ಡಿ.ಎಸ್. ನಾಗಭೂಷಣ ಕನ್ನಡದ ಬಹುಮುಖ್ಯ ಸಂಸ್ಕೃತಿ ಚಿಂತಕರು. ಸಮಕಾಲೀನ ವಿದ್ಯಮಾನಗಳನ್ನು ಕುರಿತು ಗಂಭೀರವಾಗಿ ಬರೆಯುತ್ತಿರುವವರು. ಅವರ ಆಸಕ್ತಿಯ ಕ್ಷೇತ್ರ ಬಹುರೂಪಿಯಾದುದು. ಅದರಲ್ಲಿ ಸಾಹಿತ್ಯ ಕೂಡ ಒಂದು. ವಿಶಿಷ್ಟ ಛಾಪಿನ ಸಮಾಜಕ್ಷೇಮವಾದಿ ಚಿಂತನೆಯೊಂದನ್ನು ನಾವು ಅವರ ವಿಶ್ಲೇಷಣೆಯ ಆಳದಲ್ಲಿ ಗುರುತಿಸಬಹುದು. ಅದನ್ನು ತಮ್ಮದೇ ವಿಶಿಷ್ಟ ಭಿನ್ನಧ್ವನಿಯಲ್ಲಿ ಧೀರವಾಗಿ ಸ್ವತಂತ್ರವಾಗಿ ಮಂಡಿಸುವುದು ಅವರ ಶೈಲಿ. ಅವರ ಹೊಸಪುಸ್ತಕ "ವಿಧ ವಿಧ" ರೂಪ ಪ್ರಕಾಶನದ ಮೂಲಕ ಪ್ರಕಟವಾಗಿದೆ. ಇದೊಂದು ಅಪರೂಪದ ವಿಚಾರ ಬರಹಗಳ ಸಂಕಲನ. ಇದರಲ್ಲಿ ವರ್ತಮಾನದ ಸಾಹಿತ್ಯ, ಸಂಸ್ಕೃತಿ ಮತ್ತು ರಾಜಕಾರಣವನ್ನು ಶೋಧಿಸುವ ಬರಹಗಳಿವೆ.
ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಡಿ.ಎಸ್.ನಾಗಭೂಷಣ ಅವರು 1952 ಫೆಬ್ರವರಿ 1 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ತಿಮ್ಮಸಂದ್ರದಲ್ಲಿ ಜನಿಸಿದರು. ದೆಹಲಿ ಆಕಾಶವಾಣಿಯಲ್ಲಿ ಕನ್ನಡ ವಾರ್ತಾ ವಾಚಕರಾಗಿ1975ರಿಂದ 1981ರವರೆ ಸೇವೆ ಸಲ್ಲಿಸಿದ್ದ ಅವರು ಆನಂತರದಲ್ಲಿ ಸಹಾಯಕ ನಿಲಯ ನಿರ್ದೇಶಕರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 2005ರಲ್ಲಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದರು. ಓದು, ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಅವರು ‘ಇಂದಿಗೆ ಬೇಕಾದ ಗಾಂಧಿ’, ‘ಲೋಹಿಯಾ ಜೊತೆಯಲ್ಲಿ’, ‘ರೂಪ ರೂಪಗಳನು ಧಾಟಿ’, ‘ಕುವೆಂಪು ಒಂದು ಪುನರನ್ವೇಷಣೆ’, ‘ಕುವೆಂಪು ಸಾಹಿತ್ಯ ದರ್ಶನ’, ‘ಜಯ ಪ್ರಕಾಶ ನಾರಾಯಣ ...
READ MORE