ದೇಶ ಮೊದಲು ಸಂಪುಟ-2

Author : ಜಿ. ಅನಿಲ್ ಕುಮಾರ್

Pages 223

₹ 140.00




Year of Publication: 2014
Published by: ವಿಕ್ರಂ ಪ್ರಕಾಶನ
Address: #240, 5ನೇ ಮುಖ್ಯ ರಸ್ತೆ, 2ನೇ ಅಡ್ಡ ರಸ್ತೆ, ಕಾಫೀ ಬೋರ್ಡ್ ಲೇಔಟ್ ಕೆಂಪಾಪುರ ಬೆಂಗಳೂರು

Synopsys

ಪತ್ರಕರ್ತ-ಲೇಖಕ ಜಿ. ಅನಿಲ್ ಕುಮಾರ್ ಅವರ ‘ದೇಶ ಮೊದಲು, ಸಂಪುಟ-2’ ಕೃತಿಯು ಲೇಖನಗಳ ಸಂಕಲನವಾಗಿದೆ. ದೇಹದಲ್ಲಿ ನಾಡಿಗಳಿಗಿರುವ ಹಾಗೆ ದೇಶಕ್ಕೂ ನಾಡಿಗಳಿರುತ್ತವೆ. ದೇಶದ ನಾಡಿಮಿಡಿತ, ಹೃದಯ ಬಡಿತಗಳಿಗೆ ಧಕ್ಕೆಯಾಗದ ಹಾಗೆ ರಾಷ್ಟ್ರೀಯ ವಿದ್ಯಮಾನಗಳಿದ್ದಾಗ ಮಾತ್ರ ದೇಶದ ಆರೋಗ್ಯ ಸರಿಯಾಗಿರುತ್ತದೆ. ನಮ್ಮ ಹೃದಯ ಬಡಿತಗಳ ನಡುವೆ ಅನ್ಯೋನ್ಯ ಸಂಯೋಜನೆ ಉಂಟು. ದೇಶದ ಹೃದಯ ಬಡಿತ ತಿಳಿಯುವ ಸೈಥೋಸ್ಕೋಪ್ ನಮ್ಮಲ್ಲೇ ಇದೆ. ಅದನ್ನು ಅರಿಯಲು ಮೇಲಿನ ಕಣ್ಣುಗಳಿಂದ ಮಾತ್ರವಲ್ಲದೇ, ಸಮದೃಷ್ಟಿ ಹಿತದ ಒಳನೋಟಗಳಿರುವ ಒಳಗಣ್ಣಿನಿಂದಲೂ ನೋಡಬೇಕು . ಪ್ರಸ್ತುತ ಕೃತಿಯಲ್ಲಿ ಅಂತಹ ದೃಷ್ಟಿಕೋನ ಒದಗಿಸುವ ವಿಶಿಷ್ಟ ಬರಹಗಳಿವೆ.

About the Author

ಜಿ. ಅನಿಲ್ ಕುಮಾರ್

ಪತ್ರಕರ್ತ, ಅಂಕಣಕಾರ ಜಿ. ಅನಿಲ್ ಕುಮಾರ್ ಅವರು ಮೂಲತಃ ಬೆಂಗಳೂರಿನವರು.ಪ್ರಸ್ತುತ ಅವರು ಲೋಕಶಿಕ್ಷಣ ಟ್ರಸ್ಟ್ ನ ಕರ್ಮವೀರ ವಾರಪತ್ರಿಕೆಯ ಸಂಪಾದಕರು. 1990ರಲ್ಲಿ ಸಾಫ್ಟ್ ವೇರ್ ಉದ್ಯಮಿ ಆಗಿದ್ದರು. ಟೈಮ್ಸ್ ಆಫ್ ಇಂಡಿಯಾ, ಉಷಾ ಕಿರಣ, ಸಂಯುಕ್ತ ಕರ್ನಾಟಕ ಇತರ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ನೀತಿ ಸಂಶೋಧನಾ ಸಂಸ್ಥೆಯ ಸಂಸ್ಥಾಪಕ ಮತ್ತು ನಿರ್ದೇಶಕರಾಗಿದ್ದಾರೆ. ಪ್ರಸ್ತುತ ಕರ್ಮವೀರ ರಪತ್ರಿಕೆಯಲ್ಲಿ ಸಂಪಾದಕರಾಗಿದ್ದಾರೆ. ಕೃತಿಗಳು: ದೇಶ ಮೊದಲು (ಲೇಖನಗಳ ಸಂಕಲನ), ಗ್ರೇಟ್ ಮೈಂಡ್ಸ್ (ವ್ಯಕ್ತಿ ಚಿತ್ರಣ) ...

READ MORE

Related Books