2016ರ ನೊಬಲ್ ಪ್ರಶಸ್ತಿ ಪುರಸ್ಕೃತರು

Author : ಲಕ್ಷ್ಮೀ ಮಚ್ಚಿನ

Pages 108

₹ 80.00




Year of Publication: 2016
Published by: ಪ್ರಗತಿ ಪ್ರಕಾಶನ
Phone: 08023507170

Synopsys

ಲೇಖಕ ಲಕ್ಷ್ಮೀ ಮಚ್ಚಿನ ಅವರ ಕೃತಿ ‘2016ರ ನೊಬಲ್ ಪ್ರಶಸ್ತಿ ಪುರಸ್ಕೃತರು’. 1888ರಲ್ಲಿ ಅಲ್‌ಫ್ರೆಡ್ ನೊಬೆಲ್ ಅವರ ಸಹೋದರ ಲುಡ್ಡಿಗ್ ನೊಬೆಲ್ ನಿಧನರಾದಾಗ ಫ್ರೆಂಚ್ ಪತ್ರಿಕೆಯಲ್ಲಿ ಅಲ್‌ಫ್ರೆಡ್ ನೊಬೆಲ್ ನಿಧನರಾದರೆಂದೇ ರಾವಿಸಿ ಸಾವಿನ ವ್ಯಾಪಾರಿಯ ನಿಧನ ಎಂದು ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು. ತನ್ನ ಹೆಸರಿನಲ್ಲಿ ಅನಾಮತ್ತು 355ಪೇಟೆಂಟ್‌ಗಳನ್ನು ಹೊಂದಿದ್ದ ಡೈನಮೈಟ್‌ನ ಸಂಶೋಧಕ( ನೈಟ್ರೋಗ್ಲಿಸರಿನ್ ಎಂಬ ಹಾಸಾಯನಿಕ ಸಂಯುಕ್ತವಸ್ತುವಿಗೆ ಕೀಸಲ್ಗರ್ ಹೆಸರಿನ ತಟಸ್ಥ ಪುಡಿಯನ್ನು ಸೇರಿಸಿ ಬೇಕೆಂದಾಗ ಸೋಟಿಸುವ ಸೋಟಕ ಡೈನಮೈಟ್) ಅಲ್‌ಫ್ರೆಡ್ ರೂಬೆಲ್ ಎಂಬ ಹೆಸರು ಇಂದು ಇಡೀ ಜಗತ್ತಿನಲ್ಲಿ ಪ್ರತ್ಯೇಕವಾದ ಐಡೆಂಟಿಟಿ ಪಡೆಯಲು ಇದೊಂದೇ ಸುದ್ದಿ ಸಾಕಾಗಿತ್ತು. ತನ್ನ ಮರಣಾ ನಂತರ ಜನ ಸಾವಿನ ವ್ಯಾಪಾರಿ ಎಂದು ಗುರುತಿಸುತ್ತಾರೆ ಎಂದು ತಲೆಗೆ ಹೊಳೆಯುತ್ತಲೇ ತನ್ನ ಸಂಪಾದನೆಯ ಶೇ.94ರಷ್ಟನ್ನು ಜನ ತನ್ನನ್ನು ಗುರುತಿಸುವುದಕ್ಕಾಗಿ ನೀಡಬೇಕೆಂದು ನಿರ್ಧರಿಸಿದ. ತಡ ಮಾಡಲಿಲ್ಲ. ಅದೊಂದು ಶುಭಘಳಿಗೆಯಲ್ಲಿ ಉಯಿಲು ಬರೆದಿಟ್ಟ ಹಾಗೆ ಅಲ್‌ಫ್ರೆಡ್ ನೊಬೆಲ್ ಮೃತಪಟ್ಟು ಐದು ವರ್ಷಗಳ ತರುವಾಯ ನೊಬೆಲ್ ಪ್ರಶಸ್ತಿಗಳ ಪ್ರದಾನ ಪ್ರಾರಂಭವಾದವು. ಐದು ವಿಷಯಗಳಿಗೆ ಅಂದರೆ ರಸಾಯನ ಶಾಸ್ತ್ರ, ಭೌತಶಾಸ್ತ್ರ, ಶಾಂತಿ, ವೈದ್ಯಕೀಯ ಅಥವಾ , ಸಾಹಿತ್ಯದ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡುವಂತೆ ವೀಲುನಾಮೆ ಬರೆದಿಟ್ಟ, ಅರ್ಥಶಾಸ್ತ್ರಕ್ಕೆ ನೊಬೆಲ್ ಕೊಡುವ ಪರಿಪಾಠ ನಂತರ ಪ್ರಾರಂಭವಾಯಿತು. ಹೀಗೆ 2016ನೇ ಸಾಲಿನಲ್ಲಿ ನೊಬೆಲ್ ಪ್ರಶಸ್ತಿ ಪಡೆದವರ ಪರಿಚಯ ಈ ಕೃತಿಯಲ್ಲಿದೆ.

About the Author

ಲಕ್ಷ್ಮೀ ಮಚ್ಚಿನ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಲಕ್ಷ್ಮೀ ಮಚ್ಚಿನ ಪ್ರಸ್ತುತ ಉಡುಪಿ ನಿವಾಸಿ. ಬೆಳ್ತಂಗಡಿ ತಾಲೂಕಿನಲ್ಲಿ ಪತ್ರಕರ್ತನಾಗಿ ತನ್ನ 20ನೆಯ ವಯಸ್ಸಿಗೆ ತೊಡಗಿಸಿಕೊಂಡು ಹೊಸದಿಗಂತ, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕದ ಬಳಿಕ ಉದಯವಾಣಿಯಲ್ಲಿ 2008ರಲ್ಲಿ ವರದಿಗಾರನಾಗಿ ಸೇರಿ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿ ಉಪಮುಖ್ಯ ವರದಿಗಾರನಾಗಿ ಕುಂದಾಪುರದಲ್ಲಿ 2018ರಿಂದ  ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಗ್ರಾಮೀಣ ಪತ್ರಿಕೋದ್ಯಮದಲ್ಲಿ ಆಸಕ್ತಿ. ಕಳೆದ ಅಷ್ಟೂ ವರ್ಷಗಳಿಂದ ಗ್ರಾಮೀಣಾಭಿವೃದ್ಧಿ, ಗ್ರಾಮೀಣ ಅಭ್ಯುದಯಕ್ಕಾಗಿ , ಪರಿಸರ ಪೂರಕವಾಗಿ ಮಾಡಿದ ವರದಿಗಳು ನೂರಾರು. ಇದರಲ್ಲಿ ಫಲ ಕಂಡು ಗ್ರಾಮಾಂತರದ ಸಮಸ್ಯೆ, ಬವಣೆ ನೀಗಲ್ಪಟ್ಟಿದ್ದು ಉಲ್ಲೇಖನೀಯ. ಮಾನವಾಸಕ್ತ ...

READ MORE

Related Books