ತಾರುಮಾರು- ಲೇಖಕ, ಕಾದಂಬರಿಕಾರ ಕೆ.ಎನ್.ಗಣೇಶಯ್ಯ ಅವರ ಲೇಖನಗಳ ಸಂಕಲನ. ನಾವೆಲ್ಲರೂ ಅನುಭವಿಸುವ ಘಟನೆಗಳು ಕಾಲದ ಆಯಾಮದಲ್ಲಿ ಒಂದರ ನಂತರ ಮತ್ತೊಂದು ಪೋಣಿಸಿದಂತೆ ಬಂದರೂ ಅವು ಘಟಿಸುವ ಪಾಳಿಯಲ್ಲಿ ಯಾವುದೇ ನಿರ್ದಿಷ್ಟ ಪ್ರಕಾರವಿರಲು ಸಾಧ್ಯವಿಲ್ಲ. ಅವು ಘಟಿಸುವುದೇ ತಾರುಮಾರಾಗಿ.
ಅಂತಯೇ ನಮ್ಮಲ್ಲಿ ಚಿಂತನೆಗಳು ಬೆಳೆಯುವುದೂ ಸಹ ತಾರುಮಾರಾಗಿ. ಅಂದರೆ ಒಂದು ರೀತಿಯಲ್ಲಿ ‘Random’ ಆಗಿ. ಈ ಹೊತ್ತಿಗೆಯಲ್ಲಿನ ವಿಚಾರಗಳು ಅಂತಹ ತಾರುಮಾರು ಚಿಂತನೆಗಳ ಒಂದು ಮಾಲಿಕೆ. ಇಲ್ಲಿನ ವಿಚಾರಗಳು ಯಾವುದೋ ಯಾತ್ರೆಯಲ್ಲಿ ನಾವು ಕಂಡ ಮನಕರಗಿಸುವ ಘಟನೆಯಿಂದಲೋ ಗತಿಸಿ ಚರಿತ್ರೆಯಾಗಿರುವ ಮಹಾನ್ ವ್ಯಕ್ತಿತ್ವಗಳಿಗೆ ಗೌರವ ಸಲ್ಲಿಸುವ ಜವಾಬ್ದಾರಿಯಿಂದಲೋ ಬೇರೂರಿರುವ ಅಪ್ರಸ್ತುತ ರೂಢಿಗಳು ಬದಲಾಗಬೇಕೆಂಬ ಕಾಳಜಿಯಿಂದಲೋ ಅಥವಾ ಬದುಕಿನ ಬವಣೆ ಕಂಡೋ ಮೂಡಿದ ಚಿತ್ರಗಳು ಹಾಗೆಂದು ಇವು. ಯಾವುದೇ ಪಾಳಿಯಿಲ್ಲದ ತಾರುಮಾರು ವಿಚಾರಗಳು. ಹಲವು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿದ್ದರೂ, ಓದುಗರಿಗೆ ಒಂದು ಗುಚ್ಛದಲ್ಲಿ ನೀಡುವ ನಿಟ್ಟಿನಲ್ಲಿ ಕಲೆಹಾಕಿದ, ನಿಕಟವಾದ ಬೆಸುಗೆ ಇಲ್ಲದ ಬರಹಗಳು ಇಲ್ಲಿವೆ.
ವೃತ್ತಿಯಿಂದ ಕೃಷಿ ವಿಜ್ಞಾನಿ ಆಗಿರುವ ಕೆ.ಎನ್. ಗಣೇಶಯ್ಯ ಅವರು ಮೂಲತಃ ಕೋಲಾರ ಜಿಲ್ಲೆಯವರು. ಕಳೆದ ೩೦ ವರ್ಷಗಳಿಂದ ತಳಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಅವರು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು. ಪ್ರಾಣಿ ಮತ್ತು ಸಸ್ಯಗಳ ವರ್ತನೆಗೆ ಮೂಲಭೂತವಾದ ಜೀವವಿಕಾಸದ ತತ್ವಗಳನ್ನು ಅನ್ವೇಷಿಸುವುದು ಇವರ ಮತ್ತೊಂದು ಸಂಶೋಧನಾಸಕ್ತಿ. ಭಾರತದ ಪ್ರಮುಖ ಜೀವ ವೈವಿಧ್ಯ ತಾಣಗಳಲ್ಲಿನ ಸಸ್ಯಗಳ ಮತ್ತು ದೇಶದ ಜೀವ ಸಂಪತ್ತಿನ ಬಗ್ಗೆ ಇವರು ತಯಾರಿಸಿರುವ ಮಾಹಿತಿಯ ಖಜಾನೆಯ ಸಿ.ಡಿ.ಗಳು ಮತ್ತು ಅಂತರ್ಜಾಲ ಒಂದು ಅಪೂರ್ವ ಹೆಜ್ಜೆ. ಇನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧ ಬರೆದಿರುವ ಅವರು ಆರು ವೈಜ್ಞಾನಿಕ ಕೃತಿಗಳನ್ನು ...
READ MORE