`ರಣವೀಳ್ಯ' ವಿವಿಧ ಲೇಖನಗಳ ಸಂಗ್ರಹ ಕೃತಿ ಇದು. ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದವು. 1947-48 ಹಾಗೂ 1965ರ ಪಾಕಿಸ್ತಾನ ಹಾಗೂ 1962ರ ಚೀನಾ ಆಕ್ರಮಣಗಳ ಸಂದರ್ಭದಲ್ಲಿ ದೇಶಕ್ಕಾಗಿ ಪ್ರಾಣವನ್ನೇ ಬಲಿದಾನಗೈದ ವೀರ ಯೋಧರು ಮೆರೆದ ಸಾಹಸದ ರೋಮಾಂಚಕ ಸಾಹಸವನ್ನು ಪರಿಚಯಿಸುವ ಕೃತಿ ಇದು. ’ತಾಯ್ನೆಲದ ಸಲುವಾಗಿ ರಣರಂಗದಲ್ಲಿ ಹೋರಾಡಿದ ಭಾರತೀಯ ಗಂಡುಗಲಿಗಳ ವೀರರ ಹಿರಿಮೆ ಪುಟಪುಟಗಳಲ್ಲಿಯೂ ಸೊಗಸಾಗಿ ಬಂದಿದೆ. ಕನ್ನಡ ನಾಡಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರೆಲ್ಲ ಓದಬೇಕಾದ ಪುಸ್ತಕ ಇದು ಎಂದು ಕೃತಿಯ ಕುರಿತು ರಾಷ್ಟ್ರೊತ್ಥಾನ ಸಾಹಿತ್ಯವು ವಿವರಿಸಿದೆ.