ಭಾಷಾ ವಿಶ್ಲೇಷಣೆ

Author : ಬಸವರಾಜ ಕೋಡಗುಂಟಿ

Pages 285

₹ 220.00




Year of Publication: 2010
Published by: ಬಂಡಾರು ಪ್ರಕಾಶನ
Address: ಮಸ್ಕಿ, ಲಿಂಗಸಗೂರು ತಾ, ರಾಯಚೂರು-584124
Phone: 9886407011

Synopsys

ಎಚ್.ಎಸ್. ಅನಂತನಾರಾಯಣ ಅವರ ಭಾಷಾವಿಜ್ಞಾನ ಲೇಖನಗಳ ಸಂಗ್ರಹಗಳೇ ’ಭಾಷಾ ವಿಶ್ಲೇಶಣೆ’ ಕೃತಿ. ಇದನ್ನು ಬಸವರಾಜ ಕೋಡಗುಂಟಿಯವರು ಸಂಪಾದಿಸಿದ್ದಾರೆ. ಎಚ್.ಎಸ್. ಅನಂತನಾರಾಯಣ ಅವರು ಕರ್ನಾಟಕದ ಹಾಗೂ ಭಾರತದ ಹಿರಿಯ ಸಂಸ್ಕೃತ ಭಾಷಾವಿಜ್ಞಾನಿಗಳಲ್ಲಿ ಒಬ್ಬರು. ಸಂಸ್ಕೃತ ಭಾಷೆಯನ್ನು ಅದರಲ್ಲಿಯೂ ವಿಶೇಷವಾಗಿ ವೇದ ಸಂಸ್ಕೃತವನ್ನು ಅಧ್ಯಯನ ಮಾಡಿರುವ ಅವರು ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದ ಭಾಷಾ ವಿಜ್ಞಾನದ ಪ್ರಾಧ್ಯಾಪಕರಾಗಿ ಕೆಲಸ ಮಾಡಿದವರು. ಜಗತ್ತಿನ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ಮತ್ತು ಬೋಧನೆಗಳನ್ನು ಮಾಡಿರುವ ಅವರು ಭಾಷಾ ಶಾಸ್ತ್ರಕ್ಕೆ ಸಂಬಂಧಿಸಿದಂತೆ ಹಲವಾರು ಮಹತ್ವದ ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. ಹಲವಾರು ಪತ್ರಿಕೆಗಳಲ್ಲಿ ಆಗಾಗ ಬರೆದಿರುವ ಅನಂತನಾರಾಯಣ ಅವರ ಲೇಖನಗಳನ್ನು ಒಟ್ಟಾಗಿ ನೀಡುವ ಉದ್ದೇಶದಿಂದ ಬಸವರಾಜ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ. 

About the Author

ಬಸವರಾಜ ಕೋಡಗುಂಟಿ

ಬಸವರಾಜ ಕೋಡಗುಂಟಿ ಇವರು ಪ್ರಸ್ತುತ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಗುಲ್ಬರ್ಗದಲ್ಲಿ ಕನ್ನಡ ಭಾಷಾ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾಷಾ ವಿಜ್ಞಾನದಲ್ಲಿ ಆಸಕ್ತಿ ಇರುವ ಇವರು ಕನ್ನಡ ಮಾತಿನ ಇತಿಹಾಸ, ದ್ರಾವಿಡ ಮಾತಿನ ಮನೆತನ, ವಿಬಕ್ತಿ ಮೊದಲಾದ ಕ್ಶೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಕನ್ನಡ ವಿಬಕ್ತಿ ರೂಪಗಳ ಅಯ್ತಿಹಾಸಿಕ ಬೆಳವಣಿಗೆ, ಮಸ್ಕಿ ಕನ್ನಡದಾಗ ವಿಬಕ್ತಿ ರೂಪಗಳು, ಮಾತೆಂಬುದು, ಬಾಶಿಕ ಕರ್ನಾಟಕ. ಇತರ ಕೃತಿಗಳೆಂದರೆ ಭಾಷಾ ವಿಶ್ಲೇಷಣೆ, ಊರು, ಹೈದರಾಬಾದ್ ಕರ್ನಾಟಕ, ಕರ್ನಾಟಕದ ಮಾತುಗಳು, ದರಗಾ, ಹೈದರಾಬಾದ್ ಕರ್ನಾಟಕ ಸಾಲು ಸಂಪುಟಗಳು-6 (ಊರು, ಕೋಟೆ, ಶಾಸನ, ಕೆರೆ-ಬಾವಿ, ಕನ್ನಡ, ದರಗಾ) ಮುಂತಾದವು.  ...

READ MORE

Related Books