‘ಜೀವನವೇನೋ ದೊಡ್ಡದು..’ ಲೇಖಕ ಬಿ.ಆರ್. ಸುಬ್ರಹ್ಮಣ್ಯ ಅವರ ಚಿಂತನಾತ್ಮಕ ಲೇಖನಗಳ ಸಂಕಲನ. ಈ ಕೃತಿಗೆ ಡಾ. ಮೀರಾಸಾಬಿಹಳ್ಳಿ ಶಿವಣ್ಣ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ 'ಬಿ.ಆರ್. ಸುಬ್ರಹ್ಮಣ್ಯ ಅವರ ಚೊಚ್ಚಲ ಕೃತಿ ಜೀವನವೇನೋ ದೊಡ್ಡದು ಮೊದಲ ನೋಟಕ್ಕೇ ನಮ್ಮ ಗಮನಸೆಳೆಯುವಷ್ಟು ಪರಿಣಾಮಕಾರಿಯಾಗಿದೆ' ಎನ್ನುತ್ತಾರೆ. ಜೊತೆಗೆ ಜೀವನದಲ್ಲಿ ಅವರು ಕಂಡುಂಡ ಅನೇಕ ವಿಚಾರಗಳು ಅವರನ್ನು ಕಾಡಿವೆ. ಎಷ್ಟೋ ಬಾರಿ ಬದುಕು ಏಕೆ ಹೀಗೆ..ಎಂಬ ಅವರ ಲೋಕಾಭಿರಾಮ ಚಿಂತನೆಗಳು ನಮ್ಮನ್ನು ಚಿಂತನೆಗೆ ಹಚ್ಚುವಷ್ಟು ಗಂಭೀರವಾಗಿವೆ. ಎಲ್ಲವನ್ನೂ ಪ್ರಶ್ನಿಸುವ ಅವರ ಗುಣ ಅತ್ಯಂತ ಆರೋಗ್ಯಕರವಾದ ನೆಲೆಯಲ್ಲೇ ಹರಿದಾಡಿದೆ. ಎಷ್ಟೋ ಬಾರಿ ಅವರ ಜಾಣತನದ ಪ್ರತಿಪಾದನೆಗಳ ಬಗ್ಗೆ ಒಂದು ಬಗೆಯ ಸಂಶಯ ಮೂಡತೊಡಗುತ್ತಿದ್ದಂತೆ, ಮತ್ತೆ ಅದನ್ನು ವೈಚಾರಿಕ ನೆಲೆಯ ಇನ್ನೊಂದು ಮಗ್ಗಲಿಂದ ನೋಡುವ ಮೂಲಕ ಭಿನ್ನ ಹಾದಿ ತುಳಿಯುತ್ತದೆ ಎಂದಿದ್ದಾರೆ. ಅಲ್ಲದೇ ಕೃತಿಯುದ್ದಕ್ಕೂ ಚಿಂತನೆಯ ಮಿಂಚುಗಳು ಹೊಳೆಯುತ್ತಾ ಹೋಗುತ್ತವೆ. ಹಾಗೆಯೇ ಇವತ್ತು ಜೀವನ ಸಾಗುತ್ತಿರುವ ದಾರಿಯ ಬಗ್ಗೆ ವೈಚಾರಿಕ ಎಚ್ಚರದೊಂದಿಗೆ ವಿಷಾದದ ಛಾಯೆಯೂ ಸ್ಥಾಯಿಯಾಗಿ ಹರಿಯುವುದರಿಂದ ಕೃತಿಗೆ ಒಂದು ರೀತಿಯ ಅನನ್ಯತೆ ಪ್ರಾಪ್ತವಾಗಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಕನ್ನಡ ಪುಸ್ತಕಗಳ ಅಪ್ಪಟ ಓದುಗರಾದ ಬಿ.ಆರ್. ಸುಬ್ರಹ್ಮಣ್ಯ ಕನ್ನಡ ಸಾಹಿತ್ಯ ಪ್ರೇಮಿ. ಕಳೆದ ಹತ್ತು ವರ್ಷಗಳಿಂದ ಓದಿನ ಜೊತೆಜೊತೆಗೆ ಬರವಣಿಗೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ಬರೆದ ಕಥೆ, ಕವಿತೆ ಮತ್ತು ಬಿಡಿ ಬರಹಗಳು ಪ್ರಜಾವಾಣಿ, ವಿಜಯವಾಣಿ, ಹಾಯ್ ಬೆಂಗಳೂರು ಸೇರಿದಂತೆ ರಾಜ್ಯ ಮಟ್ಟದ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅವರ ಚೊಚ್ಚಲ ಕೃತಿ “ಜೀವನವೇನೋ ದೊಡ್ಡದು...” 2015ರಲ್ಲಿ ಬಿಡುಗಡೆಯಾಗಿದೆ (ಪ್ರಕಾಶಕರು: ಸಿವಿಜಿ ಇಂಡಿಯಾ, ಬೆಂಗಳೂರು). ಇದು ಚಿಂತನಾತ್ಮಕ ಲೇಖನಗಳ ಸಂಗ್ರಹ. ಹಲವು ಉತ್ತಮ ಸಮಕಾಲೀನ ಮಾಹಿತಿಗಳು, ಜಿಜ್ಞಾಸೆ, ವಿಮರ್ಶೆ, ವಿಶ್ಲೇಷಣೆ, ಜನಗಳ ತಪ್ಪು ಗ್ರಹಿಕೆಗಳು ಮತ್ತು ಅವುಗಳ ಸರಿಪಡಿಸುವಿಕೆ, ...
READ MORE