ಬುದ್ಧಿಜೀವಿ ಬಿಕ್ಕಟ್ಟುಗಳು

Author : ಕೆ.ವಿ. ನಾರಾಯಣ

₹ 100.00




Year of Publication: 2022
Published by: ಋತುಮಾನ ಟ್ರಸ್ಟ್
Address: ಎಫ್-3, ಎ ಬ್ಲಾಕ್, ಶಾಂತಿನಿಕೇತನ ಅಪಾರ್ಟ್ಮೆಂಟ್, ಶಾಂತಿನಿಕೇತನ ಬಡಾವಣೆ, ಅರೆಕೆರೆ, ಬನ್ನೇರುಘಟ್ಟ ರಸ್ತೆ, ಬೆಂಗಳೂರು- 560076.
Phone: 9480009997

Synopsys

ಜೀನ್ ಪಾಲ್ ಸಾರ್ತೃ ಅವರ ‘A Plea for Intellectuals’ ಎಂಬ ಬರಹದ ಕನ್ನಡ ನಿರೂಪಣೆ ‘ಬುದ್ದಿಜೀವಿ ಬಿಕ್ಕಟ್ಟುಗಳು’. ಈ ಕೃತಿಯನ್ನು ಅನುವಾದಿಸಿದವರು ಕೆ. ವಿ. ನಾರಾಯಣ. ಸಾರ್ತೃ ಅವರ ಈ ಬರಹ ಮೊದಲು ಉಪನ್ಯಾಸದ ರೂಪದಲ್ಲಿದಿದ್ದು, ಅನಂತರ ಬರಹ ರೂಪಕ್ಕೆ ಬಂತು. ಈ ಕನ್ನಡ ರೂಪವು ಮೂಲ ಬರಹವನ್ನು ಅದು ಇರುವಂತೆಯೇ ಅನುವಾದಿಸುವ ಹಾದಿಯನ್ನು ಹಿಡಿದಿಲ್ಲ. ಕನ್ನಡ ನುಡಿಯನ್ನು ಆಡುವವನೊಬ್ಬ ಅದನ್ನು ಓದಿದಾಗ ಏನು ಅವನ ಗ್ರಹಿಕೆಗೆ ಬಂತೋ ಆ ತಿಳಿವನ್ನು ಕನ್ನಡ ಓದುಗರಿಗಾಗಿ ನಿರೂಪಿಸುವ ಕೆಲಸವನ್ನು ಇಲ್ಲಿ ಮಾಡಲಾಗಿದೆ. ಜಗತ್ತನ್ನು ಬದಲಿಸಬೇಕೆಂಬ ಮಾತನ್ನು ಹೇಳುವವರು ತಮ್ಮಲ್ಲೂ ಆ ಬಗೆಯ ಬದಲಾವಣೆ ಸಂಭವಿಸಬೇಕಾಗಿದೆ ಎಂಬ ಅರಿವಿಗೆ ತೆರೆದುಕೊಳ್ಳುವ ಅಗತ್ಯವಿದೆ. ಹಾಗಾಗಿ ಬುದ್ಧಿಜೀವಿಗಳನ್ನು ನಾವು ಗ್ರಹಿಸುತ್ತಿರುವ ರೀತಿಯಲ್ಲೇ ಮೂಲಭೂತ ಬದಲಾವಣೆಯ ಅಗತ್ಯವಿದೆ. ಕೆ. ವಿ. ನಾರಾಯಣ ಅವರೇ ಹೇಳುವಂತೆ ಅವರ ಗೆಳೆಯರಿಗಿಂತ ಹೆಚ್ಚಾಗಿ ಎಳೆಯರನ್ನು ಉದ್ದೇಶಿಸಿಯೇ ಈ ಕ್ಲಿಷ್ಟವಾದ ಸುಧೀರ್ಘ ಪ್ರಬಂಧವನ್ನು ಸರವಾಗಿ ಕನ್ನಡದಲ್ಲಿ ನಿರೂಪಿಸಲಾಗಿದೆ. ಕನ್ನಡ ಬೌದ್ಧಿಕ ಲೋಕದಲ್ಲಿ ಈಗಾಗಲೇ ಗುರುತಿಸಿಕೊಂಡಿರುವ ಮತ್ತು ಈ ಕುರಿತು ಆಸಕ್ತಿ ಇರುವ ಎಲ್ಲರಿಗೂ ಈ ಪುಸ್ತಕ ನೆರವಾಗಬಲ್ಲದು ಎನ್ನುವುದು ಆಶಯ.

About the Author

ಕೆ.ವಿ. ನಾರಾಯಣ
(20 October 1948)

ಕಂಪಲಾಪುರ ವೀರಣ್ಣ ನಾರಾಯಣ ಅವರು ಜನಿಸಿದ್ದು 1948ರಲ್ಲಿ. ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲ್ಲೂಕು ಕಂಪಲಾಪುರ. ಅಮ್ಮ ಕೆಂಚಮ್ಮ ಮತ್ತು ಅಪ್ಪ ವೀರಣ್ಣ. ಮೊದಲ ಹಂತದ ಓದು ಪುತ್ತೂರು ಮತ್ತು ತಾಲ್ಲೂಕು ಕೇಂದ್ರ ಪಿರಿಯಾಪಟ್ಟಣದಲ್ಲಿ. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿಜ್ಞಾನವನ್ನು ತೆಗೆದುಕೊಂಡು ಪಿ.ಯು.ಸಿ. ಓದಿದರು. ಇಂಜಿನಿಯರಿಂಗ್ ಮಾಡಲು ಅವಕಾಶವಿದ್ದರೂ ಎಂಜಿನಿಯರ್ ಆಗಕೂಡದೆಂದು ತೀರ್ಮಾನಿಸಿದ ಕೆ.ಎ.ಎಸ್ ಮತ್ತೆ ಮೈಸೂರಿನ ಯುವರಾಜ ಕಾಲೇಜಿನಲ್ಲಿ ವಿಜ್ಞಾನದ ಅಭ್ಯಾಸವನ್ನು ಮುಗಿಸಿದರು. ಆನಂತರದಲ್ಲಿ ಬಿ.ಎಡ್. ಮುಗಿಸಿ ಆರಂಭಿಸಿದ್ದು ಹೈಸ್ಕೂಲಿನಲ್ಲಿ ಅಧ್ಯಾಪನ. ಮುಂದಿನ ಓದಿಗಾಗಿ ಮತ್ತೆ ಬೆಂಗಳೂರಿನತ್ತ ಪಯಣ. ಆ ಹೊತ್ತಿಗೇನೆ ಸಾಹಿತ್ಯದ ಓದಿಗೂ ಬಿದ್ದು ಬರವಣಿಗೆಯಲ್ಲೂ ...

READ MORE

Related Books