ಸುತ್ತ ಮುತ್ತ

Author : ಮಂಗಳ ಎಂ ನಾಡಿಗ್

Pages 272

₹ 290.00




Year of Publication: 2023
Published by: ಬಿ.ಎಸ್. ಮಧು ನ್ಯೂ ವೇವ್ ಬುಕ್ಸ್
Address: # 90/3, ಇಸ್ಟ್ ಫ್ಲೋರ್, ಬಸವನಗುಡಿ, ಬೆಂಗಳೂರು 560 004.\n

Synopsys

‘ಸುತ್ತ ಮುತ್ತ’ ಮಂಗಳ ಎಂ.ನಾಡಿಗ್ ಅವರ ಲೇಖನಗಳ ಸಂಕಲನವಾಗಿದೆ. ಇದಕ್ಕೆ ಲೇಖಕಿಯ ನುಡಿ ಬರವಣಿಗೆ ಇದೆ; ಈ ಕೃತಿಯಲ್ಲಿ ಬರೆದ ಲೇಖನಗಳೆಲ್ಲವೂ ನಮ್ಮ ಸುತ್ತಮುತ್ತ ನಡೆಯುವಂತಹ/ ನಡೆದಂತಹ ವಿಷಯಗಳಿಗೆ ಸಂಬಂಧಪಟ್ಟಿದ್ದು. ನೋಡಿದ, ಕೇಳಿದ, ಸ್ವಂತ ಅನುಭವಗಳ ನಿಟ್ಟಿನಲ್ಲಿ ಸಹಜವಾಗಿ ಬರೆದದ್ದು. ಓದಿದ ತಕ್ಷಣ ನಮ್ಮದು ಅನಿಸಬೇಕು, ಮೊದಲಿನಿಂದ ಕೊನೆವರೆಗೂ ಒಂದೇ ಓಘದಲ್ಲಿ ಓದಿಸಿಕೊಂಡು ಹೋಗಬೇಕು ಎಂಬುದು ನನ್ನ ಒಂದು ಅಭಿಮತ. ನನ್ನದು ಆಡು ಭಾಷೆಯ ಸರಳ ಬರವಣಿಗೆ. ಈ ಶೈಲಿಯ ಬರವಣಿಗೆ ನನಗೆ ಒಳ್ಳೆಯ ಹೆಸರು, ಇನ್ನಷ್ಟು ಉತ್ತಮ ಅವಕಾಶಗಳನ್ನು ತಂದು ಕೊಟ್ಟಿದೆ.

About the Author

ಮಂಗಳ ಎಂ ನಾಡಿಗ್

ಬರಹಗಾರ್ತಿ ಮಂಗಳ ಎಂ. ನಾಡಿಗ್ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನವರು. ಪ್ರಸ್ತುತ ಬೆಂಗಳೂರು ನಿವಾಸಿ. ಕಥೆ, ಕವನ, ಲೇಖನ, ಚುಟುಕು, ಆಶುಕವನ, ಆಶುಕಥೆ, ಸಂಭಾಷಣೆ, ಶಿಶುಗೀತೆ, ಲಾವಣಿ, ಹಾಸ್ಯ ಬರಹ, ಪ್ರಹಸನ, ಜಾನಪದ ಶೈಲಿಯ ಕವನ ಹೀಗೆ ಎಲ್ಲಾ ವಿಧದ ಬರಹಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಿನಯವಾಣಿ ದಿನಪತ್ರಿಕೆಯಲ್ಲಿ "ಭಾವವರ್ಷ" ಎಂಬ ಶೀರ್ಷಿಕೆಯಡಿಯಲ್ಲಿ ಅಂಕಣ ಬರಹ, ವಿಶ್ವವಾಣಿ, ಬಿ ಟ್ರೆಂಡ್ಸ್, ಅಪರಂಜಿ ಮಾಸಪತ್ರಿಕೆ, ನಯನ ಮಾಸಪತ್ರಿಕೆ, ಮಂಗಳ ವಾರಪತ್ರಿಕೆ , ಚೆನ್ನೈನ ಲಹರಿ ಪತ್ರಿಕೆ, ರಾಯಚೂರಿನ ಸ್ಟೇಟ್ ಎಕ್ಸ್ಪ್ರೆಸ್ ದಿನಪತ್ರಿಕೆ, ಶಿವಮೊಗ್ಗದ ಅಜೇಯ ಸಂಜೆ ಪತ್ರಿಕೆ, ಭೀಮ ವಿಜಯ ...

READ MORE

Related Books