ಕನಕಾವಲೋಕನ ಸಂಪುಟ - 1

Author : ದೇಜಗೌ (ದೇ. ಜವರೇಗೌಡ)

Pages 1028

₹ 180.00




Year of Publication: 2012
Published by: ಕನ್ನಡ ಮತ್ತು ಸಂಸ್ಕೃತಿ ಇಲಾಖೆ
Address: ಕನ್ನಡ ಭವನ, ಜೆ. ಸಿ. ರಸ್ತೆ, ಬೆಂಗಳೂರು - 560002

Synopsys

ನಾಡು ಕಂಡ ಧೀಮಂತ ವ್ಯಕ್ತಿ-ಸಂತ ಕನಕದಾಸರು. ಅವರ ಜೀವನ ದರ್ಶನ ಮತ್ತು ಕೃತಿದರ್ಶನ ನೀಡುವ ಕೃತಿಯೇ -ಕನಕಾವಲೋಕನ. ದೇಜಗೌ ಸಂಪಾದಿಸಿದ್ದಾರೆ. ಕೃತಿಯಲ್ಲಿ ಎರಡು ಭಾಗಗಳಿವೆ. ಜೀವನದರ್ಶನದಲ್ಲಿ ‘ಕನಕದಾಸರ ಸಮಗ್ರ ಜೀವನ ಚರಿತ್ರೆ, ಕನಕದಾಸರ ಮೂಲಸ್ಥಳ, ಐತಿಹ್ಯಗಳ ನಡುವೆ ಕನಕದಾಸರು, ಕನಕದಾಸರ ಕೆಲವು ಐತಿಹ್ಯಗಳ ಅರ್ಥವ್ಯಾಪ್ತಿ, ಜನಪದರ ಕಣ್ಣಲ್ಲಿ ಶ್ರೀ ಕನಕದಾಸರು, ಕನಕದಾಸರ ಭೌಗೋಳಿಕದರ್ಶನ, ಭಾರತೀಯ ಭಕ್ತಿಪಂಥ ಮತ್ತು ಕನಕದಾಸರು, ಕನಕದಾಸರು ಮತ್ತು ಹರಿದಾಸ ಪರಂಪರೆ, ಕನಕದಾಸರ ಅಧ್ಯಾತ್ಮ ಸಾಧನೆ ಮತ್ತು ಆತ್ಮಶೋಧನೆ, ಮಾನವ ಮತವಾದಿ ಕನಕದಾಸರು.

2ನೇ ವಿಭಾಗ-ಕೃತಿದರ್ಶನದಲ್ಲಿ , ‘ಕನಕದಾಸರ ವರ್ಣನೆಗಳು, ಕನಕದಾಸರ ಕೃತಿಗಳಲ್ಲಿ ರಸಾನುಭವ, ಕನಕ ಸಾಹಿತ್ಯದಲ್ಲಿ ಅಲಂಕಾರಗಳು, ಕನಕದಾಸರ ಕೃತಿಗಳಲ್ಲಿ ಛಂದಃಸ್ವರೂಪ ಮತ್ತು ಕನಕದಾಸರ ಮನೋಧರ್ಮ, ಕನಕದಾಸರ ಕೃತಿಗಳಲ್ಲಿ ಭಾಷಾಸ್ವರೂಪ, ಮೋಹನ ತರಂಗಿಣಿಯ ಆಕರ ವಿವೇಚನೆ, ಮೋಹನ ತರಂಗಿಣಿ-ಪೌರ್ವಾತ್ಯ ಮತ್ತು ಪಾಶ್ಚಾತ್ಯ ಮಹಾಕಾವ್ಯಗಳ ದೃಷ್ಟಿಯಲ್ಲಿ, ಮೋಹನ ತರಂಗಿಣಿಯ ಶೈಲಿ’ ಕುರಿತು ವಿದ್ವತ್ ಪೂರ್ಣವಾದ ಲೇಖನಗಳಿವೆ.

About the Author

ದೇಜಗೌ (ದೇ. ಜವರೇಗೌಡ)
(06 July 1918 - 30 April 2016)

ದೇಜಗೌ ಎಂದು ಚಿರಪರಿಚಿತರಾಗಿದ್ದ ದೇವೇಗೌಡ ಜವರೇಗೌಡ ಕೃಷಿಕ ಕುಟುಂಬದಿಂದ ಬಂದವರು. ಚನ್ನಪಟ್ಟಣ ತಾಲ್ಲೂಕಿನ ಮೂಡಿಗೆರೆಯಲ್ಲಿ 1918ರ ಜುಲೈ 6ರಂದು ಜನಿಸಿದರು. ತಂದೆ ದೇವೇಗೌಡ- ತಾಯಿ ಚೆನ್ನಮ್ಮ. ಚಕ್ಕೆರೆ, ಚನ್ನಪಟ್ಟಣಗಳಲ್ಲಿ ಶಾಲಾ ಶಿಕ್ಷಣ ಮುಗಿಸಿ ಬೆಂಗಳೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ ಮಾಡಿ ಬಿ.ಎ ಪದವಿ ಗಳಿಸಿ ಕೆಲವು ಕಾಲ ಗುಮಾಸ್ತರಾಗಿ ಕೆಲಸ ಮಾಡಿ ಅನಂತರ ಮೈಸೂರಿಗೆ ಹೋಗಿ ಎಂ.ಎ. ಪದವಿ ಗಳಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕ (1944) ಕೆಲಸಕ್ಕೆ ಸೇರಿದ ಅವರು ಅನಂತರ ಉಪಪ್ರಾಧ್ಯಾಪಕ, ಪರೀಕ್ಷಾಧಿಕಾರಿ, ಪ್ರಾಂಶುಪಾಲರು, ಇಲಾಖಾಮುಖ್ಯರು, ನಿರ್ದೇಶಕರು, ಕೊನೆಗೆ ಮೈಸೂರು ವಿಶ್ವವಿದ್ಯಾಲಯದ ಗೌರವಾನ್ವಿತ ಉಪಕುಲಪತಿಯಾಗಿ ನಿವೃತ್ತರಾದರು. ಕುವೆಂಪು ವಿದ್ಯಾವರ್ಧಕ ...

READ MORE

Related Books