‘ಶುಭ ನುಡಿ’ ಎ.ಸರಸಮ್ಮನವರ ಕೃತಿಯಾಗಿದೆ. ತಾನು ಶ್ರದ್ಧೆ, ನಿಷ್ಠೆಯಿಂದ ಕರ್ತವ್ಯ ಪಾಲಿಸಿದಾಗ ಇತರರಿಗೆ ಮಾದರಿಯಾಗುತ್ತದೆ ಎಂಬುದನ್ನು ಈ ಕೃತಿಯಲ್ಲಿ ತಿಳಿಸಾಗಿದೆ. ಡಾ. ಜಯಪ್ಪ ಹೊನ್ನಾಳಿ ಅವರ ಮುನ್ನುಡಿ ಬರಹವಿದೆ. ಈಗಾಗಲೇ ತಮ್ಮ ಸಾಧನೆಯ ಸಕಾರಣಕ್ಕಾಗಿ ಸರ್ಕಾರದಿಂದ 'ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ' ಪಡೆದು, ಮುವ್ವತ್ತೂರಕ್ಕೂ ಹೆಚ್ಚು ಸಾಹಿತ್ಯ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿ, ನಿವೃತ್ತ ಶಿಕ್ಷಕಿಯ ಬದುಕನ್ನು ನಿರಾಳವಾಗಿ ಸಾರ್ಥಕವಾಗುವಂತೆ ನಿರ್ವಹಿಸುತ್ತ, ಅಂದರೆ ಅರವತ್ತರ ನಂತರದ ಅರಳು-ಮರುಳು ಸಮಯವನ್ನೂ ಮರಳಿ ಅರಳಲು ಬಳಸಿಕೊಂಡು, ಸಾರ್ಥಕವಾದ ಬಾಳೊಂದಕ್ಕೆ ಮಾದರಿಯಾದವರು ಚಿಕ್ಕಬಳ್ಳಾಪುರದ ಲೇಖಕಿ, ಕವಯತ್ರಿ, ಕತೆಗಾರ್ತಿ, ಕಾದಂಬರಿಗಾರ್ತಿ ಹಾಗೂ ನಾಟಕಗಾರ್ತಿಯಾದ, ಖಂಡಿತವಾಗಿಯೂ ಕನ್ನಡಿಗರೆಲ್ಲ ಹೆಮ್ಮೆಪಡಬಹುದಾದ ವ್ಯಕ್ತಿತ್ವದ, ಸಾಮಾಜಿಕ ಕಳಕಳಿಯುಳ್ಳವರಾದ ಎ. ಸರಸಮ್ಮನವರು..! ಎ. ಸರಸಮ್ಮನವರ ಚಿಂತನ ಮಂಥನ ಉದಾತ್ತವಾದದ್ದು..! ಸಮಷ್ಟಿಯಲ್ಲಿಯ ಪ್ರತಿಯೊಬ್ಬರೂ ಪ್ರಜ್ಞಾವಂತರಾಗಿ, ಸಮತೆ ಮಮತೆಗಳಿಂದ ಬದುಕಬೇಕೆಂಬುದವರ ಆತ್ಮದಾಶಯ..! ಅದಕ್ಕಾಗಿಯೇ ಅವರಿಲ್ಲಿ ಸಾಲು ಸಾಲಲ್ಲೂ ಸಹೃದಯರೆದುರು ಸ್ವಾರ್ಥ, ದುರಾಸೆ, ದುರ್ಬುದ್ಧಿ, ದುಷ್ಕೃತ್ಯಗಳ ದೂರವಿಟ್ಟು, ಔದಾರ್ಯದ ನಡೆ ನುಡಿಗಳ, ಸಹನೆ ತಾಳ್ಮೆ ತ್ಯಾಗಗಳ ರೂಢಿಸಿಕೊಂಡು, ಜೊತೆಗೆ ತನ್ನಂತೆಯೇ ಪರರ ಬಗೆಯಬೇಕೆಂಬ ಹಾಗೂ ಪರಮಾತ್ಮನ ಪ್ರೀತಿಸುವುದರಾರಂಭವೇ ಪಕ್ಕದವರ ಪ್ರೀತಿಸಲು ತೊಡಗುವುದೆಂಬ, ಸದಾಶಯದ ಸರಣಿ ಸಂದೇಶಗಳ 'ಶುಭನುಡಿ'ಯ ಜೀವಪರವಾದ ಸಾತ್ವಿಕ ಸಾರದ ಮಹಾಪೂರವನ್ನೇ ಮಾತೃ ಮಮತೆಯಿಂದ ಹರಿಸಿದ್ದಾರೆ..! ಎಂಬ ಸಾರಾಂಶವನ್ನು ಈ ಕಥೆಯಲ್ಲಿ ತಿಳಿಸುತ್ತದೆ.
ಲೇಖಕಿ ಎ. ಸರಸಮ್ಮ ಅವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಸಾಹಿತ್ಯ ಅವರ ವಿಶೇಷ ಆಸಕ್ತಿಯಾಗಿದೆ. ವೃತ್ತಿಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಪ್ರಸ್ತುತ ನಿವೃತ್ತರಾಗಿದ್ದರೆ. ಕೃತಿಗಳು: ಮೋಸದ ಜಾಲ(ಕಾದಂಬರಿ), ಬಾಡಿಗೆ ಮನೆ, ಮನೆ ಮಗ, ನೀತಿ ಕಥೆಗಳು, ದನಗಳ ಚೆನ್ನಿ, ನಂದಾದೀಪ, ಜಾಲಿಯ ನೆರಳು, ಕಾವ್ಯ ಜ್ಯೋತಿ, ವಿಧಿ ನಿಯಮ, ಸನ್ಮಾರ್ಗ, ಹೆಣ್ಣಿನ ಬಾಳು, ಗುರಿ, ಪಾಪ ಪುಣ್ಯ, ಭಕ್ತಿಸಾರ, ಸ್ನೇಹ ಬಂಧನ, ಕಾಮನಬಿಲ್ಲು, ಮೋಸದ ಜಾಲ ...
READ MORE