ಇದೇ ಅಂತರಂಗ ಸುದ್ದಿ

Author : ವಿಶ್ವೇಶ್ವರ ಭಟ್

Pages 288

₹ 388.00




Year of Publication: 2022
Published by: ವಿಶ್ವಾವಾಣಿ ಪುಸ್ತಕ

Synopsys

ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್ಟರ ಅಂಕಣಗಳ ಸಂಗ್ರಹವಾಗಿದೆ. ಅಣ್ಣ ಬಸವಣ್ಣ 'ಇದೇ ಅಂತರಂಗ ಶುದ್ದಿ' ಎಂದರು. ಎಷ್ಟೆಂದರೂ ನಾನು ಸುದ್ದಿಜೀವಿ. ಇದನ್ನೇ ನಾನು ತುಸು ಬದಲಿಸಿ, 'ಇದೇ ಅಂತರಂಗ ಸುದ್ದಿ'ಯಾಗಿಸಿದೆ. ಸುದ್ದಿಗೂ ಶುದ್ದಿ ಬೇಕು, ಸುದ್ದಿಯೂ ಶುದ್ಧವಾಗಿರಬೇಕಲ್ಲ. ಬಸವಣ್ಣನವರ ಆಶಯವೇ ಈ ಅಂಕಣದ ಹಾಸು, ಹೊದಿಕೆ, ಎಲ್ಲವೂ ಒಳಗೊಳ್ಳಬೇಕು, ಎಲ್ಲರನ್ನೂ ಒಳಗೊಂಡಿರಬೇಕು, ತುಂಬಿದ್ದು ಬರಿದಾಗಬೇಕು, ಪುನಃ ಭರ್ತಿಯಾಗಬೇಕು, ಆಪ್ತತೆಯ ಬೇಲಿ ಕಟ್ಟಬೇಕು; ಬೇಲಿ ಬಿಡಿಸಿಕೊಂಡು ಅಲಿಪ್ತತೆಯೆಡೆಗೆ ಮುಖ ಮಾಡಬೇಕು. ಅದೇ ಅಂಕಣಕಾರ ಅನುಭವಿಸುವ ನಿಜವಾದ ಸ್ವಾತಂತ್ರ್ಯ, ಆನಂದ, ಹೀಗಾಗಿ 'ಇದೇ ಅಂತರಂಗ ಸುದ್ದಿ' ಯಾವ ಬೇಲಿಯೂ ಇಲ್ಲದ ಬಾನು, ತಿಳಿ ಅಕ್ಷರಗೊಳ, ಇದೊಂದು ಚೌಕಟ್ಟೇ ಇಲ್ಲದ ಅಂಕಣ, ಸರಗೋಲು ಇಲ್ಲದ ಹುಲ್ಲುಗಾವಲು. ಹೀಗಾಗಿ ಇಲ್ಲಿ ಯಾರ್ಯಾರೋ ಬರುತ್ತಾರೆ, ಬಂದವರೆಲ್ಲ ಏನೋ ಹೊಸತು ಹೇಳಿ ಹೋಗುತ್ತಾರೆ. ನಾನು ಅವರಿಗೆಲ್ಲಾ ಕಿವಿಯಾಗುತ್ತೇನೆ, ಲೇಖನಿಯಾಗುತ್ತೇನೆ. ಈ ಅಂತರಂಗದ ಅಭಿವ್ಯಕ್ತಿಯಲ್ಲಿ ಬಹಳಷ್ಟನ್ನು ನನ್ನ 'ಅನುಭವ ಮಂಟಪ'ದಲ್ಲೇ ಕಟ್ಟಿದ್ದು, ಇನ್ನೂ ಕೆಲವು ನಿಮ್ಮಂಥವರ ಬದುಕಿನ ಬಾವಿಯಿಂದ ನಾನು ಸೇದಿಕೊಂಡಿದ್ದು, ಇವೆರಡನ್ನೂ ಗಂಧ-ಚಂದನದಂತೆ ಸೇರಿಸಿ ಈಗ ಓದುಗರ ಮಸ್ತಕಕ್ಕೆ ತಿಲಕವಿಡುವ ಖುಷಿಯ ಸಂದರ್ಭ. ಒಟ್ಟಾರೆ ಇವು ಕೆಲಕಾಲ ಅಂತರಂಗವನ್ನು ಶುದ್ಧವಾಗಿಸುವ ಅಂತಃಕರಣದ ಬರಹ ಎಂದು ವಿಶ್ವೇಶ್ವರ ಭಟ್ ಅವರು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ವಿಶ್ವೇಶ್ವರ ಭಟ್

ವಿಶ್ವೇಶ್ವರ ಭಟ್ ಅವರು ಉತ್ತರಕನ್ನಡ ಜಿಲ್ಲೆಯ  ಕುಮಟಾದ ಮೂರೂರಿನವರು. ಓದಿದ್ದು ಎಂ.ಎಸ್ಸಿ. ಹಾಗೂ ಎಂ.ಎ. ನಾಲ್ಕು ಚಿನ್ನದ ಪದಕ ವಿಜೇತರು, ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ, ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭ, ವಿಜಯ ಕರ್ನಾಟಕ, ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಚಾನಲ್‌ನ ಪ್ರಧಾನ ಸಂಪಾದಕ, ಏಷಿಯನ್ ಕಾಲೇಜ್ ಆಫ್ ಜರ್ನಲಿಸಮ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್, ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ,  “ವಿಶ್ವವಾಣಿ' ದಿನಪತ್ರಿಕೆಯ ಪ್ರಧಾನ ಸಂಪಾದಕರು. 'ನೂರೆಂಟು ವಿಶ್ವ, 'ಇದೇ ಅಂತರಂಗ ಸುದ್ದಿ' ...

READ MORE

Related Books