ದಲಿತ ಅಸ್ಮಿತೆ

Author : ಎಚ್.ಟಿ. ಪೋತೆ

Pages 256

₹ 250.00




Year of Publication: 2021
Published by: ಕುಟುಂಬ ಪ್ರಕಾಶನ
Address: ಅಭಯ್ ಪೂರ್ಣವರ್ಷ ಪ್ಲಾಟ್ ನಂ.140, ಪೂಜಾ ಕಾಲೋನಿ, ವಿಶ್ವವಿದ್ಯಾಲಯ ಅಂಚೆ, ಕುಸನೂರ ರಸ್ತೆ, ಕಲಬುರಗಿ
Phone: 9449163751

Synopsys

‘ದಲಿತ ಅಸ್ಮಿತೆ’ ಪ್ರೊ.ಎಚ್.ಟಿ. ಪೋತೆ ಅವರ ಲೇಖನ ಸಂಕಲನ. ಮನಸ್ಸು ಮತ್ತು ವ್ಯಕ್ತಿತ್ವವನ್ನು ಘಾಸಿಗೊಳಿಸುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಜನಪರವಾಗಿ ಮಾತಾಡುವವರು ದಿನಗಳೆದಂತೆ ಏಕಾಂಗಿಯಾಗುತ್ತಿದ್ದಾರೆ. ಬುದ್ಧ, ಬಸವಾದಿ ಶರಣರು, ಅಂಬೇಡ್ಕರ್, ಪೆರಿಯಾರರಂತಹ ಜೀವಪರರು ನಾಯಕಮಣಿಗಳ, ವಾಚಾಳಿಗಳ ನಾಲಿಗೆಗೆ ಮಾತ್ರ ಸೀಮಿತರಾಗುತ್ತಿದ್ದಾರೆ. ಅವರ ತತ್ವ ಸಿದ್ಧಾಂತಗಳನ್ನು ಕೇರಿಯ ಜನರೆದುರಿಗೆ ಫುಂಖಾನುಫುಂಖವಾಗಿ ಬಳಸಿ, ಅವರನ್ನು ಉನ್ಮಾದದಲ್ಲಿ ತೇಲುವಂತೆ ಮಾಡಿ ಮಂಕುಬೂದಿ ಎರಚುವುದು ನಿತ್ಯ ನಡೆದಿದೆ. ಯಾವುದು ಸತ್ಯ, ಯಾವುದು ಅಸತ್ಯ ಅನ್ನುವುದೇ ತಿಳಿಯದಾದ ಜನರ ನಡುವೆ ನಾವಿದ್ದೇವೆ. ವಂಚಿಸುವವರೆಲ್ಲ ಸ್ನೇಹಿತರಾಗುತ್ತಿದ್ದಾರೆ. ವಂಚನೆಗೊಳಗಾಗುವವರು ನಿತ್ಯ ಅಸಂಘಟಿತರಾಗುತ್ತಿದ್ದಾರೆ. ಈ ಎಲ್ಲ ತವಕ ತಾಕಲಾಟಗಳ ನಡುವೆ ಅಪಮಾನಿತ ಜಗತ್ತಿನ ಬಗ್ಗೆ, ವಂಚಕರ ಬಗ್ಗೆ, ವಂಚಿತ ಜಗತ್ತಿನ ಕುರಿತು ನಾನು ಆಗಾಗ ಬರೆದ ಲೇಖನಗಳನ್ನು ಒಂದೆಡೆ ಸಂಕಲಿಸಿದ್ದೇನೆ. ಅದುವೆ ದಲಿತ ಅಸ್ಮಿತೆ ಪ್ರಸ್ತುತ ಗ್ರಂಥದಲ್ಲಿ ತತ್ವ-ವ್ಯಕ್ತಿ-ವ್ಯಕ್ತಿತ್ವಗಳಿಗೆ ಸಂಬಂಧಿಸಿದ ಲೇಖನಗಳಿವೆ.

About the Author

ಎಚ್.ಟಿ. ಪೋತೆ

ಕಥೆಗಾರ, ವಿಮರ್ಶಕ, ಅನುವಾದಕ, ಚಿಂತಕ, ಜಾನಪದ ವಿದ್ವಾಂಸ ಹಾಗೂ ಸಂಶೋಧಕರಾದ ಪ್ರೊ. ಎಚ್.ಟಿ.ಪೋತೆ ಬಿಸಿಲನಾಡಿನ ದಿಟ್ಟಪ್ರತಿಭೆ. ಬುದ್ದ. ಬಸವ, ಅಂಬೇಡ್ಕರ್, ಫುಲೆ, ಪೆರಿಯಾರ್, ಬಿ. ಶ್ಯಾಮಸುಂದರ್ ಚಿಂತನೆಗಳ ನೆಲೆಯಲ್ಲಿ ಸಾಹಿತ್ಯ ಕೃಷಿಗೈದವರು. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಂಜಗಿ ಪೋತೆಯವರ ಜನ್ಮಸ್ಥಳ, ಗುಲ್ಬರ್ಗಾ ವಿವಿಯಿಂದ ಎಂ.ಎ, ಎಂ.ಫಿಲ್, ಪಿಎಚ್ಡಿ. ಅಂಬೇಡ್ಕರ್ ಕುರಿತಾದ ಕನ್ನಡದ ಮೊದಲ ಡಿ.ಲಿಟ್ ಪಡೆದ ಹೆಗ್ಗಳಿಕೆ. ಗುಲ್ಬರ್ಗಾ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕ, ಪ್ರಸಾರಂಗದ ನಿರ್ದೇಶಕ, ಅಂಬೇಡ್ಕರ್‌ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ, ಕರ್ನಾಟಕ ವಿವಿ ಮೌಲ್ಯಮಾಪನ ಕುಲಸಚಿವರಾಗಿ ಅವರದ್ದು ಬಹುರೂಪಿ ಶೈಕ್ಷಣಿಕ ...

READ MORE

Related Books