ಲೇಖಕಿ ಗೌರಿ ಲಂಕೇಶ್ ಅವರ ಬರಹಗಳ ಸಂಕಲನವೇ ಕಂಡಹಾಗೆ ಭಾಗ-2. ಲೇಖಕಿ ತಮ್ಮ ಕೃತಿಯಲ್ಲಿ ಅರಿಕೆ ಮಾಡಿಕೊಂಡಿದ್ದು, ‘ನನ್ನ ಸುತ್ತಲಿನ ಜಗತ್ತನ್ನು ಕಂಡದ್ದು, ಕೇಳಿದ್ದು, ಓದಿದ್ದು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದು, ಸ್ಪಂದಿಸಿದ್ದು, ಬೇಸರಗೊಂಡುದ್ದು, ಸಂತೋಷಿಸಿದ್ದು, ಕೋಪಗೊಂಡಿದ್ದು...ಇವೆಲ್ಲವೂ ‘ಲಂಕೇಶ್’ ವಾರಪತ್ರಿಕೆಯಲ್ಲಿ ಸಂಪಾದಕೀಯವಾಗಿ ಪ್ರಕಟಗೊಂಡವು..ಅವುಗಳಲ್ಲಿ 2005ರಿಂದ 2008ರವರೆಗೆ ಪ್ರಕಟಗೊಂಡ ಬರಹಗಳಲ್ಲಿ ಹಲವನ್ನು ಆಯ್ಕೆ ಮಾಡಿ ಈ ಸಂಗ್ರಹದಲ್ಲಿ ನೀಡಲಾಗಿದೆ.ಇವು ನಿಮಗೆ ಇಷ್ಟವಾಗುತ್ತವೆ ಎಂಬ ನಿರೀಕ್ಷೆಯಿದೆ’ ಎಂದಿದ್ದಾರೆ. ಕಂಡಹಾಗೆ ಭಾಗ-2 ಪರಿವಿಡಿಯಲ್ಲಿ ವಾಸ್ತವ ಪೂರ್ವಾಗ್ರಹಗಳ ನಡುವೆ, ಆ ಕಾಲದ ಜಿನ್ನಾ ಪುರಾಣದ ಸುತ್ತ ಒಂದು ನೋಟ, ಕಂಡದ್ದನ್ನು ಕಂಡ ಹಾಗೆ ಹೇಳಿದವರಿಗೆ ನೊಬೆಲ್ ಬಂದರೆ, ಭೂಮಾತೆಯಂಥ ಶಿಹನ್-ಬ್ರಹ್ಮರಾಕ್ಷಸನಂಥ ಬುಷ್, ಸದಾ ಪ್ರೀತಿ ಹುಡುಕಿದ ಅಮೃತಾ ಕಣ್ಮರೆ, ಬೆಂಗಲೂರಿನ ಪಕ್ಕದಲ್ಲೇ ನಾಜಿ ಕ್ಯಾಂಪ್, ಬಾಬಾ ಆಪ್ಟೆ ಎಂಬ ನೃತಿಕ ಶಕ್ತಿ ಇಂತಹ 46 ಶೀರ್ಷಿಕೆಗಳ ಬರಹಗಳಿವೆ..
ಭಾರತೀಯ ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶ್ ಅವರು 1962 ಜನವರಿ 29 ರಂದು ಜನಿಸಿದರು. ಗೌರಿ ಲಂಕೇಶ್ ಪತ್ರಿಕೆ' ವಾರ ಪತ್ರಿಕೆ ನಡೆಸುತ್ತಿದ್ದರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರು. ಪ್ರಸಿದ್ಧ ಅಂಕಣಕಾರರು. 'ಆವರಣ' ಎಂಬ ವಿಕೃತಿ-ವಿಮರ್ಶೆ (ಸಂಪಾದಿತ), ಇದ್ರೀಸ್ ಶ್ರೀರವರ ದರವೇಶಿ ಕತೆಗಳು (ಅನುವಾದ), ಗಿಡುಗಗಳಿಗೆ ಬಲಿಯಾದ ಗಿಳಿ ಬೇನ್‌ಜೀರ್ (ಜೀವನಚಿತ್ರ), ಹಲವಾರು ಫ್ರೆಂಚ್, ಹಿಂದಿ ಇಂಗ್ಲಿಷ್ ಭಾಷೆಯ ಸಣ್ಣ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಬೆಂಗಳೂರು ದೆಹಲಿ ಹಾಗೂ ಫ್ರಾನ್ಸ್ ಮತ್ತು ಅಮೆರಿಕಾದಲ್ಲಿ ಪತ್ರಕರ್ತೆಯಾಗಿ ಸೇವೆ ಸಲ್ಲಿಸಿದ್ದಾರೆ, ಲಂಕೇಶ್ ವಾರಪತ್ರಿಕೆಯ ಸಂಪಾದಕರು ಮತ್ತು ಗೈಡ್' ಮಾಸಪತ್ರಿಕೆಯ ಪ್ರಕಾಶಕರು, ಕರ್ನಾಟಕ ಕೋಮು ಸೌಹಾರ್ದ ...
READ MORE