ಸಾಹಿತ್ಯ, ಶಿಕ್ಷಣ, ಚಿತ್ರಕಲೆ, ರಂಗಭೂಮಿ, ಸಿನಿಮಾ ಮುಂತಾದ ಕ್ಷೇತ್ರಗಳಿಗೆ ಪ್ರತಿಸ್ಪಂದಿಸಿ ಬರೆದ ಬರೆಹಗಳು ಇಲ್ಲಿ ಸಂಕಲಿತವಾಗಿವೆ. ಆಳವಾದ ಒಳನೋಟದ ವಿಮರ್ಶಾಪಜ್ಜೆಗಿಂತ ತಕ್ಷಣಕ್ಕೆ ಸ್ಪಂದಿಸುವ ಜರ್ನಲಿಸ್ಟಿಕ್ ಗುಣವೇ ಇಲ್ಲಿ ಢಾಳಾಗಿ ಕಾಣಿಸುತ್ತಿದೆ. ಸದ್ಯವನ್ನು ಸ್ಪರ್ಶಿಸುವುದನ್ನೇ ಲಕ್ಷವಾಗಿಸಿಕೊಂಡ ಇಂಥ ಬರೆಹಗಳು ಅಪರೂಪಕ್ಕೊಮ್ಮೆ ಶಾಶ್ವತದಲ್ಲೂ ನಿಲ್ಲುವಂಥ ಗುಣಗಳನ್ನು ಪ್ರದರ್ಶಿಸುವುದೂ ಉಂಟು. ಹಾಗಾದಾಗಲೇ ಒಂದು ಬರಹಕ್ಕೆ ತಾನು ಉದ್ದೇಶಿಸಿದ ಮಾಧ್ಯಮದಾಚೆಗೆ ಒಂದು ಅರ್ಥ ವಿಸ್ತಾರವನ್ನು ಕೊಡಲು ಸಾಧ್ಯವಾಗುವುದು, ಹಾಗೆ ಮಾಧ್ಯಮ ಮನೋಧರ್ಮವನ್ನು ಲಂಘಿಸಿ ಅದರಾಚೆ ಬೆಳೆಯಲು ಹಾತೊರೆಯುವುದೇ ನಿಜವಾದ ಮಾಧ್ಯಮ ಮನೋಧರ್ಮವಾಗಿದೆ.
ಕವಿ-ಕತೆಗಾರ- ಅನುವಾದಕ ಚಿದಾನಂದ ಸಾಲಿ ಅವರು ಮೂಲತಃ ರಾಯಚೂರು ಜಿಲ್ಲೆಯ ಸಿರವಾರದವರು. ಗಣಿತಶಾಸ್ತ್ರದಲ್ಲಿ ಎಂಎಸ್ಸಿ, ಪತ್ರಿಕೋದ್ಯಮ, ಕನ್ನಡದಲ್ಲಿ ಎಂ.ಎ. ಪದವಿ ಪಡೆದಿರುವ ಅವರು ಎಂಫಿಲ್, ಪಿಜಿಡಿಎಚ್ ಇ ಮತ್ತು ಪಿಜಿಡಿಎಚ್ ಆರ್ ಎಂ ಪದವೀಧರರು. ಕೆಲಕಾಲ ಪತ್ರಕರ್ತರಾಗಿದ್ದ ಅವರು ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕರು. ಪ್ರಜಾವಾಣಿ ಕಥಾಸ್ಪರ್ಧೆ, ಕ್ರೈಸ್ಟ್ ಕಾಲೇಜ್ ಕಾವ್ಯಸ್ಪರ್ಧೆ, ಕನ್ನಡಪ್ರಭ ಕಥಾಸ್ಪರ್ಧೆ, ಸಂಕ್ರಮಣ ಕಾವ್ಯಸ್ಪರ್ಧೆ, ಸಂಚಯ ಕಾವ್ಯಸ್ಪರ್ಧೆ, ಪ್ರಜಾವಾಣಿ ಕಾವ್ಯಸ್ಪರ್ಧೆ ಮುಂತಾದವುಗಳಲ್ಲಿ ಬಹುಮಾನ ಪಡೆದಿದ್ದಾರೆ. ರೆ. ..(ಕವಿತೆ); ಮೌನ(ಕನ್ನಡ ಗಜಲ್); ಧರೆಗೆ ನಿದ್ರೆಯು ಇಲ್ಲ(ಕಥಾಸಂಕಲನ), ಚೌಕಟ್ಟಿನಾಚೆ (ಬೆಟ್ಟದೂರರ ಕಲಾಕೃತಿಗಳನ್ನು ಕುರಿತು); ಶಿಕ್ಷಣ ಮತ್ತು ಜೀವನಶೈಲಿ ...
READ MORE