ಕಿರು ಸಂವಾದ

Author : ಅರವಿಂದ ಚೊಕ್ಕಾಡಿ

₹ 425.00




Year of Publication: 2021
Published by: ಪೃಥ್ವಿ ಪ್ರಕಾಶನ
Address: ನಂ.-7, 9 ನೇ ಕ್ರಾಸ್, 7ನೇ ಮುಖ್ಯರಸ್ತೆ, ವಿವೇಕಾನಂದ ನಗರ, ಮೈಸೂರು -570023.
Phone: 8970414165

Synopsys

ಇಂದು ನಮ್ಮ ದೇಶದ ಸುಮಾರು ಮುಕ್ಕಾಲು ಪಾಲು ಯುವಪೀಳಿಗೆ ಸೋಶಿಯಲ್ ನೆಟ್ವರ್ಕಿಂಗ್ ಸೈಟ್‌ನಲ್ಲಿ ಮುಳುಗಿ ಹೋಗಿದ್ದಾರೆ. ನಾನಾ ರೀತಿಯ ಅನಾಹುತಗಳ, ಅದರ ದುರುಪಯೋಗದ ವರದಿಗಳೂ ಆಗಾಗ ಬರುತ್ತಲೇ ಇವೆ. ಇಂತಹ ದುರುಪಯೋಗಗಳ ವರದಿಗಳನ್ನು ಗಮನಿಸಿ ಯುವ ಪೀಳಿಗೆಯನ್ನು ಜಾಗೃತ ಗೊಳಿಸುವುದಕ್ಕಾಗಿ ನಮ್ಮ ದೇಶದಲ್ಲಿ ಯುಜಿಸಿ ಕೆಲಸಮಯದ ಹಿಂದೆಯೇ ( ಬಹುಶ: 2019)ದೇಶಾದ್ಯಂತ ಸ್ನಾತಕ ಪಠ್ಯ ಕ್ರಮದಲ್ಲಿ ಸೋಶಿಯಲ್ ಮೀಡಿಯಾದ ನೈತಿಕತೆ ಮತ್ತು ಶಿಷ್ಟಾಚಾರ ವಿಷಯವನ್ನು ಸೇರಿಸುವ ತೀರ್ಮಾನವನ್ನು ಕೈಗೊಂಡಿರುವ ವರದಿಯೊಂದು ಬಂದಿತ್ತು. ಈ ಮಾತು ಮತ್ತೆ ನೆನಪಾಗುವುದಕ್ಕೆ ಕಾರಣ ‘ಕಿರು ಸಂವಾದ’ ಎಂಬ ಕೃತಿ. ಕನ್ನಡದ ಹೆಸರಾಂತ (‘ಮಧ್ಯಮ ಪಂಥದ’ಎಂದು ಬೇಕಾದರೂ ಸೇರಿಸಬಹುದೇನೋ) ವಿಮರ್ಶಕರಾದ ಅರವಿಂದ ಚೊಕ್ಕಾಡಿಯವರ ಸ್ನೇಹಿತರು ಫೇಸ್ ಬುಕ್ ನಲ್ಲಿ ಕೇಳಿದ ಪ್ರಶ್ನೆಗಳೊಂದಿಗೆ ಅವರು ನಡೆಸಿದ ಸಂವಾದಗಳ ಗುಚ್ಛವೇ ‘ಕಿರು ಸಂವಾದ’ ಕೃತಿ. ಇಲ್ಲಿ 195 ವಿವಿಧ ಸಮಕಾಲೀನ ವಿಷಯಗಳ ಕುರಿತು ಸಂವಾದ ನಡೆಸಲಾಗಿದೆ

About the Author

ಅರವಿಂದ ಚೊಕ್ಕಾಡಿ
(21 December 1975)

 ಅರವಿಂದ ಚೊಕ್ಕಾಡಿ ಅವರು 1975ರ ಡಿಸೆಂಬರ್ 21ರಂದು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ಮಾಲೆತ್ತೋಡಿ  ಎಂಬಲ್ಲಿ ಜನಿಸಿದರು. ತಂದೆ ಕುಕ್ಕೆಮನೆ ವೆಂಕಟ್ರಮಣಯ್ಯ ಗೋಪಾಲ ಶರ್ಮ. ತಾಯಿ ಪಾರ್ವತಿ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಚಕ್ಕಾಡಿಯಲ್ಲಿ ಮುಗಿಸಿ ಪದವಿ ಪೂರ್ವ ಮತ್ತು ಬಿ.ಎ ಪದವಿಯನ್ನು ಸುಳ್ಯದ ನೆಕರೂ ಮೆಮೋರಿಯಲ್ ಕಾಲೇಜಿನಲ್ಲಿ ಪಡೆದರು. ಮಂಗಳೂರಿನ ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯದಿಂದ  ಬಿ. ಇಡ್. ಪದವೀಧರರಾಗಿರುವ ಇವರು  ಕರ್ನಾಟಕ ರಾಜ್ಯ  ಮುಕ್ತ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂ. ಎ ಪದವಿ ಪಡೆದರು. 2011 ರಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ...

READ MORE

Related Books