‘ಅಚ್ಚರಿ!’ ( ಒಳ ಹೊರಗಿನ ವಿಸ್ಮಯ ಲೋಕ ) ನಾ. ಸೋಮೇಶ್ವರ ಅವರ ಕೃತಿಯಾಗಿದೆ. ಕೃತಿಯ ಬೆನ್ನುಡಿಯಲ್ಲಿನ ವಿಚಾರಗಳು ಹೀಗಿವೆ; ಬಿಸಿಲು ಮತ್ತು ಮಳೆ ಒಟ್ಟಿಗೆ ಬೀಳುವಾಗ ಕಾಮನಬಿಲ್ಲು ಮೂಡುವುದು ನಮಗೆ ಗೊತ್ತು. ಹೀಗೆಯೇ ಹುಣ್ಣಿಮೆಯ ರಾತ್ರಿಯಲ್ಲಿ ಮಂಜುಸುರಿಯುವಾಗ ಚಂದ್ರಬಿಲ್ಲೂ ಮೂಡುತ್ತದೆ. ಆಲ್ಕೋಹಾಲ್ ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿಗಳಿಗೂ ಪ್ರಿಯ. ಮರುಳ ಎನ್ನುವ ಹಣ್ಣಿನಲ್ಲಿ ಪ್ರಾಕೃತಿಕವಾಗಿ 15% ಆಲ್ಕೋಹಾಲ್ ಇರುವ ಕಾರಣ, ಕಾಡಿನ ಎಲ್ಲ ಸಸ್ಯಾಹಾರಿ ಪ್ರಾಣಿಗಳು ಮರುಳ ಹಣ್ಣನ್ನು ತಿಂದು ತೂರಾಡುತ್ತವೆ!. ಮೊನಾಲಿಸಳಿಗೆ ಹುಬ್ಬೂ ಇಲ್ಲ! ಕಣ್ಣು ರೆಪ್ಪೆಯ ಕೂದಲೂ ಇಲ್ಲ ಎನ್ನುವುದನ್ನು ಗಮನಿಸಿದಿರಾ?. ಕ್ಯಾಟಾಟುಂಬೋ ನದಿಯ, ಮರಕೈಬು ಜೌಗುಪ್ರದೇಶದ ಬಾನಿನಲ್ಲಿ ಗುಡುಗು, ಸಿಡಿಲು, ಮಿಂಚುಗಳ ನಿತ್ಯ ದೀಪಾವಳಿಯು ನಡೆಯುತ್ತದೆ. ಪ್ರತಿ ಸೆಕಂಡಿಗೆ ಮೂರು ಮಿಂಚುಗಳಾದರೂ ಭುವಿಯನ್ನು ಬೆಳಗುತ್ತವೆ. ಆಫ್ರಿಕದ ಆನೆಯು ಪ್ರಸವದ ವೇಳೆಯಲ್ಲಿ ಹೆಬ್ಬೇವನ್ನು ತಿಂದು ತನ್ನ ಪ್ರಸವವು ಸರಾಗವಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ. ದುಬೈ ನಗರದಲ್ಲಿರುವ ಎಲ್ಲ ಬಸ್ ನಿಲ್ದಾಣಗಳು ಹವಾನಿಯಂತ್ರಿತವಾಗಿವೆ. ಈ ಹಳ್ಳಿಯಲ್ಲಿ ಬರೀ ಅವಳಿ ಮಕ್ಕಳೇ ಹುಟ್ಟುತ್ತವೆ!. ಎಡ್ವರ್ಡ್ ಜೆನರ್‌ಗಿಂತಲೂ ಸಿಡುಬಿಗೆ ಭಾರತೀಯರು ಲಸಿಕೆಯನ್ನು ನೀಡುತ್ತದ್ದಿರು!. ಒಂದು ಡಜ಼ನ್ ಸತ್ತ ಹೆಗ್ಗಣಕೆ ಆರಾಣೆ!. ಬೇವಿನ ಮರದಿಂದ ಸಿಹಿ ಸಿಹಿಯಾದ ಹಾಲು!. ನೀವು ಹೀಗೆ ಮಾಡಿದರೆ ಸುಲುಭವಾಗಿ ಬೆಂಕಿಯ ಮೇಲೆ ನಡೆಯಬಹುದು. ಮಹಾಭಾರತದ ಶಿಶು ಕರ್ಣನು, ನಾಲ್ಕು ನದಿಗಳಲ್ಲಿ ಸುಮಾರು 1700 ಕಿ.ಮೀ. ಪ್ರಯಾಣ ಮಾಡಿದ! ಇಂತಹ ಅಚ್ಚರಿ ಮಾಹಿತಿಗಳನ್ನು ಈ ಪುಸ್ತಕದಲ್ಲಿ ನೋಡಬಹುದು.
ನಾ. ಸೋಮೇಶ್ವರ ಮೇ 14 1955 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ತಂದೆ ನಾರಪ್ಪ ಹಾಗೂ ತಾಯಿ ಅಂಜನಾ. ವಿದ್ಯಾರ್ಥಿಯಾಗಿದ್ದಾಗಲೇ 'ಜೀವನಂದಿ' ಎಂಬ ಮಾಸಿಕ ಪತ್ರಿಕೆಯನ್ನು ಪ್ರಕಟಿಸಿದ್ದರು. ತಮ್ಮ ಬಿ.ಎಸ್.ಸಿ ಪದವಿಯ ಬಳಿಕ, ಎಮ್.ಬಿ.ಬಿ.ಎಸ್ ಪದವಿಯನ್ನು ಗಳಿಸಿದರು. ವೃತ್ತಿಯಿಂದ ವೈದ್ಯರಾದ ಸೋಮೇಶ್ವರರು ಒಂದು ಫಾರ್ಮಸ್ಯೂಟಿಕಲ್ ಕಂಪೆನಿಗೆಸಲಹೆಗಾರರಾಗಿ ಕಾರ್ಯನಿರ್ವಹಿಸಿದರು. ಡಾ. ಸೋಮೆಶ್ವರ ಚಂದನ ಟೆಲಿವಿಷನ್ ವಾಹಿನಿಯಲ್ಲಿ ’ಥಟ್ ಅಂತ ಹೇಳಿ’ ಎನ್ನುವ ಕನ್ನಡ ಕ್ವಿಜ್ ಕಾರ್ಯಕ್ರಮದ ರೂವಾರಿಯಾಗಿ ಪ್ರಸಿದ್ಧರಾದವರು. ವೃತ್ತಿಯಿಂದ ವೈದ್ಯರಾಗಿ ಪ್ರವೃತ್ತಿಯಿಂದ ಲೇಖಕರಾಗಿ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ. ಅನಂತದೆಡೆಗೆ, ಓ ನನ್ನ ಚೇತನ, ದೈಹಿಕ ಸ್ವಚ್ಛತೆ, ತಲ್ಲಣಿಸದಿರು ಕಂಡ್ಯ ತಾಳು ಮನವೆ, ಅದೃಶ್ಯ ಲೋಕದ ಅಗೋಚರ ಜೀವಿಗಳು, ನಮ್ಮ ದಿನನಿತ್ಯದ ಆಹಾರ, ಹೀಗೆ ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. 2003 ರಲ್ಲಿ ವೈದ್ಯ ಸಾಹಿತ್ಯ ಪ್ರಶಸ್ತಿ, ಡಾಕ್ಟರ್ಸ್ ಡೇ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ...
READ MORE