ಕೆ. ಟಿ. ಶಿವಪ್ರಸಾದ ಅವರ ಕೃತಿಗಳು ಹಾಗೂ ಚಿಂತನೆಗಳನ್ನು ಒಳಗೊಂಡ ಲೇಖನಗಳನ್ನು ಕೆ. ಪುಟ್ಟಸ್ವಾಮಿ ಸಂಪಾದಿಸಿದ ಕೃತಿ-ಕಲ್ಲರಳಿ ಹೂವ್ವಂತೆ. ಶಿವಪ್ರಸಾದರ ಕಲಾಕೃತಿಗಳ ಗ್ಯಾಲರಿಯ ಮಾಹಿತಿಯೂ ಒಳಗೊಂಡು, ಕಡಿದಾಳು ಶಾಮಣ್ಣ, ಕೃಪಾಕರ ಸೇನಾನಿ, ಎನ್.ಎಸ್.ಶಂಕರ, ಕಲಾವಿದ ವಿ.ಜಿ.ಅಂದಾನಿ ಸೇರಿದಂತೆ 17ಕ್ಕೂ ಬರೆಹಗಳು ಈ ಕೃತಿಯಲ್ಲಿವೆ. ಸ್ವತಂತ್ರ ಕಲಾವಿದರಾಗಿ ಬೆಳೆದ ಕೆ.ಟಿ.ಶಿವಪ್ರಸಾದ ಅವರು ಸಾಮಾಜಿಕ ಚಳವಳಿಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡ ಅವರ ಹೋರಾಟದ ಮುಖಗಳು ಸಹ ಬರೆಹಗಳಲ್ಲಿ ಅನಾವರಣ ಗೊಂಡಿವೆ.
ಕೆ.ಪುಟ್ಟಸ್ವಾಮಿ- ಹುಟ್ಟಿದ್ದು ಕನಕಪುರ ತಾಲೂಕಿನ ವರಗೆರಹಳ್ಳಿಯಲ್ಲಿ. ಕನಕಪುರ ಕೆ.ಜಿ.ಎಫ್ ಮುಂತಾದೆಡೆಗಳಲ್ಲಿ ಪ್ರಾಥಮಿಕ ಶಿಕ್ಷಣ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಕೃಷಿ ಪದವಿ. ಮೈಸೂರು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಡಿಪ್ಲಮಾ ಹಾಗೂ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಡಿಲಿಟ್ ಪದವಿ. ಪತ್ರಕರ್ತರಾಗಿ, ಕರ್ನಾಟಕ ಸರಕಾರದ ವಾರ್ತಾ ಇಲಾಖೆ, ಅರಣ್ಯ, ಜೀವ ಪರಿಸರ, ಹಿಂದುಳಿದ ವರ್ಗಗಳ ಇಲಾಖೆ, ಯುವಜನ ಮತ್ತು ಕ್ರೀಡಾ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮುಂತಾದೆಡೆ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ...
READ MORE