ಲೇಖಕ ಪ.ರಾ.ಕೃಷ್ಣಮೂರ್ತಿ ಅವರು ಬರೆದಿರುವ ಕೃತಿ ಜೀವನ ಜಾಗೃತಿ – 3. ಓಶೋರವರು ಬದುಕಿನಲ್ಲಿ ಓದಿರುವ ಗ್ರಂಥಗಳು 16,500 ಇರಬಹುದು. ಹಿಂದಿ, ಇಂಗ್ಲೀಷಿನಲ್ಲಿ ನೀಡಿದ ಪ್ರವಚನಗಳೇ ಅಸಂಖ್ಯ. ಇಡೀ ಪ್ರಪಂಚವನ್ನು ಪ್ರವಾಸ ಮಾಡಿ ದೇಶ, ಭಾಷೆ, ಸಂಸ್ಕೃತಿಯನ್ನು ಅಭ್ಯಾಸ ಮಾಡಿ ಎಲ್ಲ ಕಡೆ ತಮ್ಮದೇ ಶೈಲಿಯಿಂದ, ನೇರ ನುಡಿಯಿಂದ ತಾವೇ ಒಂದು ರೀತಿಯಲ್ಲಿ ವಿಶಿಷ್ಟವಾದ “ತಾವೋ” ಆಗಿದ್ದರು. ಇವರ ಜೀವನ ಚರಿತ್ರೆಯು ಒಂದು ನಿಗೂಢವಾದ ಸ್ಫೂರ್ತಿಯಿಂದ ತುಂಬಿದ ಅನೇಕ ಸಾಹಸಗಳನ್ನು ಒಳಗೊಂಡ ಐತಿಹಾಸಿಕ ಕಾದಂಬರಿಯಂತೆ ನಮ್ಮನ್ನು ವಾಸ್ತುವಸ್ಥಿತಿಗೆ ಕರೆದೊಯ್ಯುವಂತಹ ಸಮಗ್ರ ಗ್ರಂಥವಾಗಿದೆ.
ಪ.ರಾ. ಕೃಷ್ಣಮೂರ್ತಿ ಅವರು ಸಂಸ್ಕಾರ ಭಾರತಿ ಕರ್ನಾಟಕ ದಕ್ಷಿಣ ವಿಭಾಗದ ಅಖಿಲ ಭಾರತೀಯ ಸಹ ಸಂಘಟನಾ ಕಾರ್ಯದರ್ಶಿಗಳು.ಮೂಲತಃ ಕೋಣಂದೂರಿನ (ಜನನ: 20-07-1951) ನಗರ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರೈಸಿದರು. ಸದ್ಯ, ಸಂಸ್ಕಾರ ಭಾರತಿಯ ಆಗ್ರಾ ಕೇಂದ್ರ ಕಚೇರಿಯಲ್ಲಿದ್ದಾರೆ. ...
READ MORE