ಸಮಕಾಲಿನ ಸಂಗತಿಗಳಿಗೆ ಡಾ.ಸಿ.ಎನ್.ರಾಮಚಂದ್ರನ್ ಅವರು ತಮ್ಮ ಬರಹಗಳ ಮೂಲಕ ನೀಡಿದ ಪ್ರತಿಕ್ರಿಯೆಗಳ ಸಂಗ್ರಹವೇ ಈ ಪುಸ್ತಕ.“ಪಂಪನ ಕುರುಕ್ಷೇತ್ರದಿಂದ ಸದ್ದಾಂನ ಯುದ್ಧಭೂಮಿವರೆಗೆ, ಮನುಸ್ಮೃತಿಯಿಂದ ಸ್ಮೃತಿ ಇರಾನಿ ತನಕ, ಡಿಎನ್‌ಎಯಿಂದ ಎನ್‌ಡಿಎವರೆಗೆ... ಹೀಗೆ ಇಲ್ಲಿ ಆಗು ಹೋಗುಗಳ ಬಗ್ಗೆ ಈ ಪುಸ್ತಕದಲ್ಲಿ ಬೆಳಕು ಚೆಲ್ಲಾಗಿದೆ.ಪ್ರಜಾಪ್ರಭುತ್ವ ಮತ್ತು ವಿಪ್, ಸ್ಮಾರ್ಟ್‌ಸಿಟಿ, ಅಸಹಿಷ್ಣುತೆಯ ಅನಂತ ಮುಖಗಳು, ಮೌಡ್ಯ ನಿಷೇಧ ಶಾಸನ, ಡಬ್ಬಿಂಗ್ ಎಂಬ ಮಹಾ ಮೋಸ - ಹೀಗೆ ಅವರು ಆಯ್ದುಕೊಳ್ಳುವ ವಸ್ತುಗಳ ವ್ಯಾಪ್ತಿ ಹಿರಿದು.ಜಗತಿಕ ವಿದ್ಯಮಾನಗಳ ಕರಿತು ವಿಮರ್ಶಕರು, ಚಿಂತಕರ,ಲೇಖಕರ ಅಭಿಪ್ರಾಯ ಜನಸಮಾನ್ಯರಿಗೆ ಉಪಕಾರಿಯಾಗಿದೆ.
ರಾಮಚಂದ್ರನ್ ಅವರು ಜನಿಸಿದ್ದು (ಜ ೧೯೩೬) ಮೈಸೂರು ಜಿಲ್ಲೆಯ ಚಿಲ್ಕುಂದ ಗ್ರಾಮದಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ, ಅಮೆರಿಕೆಯ ಮಯಾಮಿ ವಿಶ್ವವಿದ್ಯಾಲಯದಿಂದ ಪಿಎಚ್. ಡಿ. ಪದವಿ. ಕರ್ನಾಟಕ, ಮಹಾರಾಷ್ಟ್ರ, ಅಮೆರಿಕ, ಸೌದಿ ಅರೇಬಿಯಾ, ಸೋಮಾಲಿಯಾಗಳಲ್ಲಿ ಅಧ್ಯಾಪಕರಾಗಿ ಕಾರ್‍ಯ ನಿರ್ವಹಿಸಿದ್ದಾರೆ. ೧೯೯೬ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಅಧ್ಯಾಪಕರಾಗಿ ನಿವೃತ್ತಿ. ಸಾಹಿತ್ಯ ವಿಮರ್ಶೆ, ವಸಾಹತೋತ್ತರ ಚಿಂತನೆ, ತೌಲನಿಕ ಸಾಹಿತ್ಯ, ಪರಂಪರೆ ಪ್ರತಿರೋಧ, ಎಡ್ವರ್ಡ್ ಸೈದ್, ಬಯಲುರೂಪ, ರಕ್ತ-ರೂಪಣೆ, ಹೊಸ ಮಡಿಯ ಮೇಲೆ ಚದುರಂಗ, ಗಿರೀಶ ಕಾರ್ನಾಡರ ಚಾರಿತ್ರಿಕ ನಾಟಕಗಳು ವಿಮರ್ಶಾ ಕೃತಿಗಳು. ಶೋಧ ಕಾದಂಬರಿ, ಕಸಾಂದ್ರ ಕಥಾ ಸಂಕಲನ. ಇನಾಂದಾರ್ ಪ್ರಶಸ್ತಿ, ...
READ MORE