ಕರಿಯು ಕನ್ನಡಿಯೊಳಗೆ

Author : ರಾಜಶೇಖರ ಬಿರಾದಾರ

Pages 131

₹ 120.00




Year of Publication: 2021
Published by: ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ
Address: ಸರಸ್ವತಿ ಗೋದಾಮ, ಕಲಬುರಗಿ--585101
Phone: 9448124431

Synopsys

ಲೇಖಕ ರಾಜಶೇಖರ ಬಿರಾದಾರ ಅವರ ಲೇಖನಗಳ ಸಂಗ್ರಹ ಕೃತಿ- ಕರಿಯು ಕನ್ನಡಿಯೊಳಗೆ. 13 ಲೇಖನಗಳಿವೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಶಿವಾನಂದ ವಿರಕ್ತಮಠ ಅವರು ಕೃತಿಗೆ ಮುನ್ನುಡಿ ಬರೆದು ‘ವಸ್ತುವಿನ ಹರವು , ನಿರೂಪಣಾ ಶೈಲಿ, ವಿಶ್ಲೇಷಣೆ, ಔಚಿತ್ಯಪೂರ್ಣ ಭಾಷಾ ಬಳಕೆಯಿಂದಾಗಿ ಬರಹಗಳ ಗಮನ ಸೆಳೆಯುತ್ತವೆ. ವಚನಕಾರರು, ಹರಿಹರ, ಕನಕದಾಸ, ರತ್ನಾಕರವರ್ಣಿ, ಅನುಭಾವಿ ರೇವಣಸಿದ್ಧಯ್ಯ, ‌ಜನಪದ ಚೌಡಿಕೆ, ಆಧುನಿಕ ಸಾಹಿತ್ಯದ ಕಾವ್ಯ ಮತ್ತು ನಾಟಕ ಪ್ರಕಾರಗಳ ದಿಗ್ಗಜರಾದ ದ.ರಾ. ಬೇಂದ್ರೆ, ಚಂದ್ರಶೇಖರ ಕಂಬಾರರಲ್ಲದೆ ಹೊಸ ಚಿಂತನೆಗಳಾದ ಮುಸ್ಲಿಂ ಸಂವೇದನೆ, ಮಹಿಳಾ ವಾದ ಹಾಗೂ ಪರಿಸರ ವಾದಗಳ ಚಿಂತನೆಗಳ ಗ್ರಹಿಕೆಗಳು ವಿಸ್ತೃತವಾಗಿ ಮಂಡಿತವಾಗಿವೆ’ ಎಂದು ಪ್ರಶಂಸಿಸಿದ್ದಾರೆ.

About the Author

ರಾಜಶೇಖರ ಬಿರಾದಾರ

ಲೇಖಕ ರಾಜಶೇಖರ ಬಿರದಾರ ಮೂಲತಃ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬೋನ್ಹಾಳ ಗ್ರಾಮದವರು. ತಂದೆ ಹಣಮಂತ್ರಾಯಗೌಡ ಬಿರಾದಾರ. ತಾಯಿ ಗಂಗಮ್ಮ ಹ. ಬಿರಾದಾರ. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಪೇಠ ಅಮ್ಮಾಪುರದಲ್ಲಿ ಪ್ರೌಢಶಿಕ್ಷಣ, ಸುರಪುರದ ಪ್ರಭು ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪದವಿ ಹಾಗೂ ಬೆಂಗಳೂರಿನ ಜಾಲಹಳ್ಳಿಯಲ್ಲಿ ಬಿ.ಇಡಿ ನಂತರ ಕರ್ನಾಟಕ ವಿ.ವಿ. ಯಿಂದ ಎಂ.ಎ. ಪದವಿ, ತದನಂತರ, ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಪಡೆದಿದ್ದಾರೆ. ಪ್ರಸ್ತುತ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ  ಯರಗಟ್ಟಿಯ ಎಂ. ಮಾಮನಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ.  ಕೃತಿಗಳು : ವಚನ ಸಾಹಿತ್ಯ ಮತ್ತು ...

READ MORE

Reviews

ಹೊಸ ಓದಿನ ಅನುಭವ ಕಥನ: ಕರಿಯು ಕನ್ನಡಿಯೊಳಗೆ...

ಡಾ.ರಾಜಶೇಖರ ಬಿರಾದಾರ ಅವರು ಶಿಸ್ತಿನಿಂದ ಅಧ್ಯಯನ ಹಾಗೂ ಅಧ್ಯಾಪನದಲ್ಲಿ ತೊಡಗಿಸಿಕೊಂಡ ಹೊಸ ತಲೆಮಾರಿನ ಪ್ರಮುಖ ಲೇಖಕರು.ಅವರ ಎರಡನೇ ವಿಮರ್ಶಾ ಸಂಕಲನ ಕರಿಯು ಕನ್ನಡಿಯೊಳಗೆ ಇಂದು ಲೋಕಾರ್ಪಣೆ ಆಗುತ್ತಿರುವುದು ಸಂತಸದ ಸಂಗತಿ.ಆ ಕೃತಿಯನ್ನು ಪರಿಚಯಿಸಲು ನನಗೆ ಸಂತೋಷವೆನಿಸುತ್ತದೆ.

ಅಧ್ಯಾಪಕ ಆದವನು ನಿರಂತರ ಅಧ್ಯಯನ ಶೀಲನಾಗಿರಬೇಕು ಮತ್ತು ಓದಿದ ವಿಷಯಗಳನ್ನು ಆ ಅಧ್ಯಾಪಕ ತನ್ನ ಅನುಭವದ ಮೂಸೆಯಲ್ಲಿ ಗ್ರಹಿಸಿ ಹೊಸತನವನ್ನು ಹುಡುಕಿ ಅದನ್ನು ಬರವಣಿಗೆಯ ಮೂಲಕ ಲೇಖನ ಸಿದ್ದ ಮಾಡಿದರೆ ಅದನ್ನು ಓದಿದವರಿಗೂ ಮೂಲ ಕೃತಿಯನ್ನು ಓದಿದ ಅನುಭವವನ್ನು ತಂದುಕೊಡುತ್ತದೆ ಎನ್ನುವುದಕ್ಕೆ ಈ ಕೃತಿ ಉದಾಹರಣೆ.

ಈ ಕೃತಿಯಲ್ಲಿ ಹದಿಮೂರು ಲೇಖನಗಳಿವೆ.ಒಂದಕ್ಕಿಂತ ಒಂದು ಹೊಸ ಆಲೋಚನೆಗೆ ಒಯ್ಯುವ ಲೇಖನಗಳು.ಲೇಖನಗಳ ವಸ್ತವಿನ ವಿಸ್ತಾರ ವ್ಯಾಪಕವಾಗಿದೆ.ಹಳಗನ್ನಡ ಸಾಹಿತ್ಯ ಕೃತಿಗಳಿಂದ ಹಿಡಿದು ಹೊಸಕನ್ನಡದ ಪ್ರಮುಖ ಕೃತಿಗಳವರೆಗೆ,ಜಾನಪದ ಮಾತೃಭಾಷಾ ಪ್ರೇಮ,ಮುಸ್ಲಿಂ ಸಂವೇದನೆ ಹೀಗೆ ಹತ್ತು ಹಲವು ವಿಶೇಷಗಳಿಂದ ಈ ಕೃತಿ ಪ್ರಾಮುಖ್ಯವನ್ನು ಪಡೆದಿದೆ.

ಪದವಿ ಹಾಗೂ ವಿವಿಧ ವಿಶ್ವವಿದ್ಯಾಲಯಗಳು ಏರ್ಡಿಸಿರುವ ವಿವಿಧ ಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಂಡಿಸಿರುವ ವಿಷಯಗಳ ಲೇಖನಗಳ ಸಂಗ್ರಹ ಇದಾಗಿರುವುದರಿಂದ ಪ್ರತಿ ಲೇಖಗಳು ವೈವಿಧ್ಯಮಯವಾಗಿವೆ.

ಕರಿಯು ಕನ್ನಡಿಯೊಳಗೆ ವಿಮರ್ಶಾ ಲೇಖನಗಳ ಸಂಗ್ರಹದ ಶೀರ್ಷಿಕಾ ಲೇಖನ ಆಧ್ಯಾತ್ಮಿಕ ಔನತ್ಯವನ್ನು ರೇವಣಸಿದ್ಧಯ್ಯ ಅವರ ಪುಸ್ತಕದ ವಿಶ್ಲೇಷಣೆಯನ್ನು ಕಾಣಬಹುದು.ಇದರ ಜೊತೆಗೆ ಮಾತೃಭಾಷಾ ಪ್ರೇಮಿ ಎಲಿಸರ್ ಬೆನ್ ಯಹೂದ ಎಂಬ ಇಸ್ರೇಲಿನ ಈ ವ್ಯಕ್ತಿಯ ಭಾಷಾ ಪ್ರೇಮವನ್ನು ಉಲ್ಲೇಖಿಸುತ್ತಾ ಕನ್ನಡಿಗರಿಗೂ ತಮ್ಮ ಭಾಷೆಯ ಮೇಲೆ ಇರಬೇಕಾದ ಭಾಷಾ ಪ್ರೇಮವನ್ನು ಕುರಿತು ಎಚ್ಚರಿಸಿದ್ದಾರೆ.

ಬೇಂದ್ರೆಯವರ ಅನ್ನಾವತಾರ ಕವಿತೆಯ ವಿವರಣೆ,ಶ್ರೇಣ್ಯಾರೋಹ ಸಂಧಿ,ಬಸವಾದಿ ಶರಣರು ಮತ್ತು ಜಾಗತಿಕ ದಾರ್ಶನಿಕರು ಮುಂತಾದವುಗಳು ಆಧ್ಯಯನಕ್ಕೆ ಯೋಗ್ಯವಾದವುಗಳು ಅಷ್ಟೇ ಅಲ್ಲ ಈ ಕೃತಿ ಸಂಗ್ಹಯೋಗ್ಯ ಎನ್ನುವುದು ನನ್ನ ಭಾವನೆ.
ಗೆಳೆಯ ಡಾ ರಾಜಶೇಖರ ಬಿರಾದಾರ ಅವರದು ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ಗುಣ.ಒಳ್ಳೆಯ ಉಪಾಧ್ಯಾಯನಾದವನು ಒಳ್ಳೆಯ ಕೇಳುಗನು ಆಗಿರಬೇಕು ಎನ್ನುವದಕ್ಕೆ ಬಿರಾದಾರ ಅವರು ಉದಾಹರಣೆ.ಹೊಸ ಹೊಸ ವಿಷಯಗಳು ಯಾರಿಂದಲೇ ಸಿಗಲಿ ಅದನ್ನು ತಾಳ್ಮೆಯಿಂದ ಕೇಳುವ ಅವರ ಈ ಹವ್ಯಾಸ ನಮಗೆಲ್ಲರಿಗೂ ಅನುಕರಣೀಯ.

ಸದಭಿರುಚಿಯ ಲೇಖನಗಳನ್ನು ಹೊತ್ತ ಇನ್ನೂ ಅನೇಕ ಕೃತಿಗಳು ಡಾ.ರಾಜಶೇಖರ ಬಿರಾದಾರ ಅವರಿಂದ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ಬರಲಿ ಎಂದು ಆಶಿಸಿ ಅವರನ್ನು ಅಭಿನಂದಿಸುತ್ತೇನೆ.

ಡಾ.ಮಲ್ಲಿಕಾರ್ಜುನ ಎಸ್ ಇಂಚಲ
ಪ್ರಭಾರಿ ಪ್ರಾಚಾರ್ಯರು
ಕೆ ಆರ್ ಸಿ ಇ ಸಂಸ್ಥೆಯ
ಪದವಿ ಪೂರ್ವ ಮಹಾವಿದ್ಯಾಲಯ
ಬೈಲಹೊಂಗಲ.

Related Books