ಭಾರತೀಯ ಕಾವ್ಯಮೀಮಾಂಸೆಯಲ್ಲಿ ‘ಭಾರತೀಯ ಕಾವ್ಯಮೀಮಾಂಸ’ದಷ್ಟು ಕನ್ನಡದಲ್ಲಿ ಇಷ್ಟು ಸಂಗ್ರಾಹಕವು, ಸರಳವಾದ ಕೃತಿ ಇದುವರೆಗೂ ಬಂದಿಲ್ಲ ಎಂದೇ ಹೇಳಬಹುದು. ಈ ಜಿಜ್ಞಾಸೆಯಲ್ಲಿ ಮೂರು ಭಾಗಗಳಾಗಿ ವಿಂಗಡಿಸಿದ್ದು ಮೊದಲ ಭಾಗದಲ್ಲಿ ಅಲಂಕಾರ ಶಾಸ್ತ್ರದ ಬೆಳವಣಿಗೆ, ಎರಡನೆಯ ಭಾಗಲ್ಲಿ ಕವಿಕಾವ್ಯ ಸಹೃದಯ ವಿಚಾರ, ಮೂರನೆಯ ಭಾಗದಲ್ಲಿ ರಸ, ಧ್ವನಿ, ಔಚಿತ್ಯ ಇವುಗಳ ವಿಚಾರ ನಿರೂಪಿತವಾಗಿದೆ. ಇದಕ್ಕೆ ಕುವೆಂಪು ಅವರ ಮುನ್ನುಡಿ ಇದೆ.
ತೀ.ನಂ.ಶ್ರೀ ಎಂತಲೇ ಪರಿಚಿತರಾಗಿರುವ ತೀರ್ಥಪುರ ನಂಜುಂಡಯ್ಯನವರ ಮಗ ಶ್ರೀಕಂಠಯ್ಯ ಅವರ ಹುಟ್ಟೂರು ಚಿಕ್ಕನಾಯಕನಹಳ್ಳಿ ಹತ್ತಿರದ ತೀರ್ಥಪುರ. ಮೈಸೂರಿನಲ್ಲಿ ಪದವಿ ಪಡೆದಿದ್ದ ಇವರು ಸಿವಿಲ್ ಸರ್ವೀಸ್ ಪರೀಕ್ಷೆ ಪಾಸು ಮಾಡಿ ಕೇವಲ ಒಂದುವರೆ ತಿಂಗಳು ಮಾತ್ರ ಅಮಾಲ್ದಾರರಾಗಿ ಸೇವೆ ಸಲ್ಲಿಸಿದ್ದ ಅವರು ಕಾಲೇಜಿನ ಅಧ್ಯಾಪಕರಾದರು. ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಬರೆದ ಕೃತಿಗಳೆಂದರೆ ಒಲುಮೆ, ಹೆಣ್ಣು ಮಕ್ಕಳ ಪದಗಳು, ಬಿಡಿಮುತ್ತು, ಪಂಪ, ನಂಬಿಯಣ್ಣನರಗಳೆ, ರನ್ನನ ಗದಾಯುದ್ಧ ಸಂಗ್ರಹ, ಭಾರತೀಯ ಕಾವ್ಯ ಮೀಮಾಂಸೆ, ಕನ್ನಡ ಮಾಧ್ಯಮ ವ್ಯಾಕರಣ, ರಾಕ್ಷಸನ ಮುದ್ರಿಕೆ, ನಂಟರು ಇವರ ಪ್ರಮುಖ ಕೃತಿಗಳು. ಇವರು ಬರೆದಿರುವ ಭಾರತೀಯ ...
READ MORE