ತಿರುಳು- ಲೇಖಕ ಅಹೋರಾತ್ರ ಅವರ ಲೇಖನಗಳ ಸಂಕಲನ. ಅವರು ಈ ಹಿಂದೆ ರಚಿಸಿದ ಒಳಗನ್ನಡಿ ಕೃತಿಯ ಮುಂದುವರೆದ ಭಾಗ. ಸಸ್ಯಗಳಿಗೂ ಸಂವೇದನೆಗಳಿರುತ್ತವೆ, ಸಸ್ಯಗಳಲ್ಲೂ ಮಾಂಸಾಹಾರಿಗಳೂ ಕೀಟಾಹಾರಿಗಳೂ, ಮತ್ತು ಪ್ರಾಣಿಗಳಲ್ಲಿ ಸಸ್ಯಹಾರಿಗಳೂ, ಮಾಂಸಾಹಾರಿಗಳೂ ಇರುತ್ತವೆ. ಈ ಎಲ್ಲ ಆಹಾರಗಳಲ್ಲೂ ಸಾವು ನೋವು ಖಚಿತವಾಗಿರುತ್ತದೆ. ಹೀಗಿರುವಾಗ, ಎಲ್ಲ ಆಹಾರವೂ ಹಿಂಸಾಹಾರಗಳೇ ಎನ್ನುತ್ತಾರೆ ಲೇಖಕ ಅಹೋರಾತ್ರ.
ಆದರೆ, ಪ್ರಕೃತಿ ಮಾತೆ ನಮಗೆ ಅಹಿಂಸಾಹಾರವನ್ನು ಕೊಟ್ಟಿದೆ ಮತ್ತು ಅದರ ಸೇವನೆ ಔಷಧೀಯವೂ ಹೌದು ಎನ್ನುತ್ತಾರೆ. ಹೀಗೆ ಆಹಾರ ಸಂಸ್ಕೃತಿ, ಬದುಕಿನ ಹಲವು ವಿಭಿನ್ನ ವಿಚಾರಗಳ ಕುರಿತಾದ ಲೇಖನಗಳು ಈ ಕೃತಿಯಲ್ಲಿವೆ.
ಅಹೋರಾತ್ರ ಎಂತಲೇ ಪರಿಚಿತರಾಗಿರುವ ನಟೇಶ ಪೋಲಪಳ್ಳಿಯವರು ಮೂಲತಃ ಬೆಂಗಳೂರಿನವರು. ವ್ಯಕ್ತಿತ್ವ ವಿಕಸನದ ಕುರಿತು ಹಲವು ಪುಸ್ತಕಗಳನ್ನು ಬರೆದಿರುವ ಇವರ ಪ್ರಮುಖ ಕೃತಿಗಳೆಂದರೆ, ಒಳಗನ್ನಡಿ, ಆಯತನ, ಮೂರ್ಖನ ಮಾತುಗಳು, ಗಗನ ಗೋಚರಿ ವಸುಂದರಾ. ...
READ MORE