಜ್ಞಾನಿಕ ಚಿಂತಕ ಕನ್ನಡಿಗ ಡಾ.ಎಚ್.ನರಸಿಂಹಯ್ಯ ಮುಂತಾದ ವಿಭಿನ್ನ ವ್ಯಕ್ತಿ ಚಿತ್ರಗಳೂ ಸಹ ಇಲ್ಲಿವೆ. ಹಿರಿಯ ಲೇಖಕ ವಿಶ್ವವಾಣಿ ಪತ್ರಿಕೆಯ ಪುರವಣಿ ಸಂಪಾದಕರಾದ ಶಶಿಧರ ಹಾಲಾಡಿಯವರ ಬೆನ್ನುಡಿಯಂತೆ ' ಯುರೇಕಾ ' ಪುಸ್ತಕದಲ್ಲಿ ಮುಖಗುರುತಿಸುವ ತಂತ್ರಜ್ಞಾನ, ಬಾಹ್ಯಾಕಾಶದಲ್ಲಿರುವ ಕಪ್ಪುಕುಳಿಗಳು, ಚಂದ್ರನ ಮೇಲೆ ಮಾನವನ ಸಾಹಸದಿಂದ ಆರಂಭಿಸಿ, ಅಪಾಯದಂಚಿನಲ್ಲಿರುವ ಪ್ರಾಣಿಗಳ ಬಗೆಗಿನ ಮಾಹಿತಿಯನ್ನು ಒಳಗೊಂಡ ಲೇಖನಗಳೂ ಇಲ್ಲಿವೆ. ದಾಂಡೇಲಿಯ ಕಾಡು, ಅಲ್ಲಿನ ಮಂಗಟ್ಟೆ ಹಕ್ಕಿಗಳು ಮೊದಲಾದ ಪರಿಸರ ಸಂಬಂಧಿ ಬರಹಗಳೂ ಇಲ್ಲಿವೆ. ವಿಶೇಷವೆಂದರೆ, ಈ ಎಲ್ಲಾ ಲೇಖನಗಳು ಒಂದಲ್ಲಾ ಒಂದು ಸಂದರ್ಭದಲ್ಲಿ ನಾಡಿನ ವಿವಿಧ ಪತ್ರಿಕೆಗಳಲ್ಲಿ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತು ತಿಳಿಯಬಯಸುವವರಿಗೆ ಈ ಪುಸ್ತಕ ಒಂದು ಬೆಳಕಿಂಡಿ. ವೈವಿಧ್ಯಮಯ ವೈಜ್ಞಾನಿಕ ಲೇಖನಗಳೇ ಈ ಸಂಕಲನದ ಶಕ್ತಿ ಎಂಬುದರಲ್ಲಿ ಎರಡು ಮಾತಿಲ್ಲ. ವಿದ್ಯಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿರುವವರಿಗೆ ಜೊತೆಗೆ ಸಾಮಾನ್ಯ ಓದುಗರಿಗೂ ಸಹ ರುಚಿಸುವಂತಹ ಲೇಖನಗಳು ' ಯುರೇಕಾ ' ದಲ್ಲಿವೆ.‌

About the Author

ಎಲ್.ಪಿ.ಕುಲಕರ್ಣಿ

ಎಲ್.ಪಿ.ಕುಲಕರ್ಣಿ. ಬಾಗಲಕೊಟೆ ಜಿಲ್ಲೆಯ ಹುನಗುಂದ ಇವರ ಹುಟ್ಟೂರು. ಖಾಯಂ ಆಗಿ ನೆಲೆಸಿದ್ದು ಬಾದಾಮಿಯಲ್ಲಿ. ಎಮ್.ಎಸ್.ಸಿ, ಬಿ.ಇಡಿ,(ಪಿ ಜಿ ಸಿ ಜೆ ಎಮ್ ಸಿ) ಪದವೀಧರರಾದ ಇವರು ಸರಕಾರಿ ಶಾಲೆಯಲ್ಲಿ ಗಣಿತ, ವಿಜ್ಞಾನ ಶಿಕ್ಷಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ವಿಜ್ಞಾನ ಹಾಗೂ ಗಣಿತ ವಿಷಯಗಳ ಮೇಲಿನ ಆಸಕ್ತಿಯ ಕಾರಣ ನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಚಲಿತ ವಿಜ್ಞಾನ-ತಂತ್ರಜ್ಞಾನಕ್ಕೆ, ಗಣಿತಕ್ಕೆ ಸಂಬಂಧಿಸಿದ ಲೇಖನಗಳನ್ನು ಬರೆಯುತ್ತಿದ್ದಾರೆ. ವಿಶ್ವವಾಣಿ ಪತ್ರಿಕೆಯಲ್ಲಿ ' ಟೆಕ್ ಸೈನ್ಸ್ ', ' ಸವಿಸವಿ ನೆನಪು, ಸಾವಿರ ನೆನಪು ', 'ದಿನಕ್ಕೊಂದು ಪ್ರಶ್ನೆ'. ಸಂಯುಕ್ತ ಕರ್ನಾಟಕ ಪತ್ರಿಕೆಯ ಕಿಂದರಿ ಜೋಗಿ ಪುರವಣಿಯಲ್ಲಿ ' ...

READ MORE

Related Books