ಮಾರ್ಜಾಲ ಮೋಹಿನಿಯರು

Author : ಸುಕನ್ಯಾ ಕಳಸ

Pages 96

₹ 125.00




Year of Publication: 2024
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಈಸ್ಟ್, ಬೆಂಗಳೂರು - 560 001
Phone: 080 - 22161900 / 22161901 / 22161902

Synopsys

‘ಮಾರ್ಜಾಲ ಮೋಹಿನಿಯರು’ ಸುಕನ್ಯಾ ಕಳಸ ಅವರ ಹಾಸ್ಯ ಲೇಖನಸಂಕಲನವಾಗಿದೆ. ಇಲ್ಲಿಯ ಹಾಸ್ಯ ಲೇಖನಗಳು ಲೇಖಕಿಯ ಸ್ವಾನುಭವಗಳೆನ್ನಬಹುದು. ಅವನ್ನೇ ಸ್ವಲ್ಪ ವಿಸ್ತರಿಸಿ, ಎತ್ತರಿಸಿ, ಅಲ್ಪಸ್ವಲ್ಪ 'ಮೇಕಪ್' ಮಾಡಿಸಿ ಬರೆದಾಗ ಸ್ವಾರಸ್ಯಕರವಾಗಿದ್ದು ಓದಿಸಿಕೊಂಡು ಹೋಗುತ್ತದೆ. ಮೊದ ಮೊದಲು ಮುಗುಳುನಗೆ. ಮತ್ತೆ ನಗುವಿನಲೆ, ಮುಂದೆ ಮೆಚ್ಚುಗೆಯ ಹೊಟ್ಟೆ ಹುಣ್ಣಾಗಿಸುವಂಥ ನಗೆ ಉಕ್ಕಿ ಬರುತ್ತದೆ. ನಾವು ತೀರಾ ಸಾಮಾನ್ಯವೆಂದು ಕಡೆಗಣಿಸುವ ಎಳೆಯೊಂದನ್ನು ಹಿಡಿದು ಹಾಸ್ಯ ಲೇಖಕರು ನಗೆ ಉಕ್ಕಿಸಬಲ್ಲರು. ಮುಖ್ಯವಾಗಿ ನಮ್ಮಲ್ಲಿ ಹಾಸ್ಯಪ್ರಜ್ಞೆ ಇರಬೇಕಷ್ಟೇ ! ಮೂಲತಃ ಲೇಖಕಿ ಕವಯತ್ರಿಯಾದ್ದರಿಂದ ಅತಿಶಯೋಕ್ತಿಗಳು ಅಲ್ಲಲ್ಲಿ ಇಣುಕುಹಾಕಿ ಮುಖ ತೋರಿಸಿವೆ. ಉಳಿದಂತೆ ವೈವಿಧ್ಯಗಳಿಂದ ಕೂಡಿರುವ ಬರಹಗಳೆಲ್ಲ ಉತ್ತಮವಾಗಿದ್ದು ಓದುಗರು ಮೆಚ್ಚುವಂತಿವೆ. 

About the Author

ಸುಕನ್ಯಾ ಕಳಸ
(13 May 1960)

ಕವಯಿತ್ರಿ ಸುಕನ್ಯಾ ಕಳಸ (ಜನನ: 13-05-1960) ಚಿಕ್ಕಮಗಳೂರಿನ ಕಳಸದವರು. ತಂದೆ ಎಚ್.ಪುಟ್ಟದೇವರಯ್ಯ, ತಾಯಿ ನಾಗಮ್ಮ. ಕಳಸದಲ್ಲಿ ಹೂಸ್ಕೂಲ್ ಶಿಕ್ಷಣ, ಶಿವಮೊಗ್ಗದಲ್ಲಿ ಕಾಲೇಜು, ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ. ಪದವೀಧರರು. ಅಂಚೆ ಇಲಾಖೆಯಲ್ವಿಲಿ ಉದ್ಯೋಗ. ಮೈಸೂರು ವಿಶ್ವವಿದ್ಯಾಲಯದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಿಂದ ಆಂಗ್ಲ ಸಾಹಿತ್ಯದ ಎಂ.ಎ. ಪದವೀಧರರು. 2006 ಮಾರ್ಚ್‌ನಲ್ಲಿ ಸ್ವಯಂ ನಿವೃತ್ತಿ. ಇವರು ಬರೆದ ಭಾವಗೀತೆಗಳಿಗೆ ಎಚ್.ಆರ್. ಲೀಲಾವತಿಯವರಿಂದ ರಾಗ ಸಂಯೋಜನೆ, ಮಂಗಳೂರು ಆಕಾಶವಾಣಿಯಿಂದ ಪ್ರಸಾರ. ಹಲವಾರು ರಚನೆಗಳು ದೂರದರ್ಶನದಲ್ಲಿ ಪ್ರಸ್ತುತ. ನಾಟಕದಲ್ಲಿ ಅಭಿನಯ, ನಿರ್ದೇಶನದ ಅನುಭವ. ಜಾನಪದ ಗೀತಗಾಯನದಲ್ಲಿ ವಿಶೇಷ ಪರಿಶ್ರಮ. ಶಾಸ್ತ್ರೀಯ ಸಂಗೀತದಲ್ಲೂ ಪರಿಣತಿ ...

READ MORE

Related Books