ಚಿಂತನಪಥ

Author : ಲಕ್ಷ್ಮಣ್ ತೆಲಗಾವಿ

Pages 438

₹ 350.00




Year of Publication: 2017
Published by: ವಾಲ್ಮೀಕಿ ಸಾಹಿತ್ಯ ಸಂಪದ
Address: ಹರ್ತಿಕೋಟೆ, ಹಿರಿಯೂರು ತಾಲೂಕು, ಚಿತ್ರದುರ್ಗ ಜಿಲ್ಲೆ- 577545
Phone: 9845897667

Synopsys

‘ಚಿಂತನಪಥ’ ಲೇಖಕ ಲಕ್ಷ್ಮಣ್ ತೆಲಗಾವಿ ಅವರ ಸಾಂಸ್ಕೃತಿಕ ಬರಹಗಳ ಸಂಕಲನ. ಈ ಸಂಕಲನದಲ್ಲಿ ಒಟ್ಟು 93 ಬರಹಗಳಿವೆ. ಬರಹಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಿ ಇತಿಹಾಸ, ಸಂಶೋಧನೆ, ದೇಸಿಚಿಂತನೆ, ಸ್ಥಳನಾಮ ವಿವೇಚನೆ, ವ್ಯಕ್ತಿತ್ವ ಚಿತ್ರಣ, ಕನ್ನಡದ ಪ್ರಾಚೀನ ಜೀವಂತ ಸಂಸ್ಥೆ ಕುರಿತು ವೈವಿಧ್ಯಮಯ ಒಳನೋಟಗಳನ್ನು ವಿಶ್ಲೇಷಣಾತ್ಮಕವಾಗಿ ನೀಡಲಾಗಿದೆ.

ಕೃತಿ ಸಾರಸ್ವತಗಳಿಗೆ ಬರೆದ ಮುನ್ನುಡಿ, ಬೆನ್ನುಡಿ, ಚೆನ್ನುಡಿ, ಸಂಪಾದಿತ ಕೃತಿಗಳಿಗೆ ಬರೆದ ಸಂಪಾದಕೀಯ, ಸ್ವಂತಿಕೆಯ ಅನಿಸಿಕೆಗಳಲ್ಲೂ ಇತಿಹಾಸ ಪಥಗಾಮಿಯಾಣ, ಸಂಸ್ಕೃತಿಯ ಬೆಳಕಿನಲ್ಲಿ ಮಸುಕಾದ ಭಾಗಗಳಿಗೆ ನಿರ್ಭಿಡೆಯ ನುಡಿಗಳನ್ನು ನುಡಿವ ವಸ್ತುನಿಷ್ಠ ವಿಮರ್ಶಕರಾಗಿ, ಪ್ರತಿಕ್ರಿಯೆ, ನಿವೇದನೆ, ಪರಿಶೀಲನೆಯಲ್ಲಿ ಸಲಹೆ-ಸೂಚನೆಗಳನ್ನು ಆತ್ಮವಿಶ್ವಾಸದಿಂದ ಗಟ್ಟಿದನಿಯಲ್ಲಿ ಹೇಳಿದ್ದಾರೆ.

ಜೀವನಾನುಭವಗಳ ಅಧ್ಯಯನಗಳ, ಚಿಂತನೆಗಳ ಸಾರವತ್ತಾದ ನೋಟಗಳು 'ಚಿಂತನಪಥ'ದ ನಡೆನುಡಿಯಲ್ಲಿ ಕಾಣಬಹುದಾಗಿದೆ.

About the Author

ಲಕ್ಷ್ಮಣ್ ತೆಲಗಾವಿ
(01 January 1947)

ಇತಿಹಾಸಜ್ಞ, ಸಂಶೋಧಕ ಲಕ್ಷ್ಮಣ್‌ ತೆಲಗಾವಿಯವರು 1947 ಜನವರಿ 01 ಹುಟ್ಟಿದ್ದು ಚಿತ್ರದುರ್ಗದಲ್ಲಿ. ಹಲವಾರು ಐತಿಹಾಸಿಕ, ಸಾಮಾಜಿಕ ಚಳುವಳಿಗಳ  ಗ್ರಂಥಗಳ ರಚಿಸಿ ಮತ್ತು ಪ್ರಕಟಿಸಿದ್ಧಾರೆ. ಚಿತ್ರದುರ್ಗ ದರ್ಶಿನಿ, ಇದು ಚಿತ್ರದುರ್ಗ, ಚಿತ್ರದುರ್ಗ ಹ್ಯಾನ್‌ ಇನ್‌ಸೈಟ್‌, ಬುರುಗು (ಚಿಂತನ ಲೇಖನಗಳು), ಕರ್ನಾಟಕ ಹಿಂದುಳಿದ ವರ್ಗಗಳ ಮತ್ತು ದಲಿತ ಚಳುವಳಿಗಳು, ಮೌರ್ಯ ಮತ್ತು ಶಾತವಾಹನಯುಗ, ಚಿತ್ರದುರ್ಗಜಿಲ್ಲಾ ಇತಿಹಾಸ, ಚಿತ್ರದುರ್ಗ ನಾಯಕ ಅರಸರು, ವಿಜಯನಗರಕಾಲದ ರಾಮಾನುಜಕೂಟಗಳು, ಎಪ್ಪತ್ತೇಳು ಪಾಳಯಗಾರರು, ಚಿತ್ರದುರ್ಗದ ಒನಕೆ ಓಬವ್ವ, ಚಾರಿತ್ರಿಕ ವಿವೇಚನೆ, ದೊಡ್ಡೇರಿಕದನ ಮುಂತಾದ ಕೃತಿಗಳನ್ನು ಸ್ವಾತಿ ಪ್ರಕಾಶನ, ವಾಲ್ಮೀಕಿ ಸಾಹಿತ್ಯ ಸಂಪದ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯಗಳು ...

READ MORE

Related Books