ಮುಹಮ್ಮದ್ ರಿಯಾಝ್ ಕಾರ್ಕಳರವರ ಚೊಚ್ಚಲ ಕೃತಿಯಾದ ತುಳುನಾಡಿನ ಕೋಮುಸಾಮರಸ್ಯ ಪರಂಪರೆ ಗ್ರಂಥವು ಗತ ತುಳುನಾಡಿನ ಸಾಮರಸ್ಯದ ಸರ್ವ ಆಯಾಮಗಳನ್ನು ತೆರೆದಿಡುವ ಗ್ರಂಥ. ನಾಡಿನ ಸಾಮರಸ್ಯಕ್ಕೆ ಇಲ್ಲಿನ ಪ್ರಭುತ್ವಗಳು ಹೇಗೆ ಪೂರಕವಾಗಿದ್ದವು..? ದೈವಾರಾಧನೆ ಹೇಗೆ ಕೋಮುಸಾಮರಸ್ಯದ ರಾಯಭಾರಿಯಾಗಿತ್ತು..? ಹಬ್ಬಹರಿದಿನಗಳು ಮತ್ತು ಧಾರ್ಮಿಕ ಕೇಂದ್ರಗಳು ಹೇಗೆ ಸಾಮರಸ್ಯವನ್ನು ವೃದ್ಧಿಸುವ ಕೆಲಸ ಮಾಡುತ್ತಿದ್ದವು..? ಕೋಮುಸಾಮರಸ್ಯವನ್ನು ವೃದ್ಧಿಸುವಲ್ಲಿ ಸ್ವಾತಂತ್ರ್ಯ ಹೋರಾಟದ ಪಾತ್ರ ಏನು..? ವರ್ತಮಾನದ ತುಳುನಾಡಿನ ಪರಿಸ್ಥಿತಿಗೆ ಕಾರಣಗಳೆನು? ಮತ್ತು ಪರಿಹಾರಗಳೇನು? ಎಂಬ ಅಂಶಗಳ ಬಗ್ಗೆ ಈ ಕೃತಿಯು ಬೆಳಕು ಚೆಲ್ಲುತ್ತದೆ.