ನೋಟ್ ಬುಕ್ಕಿನ ಕಡೆಯ ಪುಟ

Author : ಜಯಶ್ರೀ ದೇಶಪಾಂಡೆ

Pages 116

₹ 100.00




Year of Publication: 2021
Published by: ವಿ.ಪದ್ಮಾವತಿ
Address: ತೇಜು ಪಬ್ಲಿಕೇಷನ್ಸ್, # 1014, 24ನೇ ಮುಖ್ಯರಸ್ತೆ, 16ನೇ ಅಡ್ಡರಸ್ತೆ, ಬಿಎಸ್ ಕೆ ಎರಡನೇ ಹಂತ, ಬೆಂಗಳೂರು -70
Phone: 9900195626

Synopsys

ಲೇಖಕಿ ಜಯಶ್ರೀ ದೇಶಪಾಂಡೆ ಅವರ ಕೃತಿ ‘ನೋಟ್ ಬುಕ್ಕಿನ ಕಡೆಯ ಪುಟ’ ಹೃದ್ಯ ಮೆಲುಕುಗಳ ಆಗರ. ಇಲ್ಲಿರುವ ಇಪ್ಪತ್ತೈದು ಲಘುಹಾಸ್ಯದ ಲೇಖನಗಳಲ್ಲಿ ಭಾವನಾತ್ಮಕ ನವಿರೂ ಸೇರಿದೆ.‌ ಇಂದಿನ ಮಾಹಿತಿ ತಂತ್ರಜ್ಞಾನ ಪ್ರಾಬಲ್ಯದ ಹೊಡೆತದ ದಿನಗಳಲ್ಲಿ ನಮ್ಮ ಆತಂಕಿತ ಮಸ್ಸುಗಳಿಗೆ ಮನುಷ್ಯ ಸಂಬಂಧಗಳಲ್ಲಿರುವ ಹಿತವಾದ ನೇವರಿಕೆ ಹಾಗೂ ನಿಸರ್ಗದ ಜೊತೆಗಿನ ಒಡನಾಟದಲ್ಲಿರುವ ಚೇತರಿಕೆಯ ಅವಶ್ಯಕತೆ ಇದೆ. ಇಲ್ಲಿರುವ ಲೇಖನಗಳು ಅಂಥದೊಂದು‌‌ ಆಂತರಿಕ ಚೇತರಿಕೆಯ ಹೂರಣವನ್ನು ಹೊಂದಿವೆ. ''ಅಮಾರ್ ಶೋನಾರ್ ಬಾಂಗ್ಲಾ'' "ಅಲ್ಲೇಪಾಕ್'' "ಸೌನಾ ಸುಗ್ಗಿಯೂ ಹೆಸರು ಬೇಳೆ ಹುಗ್ಗಿಯೂ'' "ಒಂದು ಆಂಗ್ರಿ ಬರ್ಡ್ ಸಮಾಚಾರ'' "ಚಹವೇ ನಿನ್ನಯ..." "ಮಕಮಲ್ ಶಾವಿಗೆ ಮತ್ತು ಊರುಸಾಬರಿ" " ಕೋಪಗೃಹವಾರ್ತೆಗಳು" ''ರಸರಂಗ ಮಧುರ ಸಮೀರಾ'‌' " ಸುಂಠಿ" "ವೊ ಕಾಗಜ ಕೀ ಕಶ್ತೀ ವೊ ಬಾರಿಶ್ ಕಾ ಪಾನೀ" "ಅಜ್ಜನ ಹೋಲ್ಡಾಲ್'' ಮತ್ತು "ನೋಟ್ ಬುಕ್ ನ ಕಡೆಯ ಪುಟ'' ಹೀಗೆ ಎಲ್ಲ ಬರಹಗಳೂ ಒಡಲ ಪ್ರೀತಿಯೊಂದಿಗೆ ಮಾನವೀಯ ಮೃದು ಮಧುರ ಅನುಭವಗಳನ್ನು‌ ತೆಳು ಹಾಸ್ಯದೊಳಗದ್ದಿ‌ ಓದುಗರಿಗೆ ಈ ಲಘುಪ್ರಬಂಧಗಳ ಗುಚ್ಛವನ್ನು ಕೊಡುಗೆಯಾಗಿ ನೀಡಿವೆ.‌

About the Author

ಜಯಶ್ರೀ ದೇಶಪಾಂಡೆ

ಲೇಖಕಿ ಜಯಶ್ರೀ ದೇಶಪಾಂಡೆ  ಅವರು ಮೂಲತಃ ವಿಜಯಪುರದವರು. ಮನಃಶಾಸ್ತ್ರ ಹಾಗೂ ಇಂಗ್ಲಿಷ್ ನಲ್ಲಿ ಸ್ನಾತಕೋತ್ತರ ಪದವೀಧರರು. ದೇಶ ಸುತ್ತುವುದರ ಜೊತೆಗೆ ಅಲ್ಲಿಯ ಜನ, ಭಾಷೆ, ಆಹಾರ, ಸಂಸ್ಕೃತಿಯನ್ನು ತಮ್ಮ ಲೇಖನಗಳ ಮೂಲಕ ಪರಿಚಯಿಸುತ್ತಿದ್ದಾರೆ.  ಕೃತಿಗಳು : ಪದ್ಮಿನಿ, ಮೂರನೆಯ ಹೆಜ್ಜೆ, ರೇಖೆಗಳ ನಡುವೆ, ಸ್ಥವಿರ ಜಂಗಮಗಳಾಚೆ ಹಾಗೂ ಉತ್ತರಾರ್ಧ (ಕಥಾ ಸಂಕಲನಗಳು), ಯತ್ಕಿಂಚಿತ್ (ಕವನ ಸಂಕಲನ),ಮಾಯಿ   ಕೆಂದಾಯಿ  ಸ್ಮೃತಿ ಲಹರಿ (ಲಲಿತ ಪ್ರಬಂಧ ಸಂಕಲನ)  ಹೌದದ್ದು ಅಲ್ಲ‌ ಅಲ್ಲದ್ದು ಹೌದು (ಹಾಸ್ಯಲೇಖನ ಸಂಕಲನ), ಕಾಲಿಂದಿ (ಮಯೂರ), ಕೆಂಪು ಹಳದಿ ಹಸಿರು (ತರಂಗ), ದೂರ ದಾರಿಯ ತೀರ (ತರಂಗ) , ಬೇವು‌ (ವಿಜಯ ಕರ್ನಾಟಕ),  ಚಕ್ರವಾತ (ನೂತನ), ಸರಸ್ವತಿ ಕಾಯದ ದಿನವಿಲ್ಲ. (ಉದಯವಾಣಿ)   ಇವು ಧಾರಾವಾಹಿಯಾಗಿ ...

READ MORE

Related Books