‘ಎಂ. ಹಿರಿಯಣ್ಣ - ಆಯ್ದ ಬರಹಗಳು’ ಕುವೆಂಪು ಭಾಷಾ ಭಾರತಿಯ ಬೆಳಕಿನ ಬೆಳೆ ಮಾಲಿಕೆಯಲ್ಲಿ ಪ್ರಕಟಗೊಂಡ ಕೃತಿ. ಲೇಖಕ ಎಂ.ಜಿ. ಹೆಗಡೆ ಹಾಗೂ ಮಹೇಶ ಅಡಕೋಳಿ ಅವರು ಸಂಪಾದಿಸಿದ್ದಾರೆ. ಎಂ. ಹಿರಿಯಣ್ಣನವರು ಭಾರತೀಯ ತತ್ವಶಾಸ್ತ್ರ ಅಧ್ಯಯನಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಭಾರತೀಯ ತತ್ವಶಾಸ್ತ್ರದ ಮಾರ್ಗಶೋಧಕರು ಎಂದು ಇವರನ್ನು ಗುರುತಿಸಲಾಗಿದೆ. ಇವರ ಪ್ರಯತ್ನವಿಲ್ಲದಿದ್ದರೆ, ಭಾರತೀಯ ತತ್ವಶಾಸ್ತ್ರದ ಅರಿವು ಇನ್ನೂ ಅನ್ವೇಷಣೆಯ ಹಂತದಲ್ಲಿಯೇ ಇರುತ್ತಿತ್ತು ಎಂದು ದೇವಿ ಪ್ರಸಾದ ಚಟ್ಟೋಪಾಧ್ಯಾಯರಂತಹ ವಿದ್ವಾಂಸರೇ ಪ್ರಶಂಸಿಸಿದ್ದಾರೆ.
ಭಾರತೀಯ ತತ್ವಶಾಸ್ತ್ರವನ್ನು ಸಂಕ್ಷೇಪವಾಗಿ, ಅಧಿಕೃತ ಮಾತುಗಳಲ್ಲಿ ಅತ್ಯಂತ ಖಚಿತವಾದ ರೀತಿಯಲ್ಲಿ ನಿರೂಪಿಸಿದ್ದಾರೆ. ಭಾರತೀಯ ತತ್ವಶಾಸ್ತ್ರದ ಪ್ರತಿಯೊಂದು ದರ್ಶನದ ವಿಷಯದಲ್ಲಿಯೂ ತಲಸ್ಪರ್ಶಿಯಾದ ಜ್ಞಾನ, ನಿಷ್ಪಕ್ಷಪಾತವಾದ ನಿರೂಪಣೆ ಹಿತವೂ, ಮಿತವೂ ಆದ ವಿಮರ್ಶೆ ಇರುವುದನ್ನು ಕಾಣಬಹುದು. ಭಾರತೀಯ ತತ್ವಶಾಸ್ತ್ರದ ಅಧ್ಯಯನದಲ್ಲಿ ಇವರ ಕೃತಿಗಳಿಗೆ, ಲೇಖನಗಳಿಗೆ ಮಹತ್ವದ ಸ್ಥಾನವಿದೆ. ಇಂತಹ ಲೇಖನಗಳ ಸಂಗ್ರಹವನ್ನು ಶ್ರೀಎಂ.ಎ. ಹೆಗಡೆಯವರು ಅನುವಾದಿಸಿ ಭಾರತೀಯ ಚಿಂತನ ಮಾಲೆಯಲ್ಲಿ ಪ್ರಕಟಿಸಿದ್ದಾರೆ. ಭಾಷಾ ಭಾರತಿ ಪ್ರಾಧಿಕಾರದ ಸದಸ್ಯರೂ ಆ ಬೆಳಕಿನ ಬೆಳೆ ಮಾಲೆಯ ಸಂಪಾದಕರೂ ಆದ ಡಾ. ಎಂ.ಜಿ. ಹೆಗಡೆ ಅವರ ಜೊತೆಗೆ ಮಹೇಶ ಅಡಕೋಳಿ ಅವರು ಕೃತಿ ಸಂಪಾದನೆಗೆ ಸಹಕರಿಸಿದ್ದಾರೆ.
ಡಾ. ಎಂ.ಜಿ ಹೆಗಡೆ ಕುಮಟಾದ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಹಾಗೂ ಇಂಗ್ಲೀಷ್ ಬರಹಗಳು ಇವರ ಆಸಕ್ತಿ ಕ್ಷೇತ್ರವಾಗಿದೆ. ಅಧ್ಯಾಪನ, ಅಧ್ಯಯನ ಜೊತೆಗೆ ಸಂಶೋಧನೆ ವಿಚಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕನ್ನಡದ ಮುಖ್ಯ ವಿಮರ್ಶಕರಲ್ಲಿ ಒಬ್ಬರಾದ ಡಾ.ಎಂ.ಜಿ.ಹೆಗಡೆಯವರು ಜಿ.ಎಸ್. ಆಮೂರ ಅವರ ಅಭಿನಂದನ ಗ್ರಂಥ ’ವಿಮರ್ಶಾ ವಿವೇಕ’ದ ಸಂಪಾದಕರು. ಹಿರಿಯ ಸಾಹಿತಿ ಬಿ.ಎಚ್. ಶ್ರೀಧರ ಅವರ ಸಮಗ್ರ ಸಾಹಿತ್ಯ ಸಂಪುಟಗಳನ್ನು ಸಂಪಾದಿಸಿದ್ದಾರೆ. ಕೃತಿಗಳು: ಸಾಲು ದೀಪಗಳು, ತಲಸ್ಪರ್ಶಿ, ಎಂ. ಹಿರಿಯಣ್ಣ, ಅಂತ್ಯವಿಲ್ಲದ ಹಾದಿ, ಡಿ.ಡಿ ಕೊಸಾಂಬಿ ಅವರ ಆಯ್ದ ಬರಹಗಳು, ಮಹಾಭಾರತ, ಅಮೃತ ಬಿಂದು, ಸಹಯಾನ, ಬೆಳಕಿನ ...
READ MORE