''ತಂಗಾಳಿ” ಬಿ.ಪಿ. ಶಿವಾನಂದರಾವ್ ಅವರ ಲೇಖನಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಬೆಳಕಿನಲ್ಲಿ ತಾನೂ ಮುಂದುವರಿಯುತ್ತ ಇತರರನ್ನೂ ತನ್ನೊಂದಿಗೆ ಬರುವಂತೆ ದಾರಿ ತೋರಿಸುತ್ತ ನಡೆವಾತನೇ ಸನ್ಮಾರ್ಗದರ್ಶಕ. ಆದರೆ ಇಂದು ಇಂಥವರು ಅಪರೂಪ, ದುರದೃಷ್ಟವೆಂದರೆ ಸನ್ಮಾರ್ಗ ಯಾವುದು - ದುರ್ಮಾರ್ಗ ಯಾವುದೆಂಬ ನಿಖರ ವಿವೇಚನೆ ಇಲ್ಲವಾಗಿದೆ. ಆನೆ ಹೋದದ್ದೇ ದಾರಿಯಾಗಿದೆ. ಇಂಥ ಅನಿಸಿಕೆಗಳು ಪ್ರತಿಯೊಬ್ಬರ ಬಾಳಿನಲ್ಲಿ ನುಸುಳಿ ಪ್ರತ್ಯಕ್ಷ- ಪರೋಕ್ಷ ಅನುಭವ ನೀಡುತ್ತವೆ. ಪ್ರತಿಯೊಂದು ಮೈಲಿಗಲ್ಲಿನ ಸಮೀಪ ಒಂದರೆಕ್ಷಣ ನಿಂತು ಅವಲೋಕಿಸಿದಾಗ ತಾವು ಎಡವಿದ್ದೆಲ್ಲಿ, ಯಾಕ ಎಂಬ ಸುಳುಹು ತಿಳಿಯುತ್ತದೆ, ಕಾಲ ಬದಲಾದಂತೆ ಅನಿವಾರ್ಯವಾಗಿ ನಾವು ಬದಲಾದಾಗ ಅಂದು ಅಂದಿಗೆ, ಇಂದು ಇಂದಿಗೆ ಎಂಬ ಒಂದು ರಾಜೀ ಸೂತ ನಮ್ಮದಾಗುತ್ತದೆ. ಮೌಲ್ಯಗಳು ಪಲ್ಲಟಗೊಳ್ಳುತ್ತವೆ. ಗೊಂದಲ ಮೂಡಿಸುತ್ತವೆ. ಇಂಥ ದಿಕ್ಕು ಕಾಣದ ತಿರುವಿನಲ್ಲಿ ಈ 'ತಂಗಾಳಿ' ಎಂಬ ಹಿತವಾದ ಬರಹಗಳ ಸಂಕಲನ ನಿಮ್ಮ ಮುಂದಿದೆ. ಸತ್ವಯುತವಾದ ವಿಚಾರಗಳು ತುಂಬಿವೆ.
ಬಿ.ಪಿ. ಶಿವಾನಂದರಾವ್ ಅವರು ಉತ್ತರ ಕನ್ನಡ ಜಿಲ್ಲೆಯ ಸಶಕ್ತ ಸಾಹಿತಿಗಳಾಗಿದ್ದು, ಅವರ ಕಥೆ, ಕಾದಂಬರಿ, ವೈಚಾರಿಕ ಲೇಖನಗಳ ಮೂಲಕ ಸಾಹಿತ್ಯಾಸಕ್ತನ್ನು ಚಿಂತನೆಗೆ ಹಚ್ಚಿದವರು. ಐವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವ ಶಿವಾನಂದ ರಾವ್ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಬರೆದವರು. ಮುಖ್ಯವಾಗಿ ಅವರು ಕತೆಗಾರ, ಕಾದಂಬರಿಕಾರ. ನಗೆಲೇಖನ, ಶೈಕ್ಷಣಿಕ, ವೈಚಾರಿಕ ಪ್ರಬಂಧಗಳನ್ನೂ ಅವರು ಬರೆದಿದ್ದಾರೆ. ...
READ MORE(ಹೊಸತು, ಫೆಬ್ರವರಿ 2014, ಪುಸ್ತಕದ ಪರಿಚಯ)
ತಿಳಿವಳಿಕೆ ಮತ್ತು ವಿವೇಕ ಮನುಷ್ಯನನ್ನು ಎಂಥ ಕೆಳಮಟ್ಟದಿಂದಲೂ ಮೇಲೆತ್ತಬಲ್ಲ ಶಕ್ತಿಯುತ ಸಾಧನಗಳು ವಿಚಾರವಂತಿಕೆ ಮನುಷ್ಯನ ಬಾಳಿನಲ್ಲಿ ದೀವಿಗೆಯಿದ್ದಂತೆ. ಬೆಳಕಿನಲ್ಲಿ ತಾನೂ ಮುಂದುವರಿಯುತ್ತ ಇತರರನ್ನೂ ತನ್ನೊಂದಿಗೆ ಬರುವಂತೆ ದಾರಿ ತೋರಿಸುತ್ತ ನಡೆವಾತನೇ ಸನ್ಮಾರ್ಗದರ್ಶಕ. ಆದರೆ ಇಂದು ಇಂಥವರು ಅಪರೂಪ, ದುರದೃಷ್ಟವೆಂದರೆ ಸನ್ಮಾರ್ಗ ಯಾವುದು - ದುರ್ಮಾರ್ಗ ಯಾವುದೆಂಬ ನಿಖರ ವಿವೇಚನೆ ಇಲ್ಲವಾಗಿದೆ. ಆನೆ ಹೋದದ್ದೇ ದಾರಿಯಾಗಿದೆ. ಇಂಥ ಅನಿಸಿಕೆಗಳು ಪ್ರತಿಯೊಬ್ಬರ ಬಾಳಿನಲ್ಲಿ ನುಸುಳಿ ಪ್ರತ್ಯಕ್ಷ- ಪರೋಕ್ಷ ಅನುಭವ ನೀಡುತ್ತವೆ. ಪ್ರತಿಯೊಂದು ಮೈಲಿಗಲ್ಲಿನ ಸಮೀಪ ಒಂದರೆಕ್ಷಣ ನಿಂತು ಅವಲೋಕಿಸಿದಾಗ ತಾವು ಎಡವಿದ್ದೆಲ್ಲಿ, ಯಾಕ ಎಂಬ ಸುಳುಹು ತಿಳಿಯುತ್ತದೆ, ಕಾಲ ಬದಲಾದಂತೆ ಅನಿವಾರ್ಯವಾಗಿ ನಾವು ಬದಲಾದಾಗ ಅಂದು ಅಂದಿಗೆ, ಇಂದು ಇಂದಿಗೆ ಎಂಬ ಒಂದು ರಾಜೀ ಸೂತ ನಮ್ಮದಾಗುತ್ತದೆ. ಮೌಲ್ಯಗಳು ಪಲ್ಲಟಗೊಳ್ಳುತ್ತವೆ. ಗೊಂದಲ ಮೂಡಿಸುತ್ತವೆ. ಇಂಥ ದಿಕ್ಕು ಕಾಣದ ತಿರುವಿನಲ್ಲಿ ಈ 'ತಂಗಾಳಿ' ಎಂಬ ಹಿತವಾದ ಬರಹಗಳ ಸಂಕಲನ ನಿಮ್ಮ ಮುಂದಿದೆ. ಸತ್ವಯುತವಾದ ವಿಚಾರಗಳು ತುಂಬಿವೆ. ಲೇಖಕ ಶ್ರೀ ಬಿ.ಪಿ. ಶಿವಾನಂದರಾವ್ ಸುದೀರ್ಘವಾಗಿ, ಸಾವಕಾಶವಾಗಿ ಮನುಷ್ಯನ ಚಂಚಲ ಪವೃತ್ತಿ ಮತ್ತು ಅತೃಪ್ತ ಮನಸ್ಸಿನ ಮೇಲೆ ವಿಶ್ಲೇಷಣಾತ್ಮಕ ದೃಷ್ಟಿಕೋನದಿಂದ ತರ್ಕಬದ್ಧ ವಿಚಾರಸರಣಿಯನ್ನು ನಮ್ಮ ಮುಂದಿಟ್ಟಿದ್ದಾರೆ. ನಾವು ನಮಗೆ ಬೇಕಷ್ಟು ಹೀರೋಣ.