ಜಾನಪದ

Author : ಗುರುದೇವಿ ಹುಲೆಪ್ಪನವರಮಠ

Pages 208

₹ 200.00




Year of Publication: 2020
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು560018

Synopsys

ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಸಾಹಿತ್ಯ ಸಂಪುಟ ಮಾಲೆಯಡಿ ಪ್ರಕಟಿತ ಕೃತಿ-ಜಾನಪದ. ಲೇಖಕಿ ಡಾ. ಗುರುದೇವಿ ಹುಲೆಪ್ಪನವರಮಠ ಸಂಪಾದಕರು. ಅಂಧಮಕ್ಕಳು ಹೇಳಿದ ಜನಪದ ಕತೆಗಳು (ಜಯಲಲಿತಾ), ಇಷ್ಟೆಯಪ್ಪ ನಾನು ಹೇಳುವುದು (ಮೋಟಮ್ಮ), ಎಲ್ಲಮ್ಮನ ದೇವದಾಸಿ ಸಂಪ್ರದಾಯದ ಪರಿಣಾಮಗಳು (ಡಾ. ಹನುಮಾಕ್ಷಿ ಗೋಗಿ), ಒಡ್ಡರು (ಡಾ. ಸುಲೋಚನಾ ಸಂ. ಮಟ್ಟಿ), ಕನ್ನಡ ಜನಪದ ಕತೆಗಳಲ್ಲಿ ಚಾಲಾಕಿ ಹೆಣ್ಣುಗಳು (ಸುಶೀಲ ಪಟ್ಟಣಶೆಟ್ಟಿ), ಕಂಬಳಿಯ ಸಾಂಸ್ಕೃತಿ ಅನನ್ಯತೆ (ನಿರ್ಮಲಾ ಎಎಸ್), ಖಿಲವಾಗದು (ಡಾ. ಕಮಲಾ ಹೆಮ್ಮಿಗೆ), ಜನಪದ ಕಥೆಗಳ ಸ್ತ್ರೀವಾದಿ ಅಧ್ಯಯನ (ಡಾ. ಕೆ.ಆರ್. ಸಂಧ್ಯಾರೆಡ್ಡಿ), ಜನಪದ ನಂಬಿಕೆಗಳು ಮತ್ಯು ಮಹಿಳೆ (ಡಾ. ಶಾಂತಾ ಇಮ್ರಾಪೂರ ), ಜನಪದ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆ ಮತ್ತು ಕುಟುಂಬಬ ವ್ಯವಸ್ಥೆ (ಶಾಂತಿ ನಾಯಕ), ಜನಪದ ಹಾಡುಗಳಲ್ಲಿ ಆಧ್ಯಾತ್ಮ( ಡಾ. ವಿಜಯಶ್ರೀ ಸಬರದ ), ಜಾನಪದ ಸಂಸ್ಕೃತಿ: ದೇವ-ಮಾನ ಸಮ್ಮೀಲನ ಏಳುಕೊಳ್ಳದ ಎಲ್ಲಮ್ಮ (ಸಿ. ಪಾರ್ವತಮ್ಮ), ಜಾನಪದ ಸೃಷ್ಟಿಕಾರ್ಯದಲ್ಲಿ ಮಹಿಳೆ (ಡಾ. ಸುಶೀಲಾ ನೆಲ್ಲಿಸರ), ತಿಪ್ಪೆ ಜಾನಪದ (ಸುಜಾತಾ ಅಕ್ಕಿ), ದಕ್ಷಿಣ ಕನ್ನಡದ ನಲಿಕೆಯವರು (ಡಾ. ಪಿ. ಸುಶೀಲಾ), ಬ್ರಹ್ಮದೇವರ ಹಬ್ಬ: ಒಂದು ವಿಶಿಷ್ಟ ಆಚರಣೆ( ಜಿ.ಎಸ್. ವಸಂತಮಾಲಾ ), ಸಂಥಾನ ಪ್ರಾಪ್ತಿಯ ಸಂಪ್ರದಾಯಗಳು (ಡಾ. ಎನ್.ಬಿ. ಬುಳ್ಳಾ) ಹೀಗೆ ಒಟ್ಟು 18 ಚಿಂತನಾ ಬರಹಗಳನ್ನು ಸಂಕಲಿಸಲಾಗಿದೆ.

ಕೃತಿಯ ಕುರಿತು ಪ್ರಧಾನ ಸಂಪಾದಕ ನಾಡೋಜ ಡಾ. ಮನು ಬಳಿಗಾರ ‘ಕನ್ನಡ ಲೇಖಕಿಯರ ಅನುಭವ, ಆಲೋಚನೆ, ಆಳದ ತಲ್ಲಣ ಮತ್ತು ಪ್ರತಿಭಟನೆಗಳು ಅವರ ಕೃತಿಗಳಲ್ಲಿ ಅಭಿವ್ಯಕ್ತಿಗೊಂಡ ಬಗೆಯನ್ನು ಈ ಮಹಿಳಾ ಸಂಪುಟವು ಹಿಡಿದು ಇಟ್ಟಿದೆ. ಹೆಣ್ಣು ಮತ್ತು ಗಂಡಿನ ಸಂವೇದನೆಗಳ ನಡುವಿನ ಭಿನ್ನತೆಗಳನ್ನು ಮತ್ತು ಸಾಮ್ಯತೆಗಳನ್ನು ಗುರುತಿಸಲು ಈ ಸಂಪುಟವು ನೆರವಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

About the Author

ಗುರುದೇವಿ ಹುಲೆಪ್ಪನವರಮಠ
(13 March 1959)

ಲೇಖಕಿ ಡಾ. ಗುರುದೇವಿ ಹುಲೆಪ್ಪನವರಮಠ  ಮೂಲತಃ ಬೆಳಗಾವಿಯವರು. ಧಾರವಾಡದ ಕರ್ನಾಟಕ ವಿ.ವಿ.ಯಿಂದ ಎಂ.ಎ. (ಇಂಗ್ಲಿಷ್) ಪದವೀಧರರು. ಹಾಗೂ ಕರ್ನಾಟಕ ವಿ.ವಿ.ಯಿಂದ ಎಂ.ಎ-ಕನ್ನಡ (ಬಾಹ್ಯ) ಪದವೀಧರರು.‘ ‘ಅತಿಭೌತಿಕ ಕಾವ್ಯ, ಕನ್ನಡ ವಚನ ಸಾಹಿತ್ಯ: ಒಂದು ತೌಲನಿಕ ಅಧ್ಯಯನ’ ವಿಷಯವಾಗಿ ಪಿಎಚ್ ಡಿ ಪಡೆದಿದ್ದಾರೆ. ಕೆ.ಎಲ್.ಇ ಸಂಸ್ಥೆಯ ಸವದತ್ತಿ ಹಾಗೂ ಧಾರವಾಡ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ, ಕರ್ನಾಟಕ ವಿ.ವಿ ಧಾರವಾಡ ಹಾಗೂ ಬೆಳಗಾವಿ ಕೇಂದ್ರದಲ್ಲಿ ಉಪನ್ಯಾಸಕಿಯಾಗಿ ಹಾಗೂ ಬೆಳಗಾವಿಯ ರಾಣಿ ಕಿತ್ತೂರು ಚೆನ್ನಮ್ಮ ವಿ.ವಿ.ಯಲ್ಲಿ ಸಂಶೋಧನಾ ಮಾರ್ಗದರ್ಶಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸದ್ಯ ನಿವೃತ್ತರು. ಕೃತಿಗಳು: ಆಸೆ ಹಾಗೂ ಆತ್ಮವಿಶ್ವಾಸ,  ಲಿಂ. ಬಿದರಿ ಕುಮಾರಸ್ವಾಮಿಗಳು ...

READ MORE

Related Books