ಲೋಹಿಯಾ ವಾಣಿ ಕೃತಿಯು ಡಿ.ಎಸ್ ನಾಗಭೂಷಣ ಅವರ ಲೇಖನಗಳ ಸಂಗ್ರಹವಾಗಿದೆ. ಲೋಹಿಯಾವಾಣಿ ಲೋಹಿಯಾ ಅವರ ಸಾಹಿತ್ಯ ಮತ್ತು ಭಾಷಣಗಳಿಂದ ಆಯ್ದ ಪರಿಹಾರ ಉಲ್ಲೇಖಗಳ ಕಿರು ಸಂಗ್ರಹ. ಲೋಹಿಯಾ ಅಪೂರ್ವ ಮುನ್ನೋಟದ ಚಿಂತಕರೂ ಮತ್ತು ರಾಜಕಾರಣಿಯೂ ಆಗಿದ್ದುದರಿಂದ ಈ ಉಲ್ಲೇಖಗಳು ಇಂದೂ ಎಚ್ಚರಿಕೆಯ ಘಂಟೆಗಳಂತೆ, ಬೆಳಕಿನ ದಾರಿಗಳಂತೆ, ಹೊಸ ಅರಿವು ಮತ್ತು ಸ್ಫೂರ್ತಿ ತುಂಬಿ ಲೋಹಿಯಾ ಸಾಹಿತ್ಯವನ್ನೂ ಮತ್ತೊಮ್ಮೆ ತಡಕಿ, ಇಂದಿನ ಸಂದರ್ಭಕ್ಕೂ ಪ್ರಸ್ತುತವಾಗಬಲ್ಲ ಉಲ್ಲೇಖಗಳನ್ನು ಹೊಸದಾಗಿಸಂಪಾದಿಸಿ, ಅನುವಾದಿಸಿ, ಹೊಸ ವಿನ್ಯಾಸದಲ್ಲಿ ಜೋಡಿಸಿರುವ ಪುಸ್ತಕವಿದು.
ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಡಿ.ಎಸ್.ನಾಗಭೂಷಣ ಅವರು 1952 ಫೆಬ್ರವರಿ 1 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ತಿಮ್ಮಸಂದ್ರದಲ್ಲಿ ಜನಿಸಿದರು. ದೆಹಲಿ ಆಕಾಶವಾಣಿಯಲ್ಲಿ ಕನ್ನಡ ವಾರ್ತಾ ವಾಚಕರಾಗಿ1975ರಿಂದ 1981ರವರೆ ಸೇವೆ ಸಲ್ಲಿಸಿದ್ದ ಅವರು ಆನಂತರದಲ್ಲಿ ಸಹಾಯಕ ನಿಲಯ ನಿರ್ದೇಶಕರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 2005ರಲ್ಲಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದರು. ಓದು, ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಅವರು ‘ಇಂದಿಗೆ ಬೇಕಾದ ಗಾಂಧಿ’, ‘ಲೋಹಿಯಾ ಜೊತೆಯಲ್ಲಿ’, ‘ರೂಪ ರೂಪಗಳನು ಧಾಟಿ’, ‘ಕುವೆಂಪು ಒಂದು ಪುನರನ್ವೇಷಣೆ’, ‘ಕುವೆಂಪು ಸಾಹಿತ್ಯ ದರ್ಶನ’, ‘ಜಯ ಪ್ರಕಾಶ ನಾರಾಯಣ ...
READ MORE