ಆಡಿಸಿ ನೋಡು -ರಾಜಕುಮಾರ ಮಡಿವಾಳರ ಅವರ ಲೇಖನಗಳ ಕೃತಿ. ಬೆನ್ನುಡಿ ಬರೆದಿರುವ ಲೇಖಕ ಜಿ. ಎನ್. ಮೊಹನ್ ಅವರು “ಬದುಕಿನ ಮ್ಯಾಪನ್ನು ಹರಡಿಕೊಂಡು ಕಂಗಾಲಾದವರಿಗೆ, ರಸ್ತೆ ಓಣಿಗಳನ್ನು ಬೇಕಾದರೆ ದಾಟಿಕೊಂಡು ಬಿಡಬಹುದು. ಆದರೆ ಬದುಕಿನ ಗಲಿಬಿಲಿಗೊಳಿಸುವ ಓಣಿಗಳಿಗೆ ಜಿಪಿಎಸ್ ಹುಡುಕಿ ಇಡುವವರಾರು? ಎನ್ನುವ ಪ್ರಶ್ನೆಯೊಂದು ಸುಳಿದರೆ ಅದಕ್ಕೆ ಉತ್ತರ ರಾಜಕುಮಾರ ಮಡಿವಾಳರ.'ಆಡಿಸಿ ನೋಡು; ನಮ್ಮೊಳಗಿನ 'ಚಿಲಕ ಮತ್ತು ಘಿಲಕ'. ರಾಜಕುಮಾರರ ಪುಸ್ತಕ ನಮ್ಮೊಳಗೆ ಗಿಲಿ ಗಿಲಿ ಗಿಲಿ ಘಿಲಕ ಸದ್ದು ಮಾಡುತ್ತದೆ ಹಾಗೆಯೇ ಚಿಲಕ ಹಾಕಿ ಭೋರೆಂದು ಅಳುವಂತೆಯೂ ಮಾಡುತ್ತದೆ. ರಾಜಕುಮಾರರ ಬರವಣಿಗೆಗೆ ಒಂದು ಮಾಂತ್ರಿಕ ಶಕ್ತಿ ಇದೆ. ಅವರ ಆಲೋಚನೆಗೆ ಧಾರವಾಡದ ಶ್ರಾವಣದ ಕಸುವಿದೆ” ಎಂದು ಶ್ಲಾಘಿಸಿದ್ದಾರೆ.
ರಾಜಕುಮಾರ ಮಡಿವಾಳರ ಮೂಲತಃ ಧಾರವಾಡದವರು. ಬಿ.ಎ ಪದವಿ ಪಡೆದಿರುವ ಅವರು ಧಾರವಾಡದಲ್ಲಿ ಪುಸ್ತಕ ಮಳಿಗೆ ಜೊತೆಗೆ ಧಾರವಾಡ ಪೇಢೌ ಫ್ರಾಂಚೈಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಓದು ಮೆಚ್ಚಿನ ಹವ್ಯಾಸವಾಗಿಸಿಕೊಂಡಿರುವ ಅವರು 'ಹಣೆ ಬರಹವಿಲ್ಲದ ಹಾಡುಗಳು' ಮತ್ತು 'ಹುರಿಗೆಜ್ಜೆ' ಎಂಬ ಎರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಕವನ ಸಂಕಲನಕ್ಕೆ 2016ನೇ ಸಾಲಿನ ಅಂಬಿಕಾತನಯದತ್ತ ಪುಸ್ತಕ ಬಹುಮಾನ ಪ್ರಶಸ್ತಿ ಸಂದಿದೆ. ...
READ MORE