‘ನಮ್ಮ ಉಪ್ಪಿ’ ಕ್ರಿಯಾಶೀಲ ವ್ಯಕ್ತಿ, ಚಿತ್ರನಟ, ನಿರ್ದೇಶಕ ಉಪೇಂದ್ರ ಅವರ ಕುರಿತಾಗಿ ಅವರನ್ನು ಹತ್ತಿರದಿಂದ ಕಂಡ ಸ್ನೇಹಿತರು ಬರೆದಿರುವ ಲೇಖನಗಳ ಸಂಕಲನ. ಈ ಕೃತಿಯನ್ನು ಸುಂದರ್ ಬಾಬು, ಯತಿರಾಜ್ ವೀರಾಂಬುಧಿ ನಿರೂಪಿಸಿದ್ದರೆ, ಪರಿಕಲ್ಪನೆ ಜಮೀಲ್ ಸಾವಣ್ಣ ಅವರದು.
ಉಪೇಂದ್ರ ಅವರು ತಮ್ಮ ಅಭಿಮಾನಿಗಳಿಂದ ಬುದ್ಧಿವಂತನೆಂದೇ ಕರೆಸಿಕೊಳ್ಳುವ ಕನ್ನಡದ ಸೂಪರ್ ಸ್ಟಾರ್. ಉಪ್ಪಿ ಹೀಗೆ ಸೂಪರ್ ಸ್ಟಾರ್ ಆಗಿ ಬೆಳೆದದ್ದು ಒಂದೆರಡು ದಿನದ ಕತೆಯಲ್ಲ ಬಡತನದಿಂದ ಬಂದ ಉಪ್ಪಿ, ಚಿತ್ರರಂಗದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. ಹಾಗೆ ಸಾಗಿಬಂದ ದಾರಿಯ ತುಂಬ ಉಪ್ಪಿಯೊಂದಿಗಿದ್ದ ಹಲವು ಜನರಿಗೆ ಉಪೇಂದ್ರ ಇಂದಿಗೂ ಆಪ್ತರು. ಈ ಕೃತಿಯಲ್ಲಿ ಅಂತಹ ಆಪ್ತರು ಉಪ್ಪಿಯ ಕುರಿತು ಹಂಚಿಕೊಂಡ ಪ್ರೀತಿಯ ಮಾತುಗಳಿವೆ, ಉಪ್ಪಿಯೊಂದಿಗಿನ ಒಡನಾಟದ ಅನುಭವಗಳಿವೆ.
ಕಥೆಗಾರ,ಲೇಖಕ, ಅನುವಾದಕ, ಕಾದಂಬರಿಗಾರರಾದ ಯತಿರಾಜ್ ವೀರಾಂಬುಧಿ 11-08-1957ರಂದು ಮೈಸೂರಿನಲ್ಲಿ ಜನಿಸಿದರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಮೈಸೂರಿನಲ್ಲೇ ಪೂರ್ಣಗೊಳಿಸಿದ ಅವರು ಮೈಸೂರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್‌ನಲ್ಲಿ ಬಿ.ಇ (ಎಲೆಕ್ಟ್ರಿಕಲ್ ಪವರ್) ಮುಗಿಸಿದರು. ಬೆಂಗಳೂರು ಮತ್ತು ಸಲ್ತನತ್ ಆಫ್ ಒಮಾನ್‌ನಲ್ಲಿ ಕಾರ್ಯ ನಿರ್ವಹಿಸಿ 2013ರಲ್ಲಿ ನಿವೃತ್ತಿ ಪಡೆದಿದ್ದಾರೆ. ಯತಿರಾಜ್ ವೀರಾಂಬುಧಿಯವರ ಪ್ರಕಟಿತ ಕೃತಿಗಳು- ಆಪತ್ತಿಗೆ ಆಹ್ವಾನ, ಪರಿಶೋಧ, ಗಾಥೆ, ಮರದಡಿ ಮಳೆ, ಪಂಚಾನನ, ಜೀವನ್ಮುಖಿ, ಸಾಬೀತು, ಕುರುಡು ತಿರುವು, ಅವಿನಾಭಾವ, ಹಸ್ತಕ್ಷೇಪ, ಹಾಸುಹೊಕ್ಕು, ಕಪ್ಪು ನದಿ, ಉದ್ಯೋಗ ಪರ್ವ, ಕರೆದರೆ ಬಾರೆ..!, ಒಂದೊಂದಾಗಿ ಜಾರಿದರೆ, ರಣವೀಳ್ಯ, ಚಿರಸ್ಮಿತ, ಸುಖಿಯಾಗಿರು ...
READ MORE