ಅಗ್ನಿ ಶ್ರೀಧರ್ ಅವರ ’ಒಳಗೂ ಬಯಲು ಹೊರಗೂ ಬಯಲು’ ಕೃತಿಯು ಮೀಮಾಂಸೆಯ ಪರಿಭಾಷೆಯ ಸೂತಕವಿಲ್ಲದೆ ತಾತ್ವಿಕ ಪರಿಭಾಷೆಯಲ್ಲಿ ಚರ್ಚಿಸಲ್ಪಟ್ಟ ಅಂಕಣ ಬರಹಗಳ ಸಂಗ್ರಹ.
ಭಾರತೀಯ ಧಾರ್ಮಿಕ ಸಿದ್ಧಾಂತ, ಧರ್ಮ ಪ್ರವರ್ತಕರನ್ನುಹಾಗೂ ಸಾಹಿತ್ಯ ಚಿಂತಕರನ್ನು ಕೇಂದ್ರವಾಗಿಸಿ ಬರೆದ ಲೇಖನಗಳಿವೆ.
ಅಗ್ನಿ ಶ್ರೀಧರ್ ಪತ್ರಕರ್ತರು, ಲೇಖಕರು, ಚಲನಚಿತ್ರ ಸಂಭಾಷಣೆಗಾರರು ಹಾಗೂ ನಿರ್ದೇಶಕರು. ಅಗ್ನಿ ಎಂಬ ವಾರಪತ್ರಿಕೆಯನ್ನು ನಡೆಸುತ್ತಿದ್ದಾರೆ. ಅವರು ಕರುನಾಡ ಸೇನೆಯ ಸ್ಥಾಪಕರೂ ಸಹ ಆಗಿದ್ದಾರೆ. ನಂತರ ಅವರು ಸಾಪ್ತಾಹಿಕ ಕನ್ನಡ ವೃತ್ತಪತ್ರಿಕೆ, ಅಗ್ನಿಯನ್ನು ಸ್ಥಾಪಿಸಿದರು ಮತ್ತು ವೃತ್ತಿಪರ ಬರಹಗಾರರಾಗಿದ್ದಾರೆ. "ದಾದಗಿರಿಯ ದಿನಗಳು" ಎಂಬ ಪುಸ್ತಕವನ್ನು ಬರೆದಿದ್ದಾರೆ. ಅಗ್ನಿ ಅಸ್ತ್ರ ಎಂಬ ಯು- ಟ್ಯೂಬ್ ಚಾನಲ್‌ನಲ್ಲೂ ತಮ್ಮ ವಿಮರ್ಷೆಗಳನ್ನು ಪ್ರಕಟಿಸಿದ್ದಾರೆ. ಅವರ ಪುಸ್ತಕಗಳು- ಆಧುನಿಕ ಮಾಂತ್ರಿಕರ ಜಾಡಿನಲ್ಲಿ, ಕ್ವಾಂಟಂ ಜಗತ್ತು, ಟಿಬೇಟಿಯನ್ನರ ಸತ್ತವರ ಪುಸ್ತಕ, ಕಾಡುವ ಸಾಧಕರು, ಸಂಗತಿಗಳು, ತೊಟ್ಟಿಕ್ಕುತ್ತಲೇ ಇದೆ ನೆತ್ತರು, ಎದೆಗಾರಿಕೆ, ದಾದಾಗಿರಿಯ ದಿನಗಳು ಭಾಗ-1, ...
READ MORE