ನಡೆನುಡಿ ಸಿದ್ದಾಂತವಾದಲ್ಲಿ

Author : ರಘುಶಂಖ ಭಾತಂಬ್ರಾ

Pages 170

₹ 120.00




Year of Publication: 2017
Published by: ವಚನ ಚೇತನ ಟ್ರಸ್ಟ್ (ನೋಂ)
Address: ಬಸವಶ್ರಾಯ ಪ್ಲಾ್ಟ್ ಸಂಖ್ಯೆ, 14-15, ಮುಕ್ತಿಧಾಮ ರಸ್ತೆ, ಮಾಧವನಗರ ಬೀದರ-585402
Phone: 9916424411

Synopsys

‘ನಡೆನುಡಿ ಸಿದ್ದಾಂತದಲ್ಲಿ’ ಕೃತಿಯು ರಘುಶಂಖ ಭಾತ್ರಂಬಾ ಅವರ ಲೇಖನಸಂಕಲನವಾಗಿದೆ. ಕೃತಿಯಲ್ಲಿನ 15 ಅಧ್ಯಾಯಗಳಾದ, ವ್ರತಾಚಾರನಿಷ್ಠೆಯ ಅಕ್ಕಮ್ಮ, ಮನೆ-ಮನಗಳ ಕಸಗುಡಿಸುವ ಸತ್ಯಕ್ಕ, ಕೆಲವು ವಚನಕಾರ್ತಿಯರು, ಬೆಡಗಿನ ಬೆಳಕು : ಅಲ್ಲಮಪ್ರಭುದೇವರು, ಉರಿಲಿಂಗಪೆದ್ದಿ ಪರಂಪರೆ ಮತ್ತು ಸಂಪ್ರದಾಯ, ವೀರಮಾಹೇಶ್ವರ : ಏಕಾಂತ ರಾಮಯ್ಯ, ಸಾಮಾಜಿಕ ಸ್ವಾಸ್ಥ್ಯ : ನಗೆಯ ಮಾರಿತಂದೆ, ನುಲಿಯ ಚಂದಯ್ಯನ ಕಾಯಕನಿಷ್ಠೆ, ವೀರಘಂಟೆಯ ಮಡಿವಾಳ ಮಾಚಿದೇವ, ಕುಲಕ್ಕೆ ತಿಲಕ ಮಾದಾರ ಚೆನ್ನಯ್ಯ, ಮೈದುನ ರಾಮಯ್ಯ, ಹೆಂಡದ ಮಾರಯ್ಯನ ಸಾಮಾಜಿಕ ಕಳಕಳಿ, ಕರ್ನಾಟಕೇತರ ಶರಣ-ಶರಣೆಯರು, ಆತ್ಮಮಂಥನ : ಷಣ್ಮುಖ ಶಿವಯೋಗಿ, ಸಾಧಕರ ಸಾಧಕ : ಹಾನಗಲ್ಲ ಶ್ರೀಗಳು ಇವೆಲ್ಲವುಗಳನ್ನು ಒಳಗೊಂಡಿದೆ. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಬಸವಣ್ಣನವರ 'ಇವ ನಮ್ಮವ' ತತ್ತ್ವವೇ ವಿಶ್ವಭಾತೃತ್ವ ಪ್ರಜ್ಞೆಯ ಮೂಲ ಅಡಿಗಲ್ಲಾಗಿ, ಎಲ್ಲರನ್ನು ಒಂದೇ ಸೂತ್ರದಲ್ಲಿ ಬಂಧಿಸುವ ಮಂತ್ರವಾಗಿ ಪರಿಣಮಿಸಿತು. ಅಂತರಂಗ-ಬಹಿರಂಗ ಇವೆರಡರ ಪರಿಶುದ್ಧತೆ ಸಾಮಾಜಿಕ ಶುದ್ದೀಕರಣಕ್ಕೆ ಕಾರಣವಾಗಿ ಮರ್ತ್ಯಲೊಕವೇ ಸ್ವರ್ಗಲೋಕವಾಗಿ ಮಾರ್ಪಟ್ಟಿತು. ಸತ್ಯವನ್ನು ನುಡಿಯುವುದು, ನುಡಿದಂತೆ ನಡೆಯುವುದು, ಕಳವು-ಕೊಲೆ ಮಾಡದಿರುವುದು, ಅಸಹ್ಯ ಪಡೆದಿರುವುದು, ಮಾನಸಿಕ ನೆಮ್ಮದಿ ಸಾಧಿಸುವುದು ಇತ್ಯಾದಿ ಪ್ರಕ್ರಿಯೆಗಳು ಬಸವಾದಿ ಪ್ರಮಥರ ಬದುಕಿನ ಅವಿಭಾಜ್ಯ ಅಂಗಗಳಾದವು. ಹಾಗಾಗಿ ಸಾಮಾಜಿಕ ಜಾಗೃತಿ, ವಿಶ್ವ ಸಾಮರಸ್ಯದಳೆಯನ್ನು ಮೊದಲಿಗೆ ನಾವು ಕಲ್ಯಾಣದಲ್ಲಿ ಮಾತ್ರ ಗುರುತಿಸಲು ಸಾಧ್ಯವಾಗಿದೆ ಎಂದು ಹೇಳಬಹುದು. ನಡೆನುಡಿ ಸಿದ್ಧಾಂತವಾದಲ್ಲಿ ಕುಲ ಹೊಲೆ ಸೂತಕವಿಲ್ಲ ನುಡಿ ಲೇಸು ನಡೆ ಆಧಮವಾದಲ್ಲಿ ಅದೇ ಬಿಡುಗಡೆಯಿಲ್ಲದ ಹೊಲೆ ಕಳವು ಪಾರದ್ವಾರಂಗಳಲ್ಲಿ ಹೊಲಬನರಿಯದೆ ಆಚಾರವ ಕುಲ, ಅನಾಚಾರವ ಹೊಲೆ ಇಂತೀ ಉಭಯುವ ತಿಳಿದರಿಯಬೇಕು ಕೈಯುಳಿಕತ್ತಿ ಅಡಿಗೂಂಟಕ್ಕಡಿಯಾಗಬೇಡ ಕೆಟ್ಟು ನಡೆಯುತ್ತ ಮತ್ತೆ ಕುಲಜರೆಂಬ ಒಡಲವರುಂಟೆ? ಅರಿ ನಿಜಾತ್ಮ ರಾಮ ರಾಮನಾ ಶ್ರೇಷ್ಠ-ಕನಿಷ್ಠವೆಂಬ ಮಾನದಂಡವನ್ನೇ ಬುಡಮೇಲಾಗಿಸಿದ, ಆಚಾರ ವಿಚಾರಗಳಿಂದಲೇ ಅಳೆದ, ಸಕಲರ ನೆಮ್ಮದಿಯ ಬದುಕಿಗೆ ನಾಂದಿ ಹಾಡಿದ 12ನೇ ಶತಮಾನದ ಶಿವಶರಣರ ಸಾಧನೆ ಮಹತಿಯನ್ನು ಸಹಿಸದ ದುಷ್ಟಶಕ್ತಿಗಳು ನೇರವಾಗಿ ಹೋರಾಟಕ್ಕಿಳಿದವು. ಪ್ರತಿಗಾಮಿ-ಪ್ರಭುಶಕ್ತಿಯ ಪ್ರತಿನಿಧಿ ಸೋವಿದೇವನ ಸೈನ್ಯದ ಕ್ರೌರ್ಯಕೃತ್ಯಗಳಿಂದಾಗಿ ಶಿವಶರಣರು ದಶದಿಕ್ಕುಗಳಲ್ಲಿ ಹರಿದು ಹಂಚಿಹೋಗಬೇಕಾಯಿತು.

About the Author

ರಘುಶಂಖ ಭಾತಂಬ್ರಾ
(01 January 1970)

“ರಘುಶಂಖ” ಕಾವ್ಯನಾಮದಿಂದ ಪರಿಚಿತರಾಗಿರುವ ಡಾ. ರಘುನಾಥ  ಖರಾಬೆಯವರು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದವರು. ಶ್ರೀಮತಿ ಗುರಮ್ಮ ಶ್ರೀ ಶಂಕರೆಪ್ಪನವರ ಮಗನಾಗಿ 01-01-1970ರಲ್ಲಿ ಜನಿಸಿದರು. ಎಂ.ಎ; ಎಂ.ಪಿಎಲ್;  ಪಿಎಚ್.ಡಿ. ಪದವಿಧರರು. 1996ರಲ್ಲಿ ಗುಲಬರ್ಗಾ ಶ್ರೀ ಶರಣಬಸವೇಶ್ವರ ವಾಣಿಜ್ಯ ಕಾಲೇಜು; ಎಸ್.ಎಸ್. ಖೂಬಾ ಬಸವೇಶ್ವರ ಪದವಿ ಕಾಲೇಜು ಬಸವಕಲ್ಯಾಣದಲ್ಲಿ ಕನ್ನಡ ಉಪನ್ಯಾಸಕರಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸದ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗರ್ಮಾತಾಂಡಾದಲ್ಲಿ ಸಹಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ. ಶರಣಬಸವಪ್ಪ ಅವರ ಜೀವನ ಸಾಧನೆ (ಎಂ.ಪಿಎಲ್.), ವಚನಕಾರರ ವೃತ್ತಿ ಮೌಲ್ಯಗಳು ಒಂದು ಅಧ್ಯಯನ ...

READ MORE

Related Books