‘ಅವಲೋಕನ’ ಸಾಹಿತ್ಯ ವಿಮರ್ಶೆ ಸುಬ್ರಾಯ ಚೊಕ್ಕಾಡಿ ಅವರ ಸಮಗ್ರ ಲೇಖನಗಳ ಸಂಕಲನವಾಗಿದೆ. ದಕ್ಷಿಣ ಕನ್ನಡ ಕಾವ್ಯ ಸಮೀಕ್ಷೆ-ಕೃತಿ ಶೋಧ, ಒಳಹೊರಗು ಮತ್ತು ಸಮಾಲೋಕ ಸೇರಿದಂತೆ ಮೂರು ವಿಭಾಗಗಳಿವೆ. ಗಂಗಾಧರ ಚಿತ್ತಾಲರ ಸಮಗ್ರ ಕಾವ್ಯದ ಹೊಸ ಓದಿಗೆ ಸಂಬಂಧಿಸಿದ ಒಂದು ಲೇಖನವಲ್ಲದೆ, ಕೆ.ಟಿ ಗಟ್ಟಿ, ವೈದೇಹಿ, ಕುಸುಮಾ ಶಾನುಭಾಗ ಮೊದಲಾದವರ ಸಾಹಿತ್ಯದ ಬಗೆಗಿನ ವಿಮರ್ಶೆಗಳಿವೆ. ಈ ಕೃತಿಯಲ್ಲಿ 71 ಬರಹಗಳಿವೆ. ಗೋವಿಂದ ಪೈಯವರ ಕಾವ್ಯ ವಿಮರ್ಶೆಯಿಂದ ತೊಡಗಿ, ಕಾರಂತರ ಕೃತಿಗಳನ್ನು ದಾಟಿ ಹಿರಿಯರು ಮತ್ತು ನನ್ನಂಥ ಅತಿಕಿರಿಯರ ತನಕ ಬರಹಗಳ ಸತ್ವ ಸಾರಗಳನ್ನು ಅವರು ತೋರಿಸಿದ್ದಾರೆ. ಕಾರಂತರ ಮುಂದೆ ನಿಂತು, ‘ಜ್ಞಾನಪೀಠ ಪಡೆದ ನಿಮ್ಮ ಈ ಮೂಕಜ್ಜಿಯ ಕನಸುಗಳು ಕಾದಂಬರಿಯೇ ಅಲ್ಲ’ ಎಂದು ಚೊಕ್ಕಾಡಿಯವರು ಮೇಜಿನ ಮೇಲೆ ಪುಸ್ತಕವನ್ನು ಟಪ್ಪನೇ ಹಾಕಿದ್ದನ್ನು ಕಣ್ಣಾರೆ ಕಂಡವನು ನಾನು. ಕನ್ನಡದ ನವ್ಯ, ನವೋದಯ, ಬಂಡಾಯ, ದಲಿತ ಹೀಗೇ ವಿವಿಧ ಸಾಹಿತ್ಯಪ್ರಕಾರಗಳನ್ನು ಅವರು ಬೇರೆ ಬೇರೆ ಲೇಖನಗಳ ಮೂಲಕ ವಿಮರ್ಶಿಸಿದ್ದಾರೆ. ಹಳೆಯ ಕಾಲದ ಲೇಖಕರು, ಹೊಸ ಕಾಲದ ಬರಹಗಾರರು ಎಲ್ಲರನ್ನೂ ಅವರು ಓದುತ್ತಾ ಇದ್ದಾರೆ ಎಂಬುದಕ್ಕೆ ಪುರಾವೆಯೇ ಈ ಸಮಗ್ರ ಸಂಪುಟ.
©2024 Book Brahma Private Limited.