ನೆನಪಿನಲ್ಲಿ ನಿಂತವರು

Author : ಜ್ಯೋತ್ಸ್ನಾ ಕಾಮತ್

Pages 168

₹ 75.00




Year of Publication: 2000
Published by: ಮಹಿಳಾ ಸಾಹಿತ್ಯಿಕಾ
Address: ನವನಗರ ಹುಬ್ಬಳ್ಳಿ

Synopsys

‘ನೆನಪಿನಲ್ಲಿ ನಿಂತವರು’ ಕೃತಿಯು ಜ್ಯೋತ್ಸ್ನಾ ಕಾಮತ ಅವರ ಲೇಖನಗಳ ಸಂಕಲನವಾಗಿದೆ. ಕೃತಿಯು 14 ಪರಿವಿಡಿಗಳನ್ನು ಒಳಗೊಂಡಿದ್ದು, ಸಾಹಿತ್ಯ ಸಾಮ್ರಾಜ್ಞ (ಆಶಾಪೂರ್ಣದೇವಿ), ಅಪೂರ್ವ ಅಭಿನೇತ್ರಿ (ತೃಪ್ತಿಮಿತ್ರ), ಬಹುಬಲ್ಲಿದೆ ಕಮಲಾದೇವಿ (ಚಟ್ಟೋಪಾಧ್ಯಾಯ) ಕುಂದದ ಚೇತನ (ಉಮಾಬಾಯಿ ಕುಂದಾಪುರ), ‘ನ ಹನ್ಯತೇ (ಮೈತ್ರೇಯಿದೇವಿ), ಅಪೂರ್ವಕಲಾವಿದೆ (ಮುಕ್ತಾ ವೆಂಕಟೇಶ), ಅನಾಥರ ಅಮ್ಮ ಡಾ. ಆನಂದಿಬಾಯಿ ಪ್ರಸಾದ, ಚಿರಸ್ಮರಣೆಯಾದ ಚಿ.ನ ಮಂಗಳಾ, ಜೀವಿ ನೋವಿಗೆ ಮಿಡಿದ ಕುಸುಮಕ್ಕ, ಮಿಂಚಿ ಮರೆಯಾದ ಎಂ. ಕೆ. ಇಂದಿರಾ, ವಾಗರ್ಥ ಸಂಪನ್ನೆ, ವಾಗೀಶ್ವರೀ ಶಾಸ್ತ್ರಿ, ತಬ್ಬಲಿಗಳ ತಾಯಿ : ಶಾಂತಾಬಾಯಿ, ಶಿಲ್ಪಕಲಾವಿದೆ ಸುಭಾಷಿಣಿದೇವಿ, ಸುಮಂಗಲಿಯ ಸುಶೀಲಮ್ಮ ಇವರ ಜೀವನ ಚಿತ್ರಣ ನೀಡುವ ಬರಹಗಳು ಈ ಕೃತಿಯಲ್ಲಿದೆ.

ಕೃತಿಗೆ ಬೆನ್ನುಡಿ ಬರೆದಿರುವ ಸಾಹಿತಿ-ಸಂಶೋಧಕಿ ಹನುಮಾಕ್ಷಿ ಗೋಗಿ ಅವರು, ಕನ್ನಡ ಮಹಿಳಾಸಾಹಿತ್ಯ ಎರಡು ಸವಾಲುಗಳನ್ನು ಎದುರಿಸುತ್ತಲಿದೆ : ಪುರುಷರಷ್ಟು ಮುಕ್ತ ಗಂಭೀರವಾಗಿ ಬರೆಯದಿರುವುದು, ಪುರುಷರಂತೆ ಧಾವಿಸಿ ಪ್ರಕಾಶನ ಅವುಗಳನ್ನು ದೊರಕಿಸಿಕೊಳ್ಳದಿರುವುದು. ಈ ಎರಡೂ ನೆಲೆಗಳಲ್ಲಿ ಮಹಿಳೆಗೆ ‘ಸಾಹಿತ್ಮಿಕ ನ್ಯಾಯ’ ಒದಗಿಸಿ ಕೊಡುವುದಕ್ಕಾಗಿ ಅಸ್ತಿತ್ವಕ್ಕೆ ಬಂದಿದೆ, ‘ಮಹಿಳಾ ಸಾಹಿತ್ಮಿಕಾ’, ಮಹಿಳಾ ಸಾಹಿತ್ಯವನ್ನು ಕುರಿತು ಅಧ್ಯಯನ ನಡೆಸುವುದು, ಪ್ರಕಟಿಸುವುದು ಮಾತ್ರ ಈ ಸಂಸ್ಥೆಯ ಗುರಿಯಾಗಿದೆ. ಇದು ಆರಂಭದ ದಿನಗಳಲ್ಲಿ ಸೃಜನ-ವಿಮರ್ಶನ-ಸಂಶೋಧನ-ಅನುವಾದ ಸೇರಿ ವರ್ಷಕ್ಕೆ ಒಂದು ಸಾವಿರ ಪುಟಗಳ ಸಾಹಿತ್ಯವನ್ನು ಪ್ರಕಟಿಸುತ್ತದೆ. ಮಹಿಳೆಯ ಸಾಹಿತ್ಯಿಕ ಸಮಸ್ಯೆಗಳೂ ಅನೇಕ, ಸಾಮಾಜಿಕ ಸಮಸ್ಯೆಗಳನ್ನೂ ಅನೇಕ, ಇವರು ಆಗಾಗ ಸೇರಿ ನಡೆಸುವ ‘ಚಿಂತನೆಗೋಷ್ಠಿ’ ಗಳಿಂದ ಕಳೆದುಕೊಂಡ ಹಳೆಯ ದಾರಿಗಳನ್ನು ಹುಡುಕಬಹುದು’ ಎಂದಿದ್ದಾರೆ.

About the Author

ಜ್ಯೋತ್ಸ್ನಾ ಕಾಮತ್
(24 January 1937 - 24 August 2022)

ಸಂಶೋಧಕಿ, ಸ್ತ್ರೀ ಚಿಂತನೆಯ ಕನ್ನಡದ ಬರಹಗಾರ್ತಿ ಜ್ಯೋತ್ಸ್ನಾ ಕಾಮತ್ ಅವರು 1937 ಜನವರಿ 24 ರಂದು ಮಹಾರಾಷ್ಟ್ರದ ಸಾತಾರ ಜಿಲ್ಲೆಯ ವಾಯಿಯಲ್ಲಿ ಜನಿಸಿದರು. ‘ಸಂಸಾರದಲ್ಲಿ ಸ್ವಾರಸ್ಯ, ಹೀಗಿದ್ದೇವೆ ನಾವು, ನಗೆಕೇದಿಗೆ’ ಅವರ ಪ್ರಬಂಧ ಸಂಕಲನಗಳು. ‘ಕರ್ನಾಟಕದಲ್ಲಿ ಶಿಕ್ಷಣ ಪರಂಪರೆ, ಕರುನಾಡಿನ ಜನಜೀವನ, ಕೈಗನ್ನಡಿಯಲ್ಲಿ ಕನ್ನಡತಿ’ ಅವರ ಸಂಶೋಧನಾ ಕೃತಿಗಳು. ‘ಮಹಿಳೆ ಒಂದು ಅಧ್ಯಯನ, ನೆನಪಿನಲ್ಲಿ ನಿಂತವರು, ಮಹಿಳೆ ಅಂದು-ಇಂದು’ ಅವರ ಮಹಿಳಾ ಅಧ್ಯಯನ ಕೃತಿಗಳು. ಇದಲ್ಲದೆ ಶಾಂತಲೆ-ವಿಷ್ಣುವರ್ಧನ, ಕಮಲಾದೇವಿ ಚಟ್ಟೋಪಾಧ್ಯಾಯರ ಜೀವನ ಕೃತಿಗಳನ್ನು ರಚಿಸಿದ್ದು ಅವರ ಈ ಸಾಹಿತ್ಯ ಸೇವೆಗೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಕೆ.ಶಾಮರಾವ್ ದತ್ತಿನಿಧಿ ಪುರಸ್ಕಾರ, ...

READ MORE

Related Books