ಭಾರತದಲ್ಲಿ ಚುನಾವಣೆಗಳು

Author : ವೈ.ಜಿ.ಮುರಳೀಧರನ್

Pages 52

₹ 75.00




Year of Publication: 2023
Published by: ಅಮೂಲ್ಯ ಪುಸ್ತಕ
Address: #83/1, 15ನೆಯ ಮುಖ್ಯರಸ್ತೆ, (ವಿಜಯನಗರ ಕ್ಲಬ್ ಎದುರುರಸ್ತೆ) ವಿಜಯನಗರ, ಬೆಂಗಳೂರು - 560040.
Phone: 9448676770 9620796770

Synopsys

'ಭಾರತದಲ್ಲಿ ಚುನಾವಣೆಗಳು' (ವಿದ್ಯಾರ್ಥಿಗಳಿಗಾಗಿ ಕಾನೂನು ಅರಿವು ಮಾಲಿಕೆ–2)ಯಲ್ಲಿ ಪ್ರಕಟ ಆದ ಕೃತಿ. ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮಾಲಿಕೆ ಶಾಲಾ ವಿದ್ಯಾರ್ಥಿಗಳಿಗೆ ಭಾರತದ ಸಂವಿಧಾನ, ಕಾನೂನು, ನಾಗರಿಕ ಹಕ್ಕ-ಕರ್ತವ್ಯಗಳು, ಶಾಲಾ ಪಠ್ಯಂಶಕ್ಕೆ ಸಂಬಂಧಿಸಿದ ಹಾಗೂ ಪಠ್ಯೇತರ ವಿಷಯಗಳ ಅರಿವು ಮೂಡಿಸುವುದು `ಅಮೂಲ್ಯ ಪುಸ್ತಕ’ದ ಈ ಮಾಲಿಕೆಯ ಹಿಂದಿನ ಉದ್ದೇಶ. ವಿದ್ಯಾರ್ಥಿಗಳಿಗೆ ಸರಳವಾಗಿ ಕಾನೂನು ವಿಚಾರಗಳನ್ನು ಅರ್ಥವಾಗುವಂತೆ ತಲುಪಿಸುವುದು ಮಾಲಿಕೆಯ ಕಿರುಪುಸ್ತಕಗಳ ಗುರಿ. ಮಾಲಿಕೆಯ ಮೊದಲ ಕೃತಿ `ಗ್ರಾಹಕ ಜಾಗೃತಿ’ ಪ್ರಕಟವಾಗಿದ್ದು; `ಭಾರತದಲ್ಲಿ ಚುನಾವಣೆ’ ಎರಡನೆಯ ಕೃತಿ. `ಕಾನೂನು ಅರಿವು’ ಸರಣಿಯ ಕೃತಿಗಳನ್ನು ಉಪಯುಕ್ತವಾಗುವಂತೆ ರೂಪಿಸುವುದು ಶಾಲಾ ಮಕ್ಕಳಿಗೆ ತಲುಪಿಸುವುದು `ಅಮೂಲ್ಯ ಪುಸ್ತಕ’ದ ಉದ್ದೇಶ.

About the Author

ವೈ.ಜಿ.ಮುರಳೀಧರನ್
(16 August 1956)

ವೈ.ಜಿ.ಮುರಳೀಧರನ್ ಅವರು [1956] ಬಿ ಕಾಂ ಪದವೀಧರರು ಮತ್ತು ಪತ್ರಿಕೋದ್ಯಮದಲ್ಲಿ ಪಿಜಿ ಡಿಪ್ಲೋಮ ಪಡೆದಿದ್ದಾರೆ. ಬಿ ಎಚ್ ಇ ಎಲ್ ಕಾರ್ಖಾನೆಯಲ್ಲಿ 20 ವರ್ಷ ಹಣಕಾಸು ವಿಭಾಗದಲ್ಲಿ ಕಾರ್ಯ ನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದು ನಂತರ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದಲ್ಲಿ 12 ವರ್ಷ ಗ್ರಾಹಕ ವ್ಯವಹಾರಗಳ ಕಚೇರಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ. 1993ರಿಂದ ಗ್ರಾಹಕ ಹಕ್ಕುಗಳು, ಮಾಹಿತಿ ಹಕ್ಕು ಇತ್ಯಾದಿ ಸಾಮಾಜಿಕ ವಿಷಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಕೇಂದ್ರ ಸರಕಾರದ ವಿವಿಧ ಸಲಹಾ ಮಂಡಳಿಯ ಸದಸ್ಯರಾಗಿ ನಾಗರಿಕರನ್ನು ಪ್ರತಿನಿಧಿಸಿದ್ದಾರೆ. ರಾಜ್ಯ ಸರಕಾರದ ಆಡಳಿತ ತರಬೇತಿ ಸಂಸ್ಥೆ, ನ್ಯಾಷನಲ್ ಲಾ ಸ್ಕೂಲ್ ...

READ MORE

Excerpt / E-Books

ಭಾರತದ ಪ್ರಜೆಗಳಾದ ನಾವು ಪ್ರಜಾಪ್ರಭುತ್ವ ಮಾದರಿ ರಾಜ್ಯಾಡಳಿತವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಭಾರತ ವಿಶ್ವದಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವದ ರಾಷ್ಟçಗಳಲ್ಲಿ ಒಂದಾಗಿದೆ. ಒಂದು ರಾಷ್ಟç ಪ್ರಜಾಪ್ರಭುತ್ವ ಎಂದು ಕರೆಸಿಕೊಳ್ಳಬೇಕಾದರೆ ಅಲ್ಲಿ ಚುನಾವಣೆ ನಡೆಯಬೇಕು. ಚುನಾವಣೆ ಮತ್ತು ಪ್ರಜಾಪ್ರಭುತ್ವ ಒಂದೇ ನಾಣ್ಯದ ಎರಡು ಮುಖಗಳು. ಪ್ರಜಾಪ್ರಭುತ್ವದ ರಾಷ್ಟçದಲ್ಲಿ ಪ್ರಜೆಗಳೇ ಪ್ರಭುಗಳು. ಅವರೇ ರಾಷ್ಟçವನ್ನು ಆಳುವವರು. ಆದರೆ, ಅಸಂಖ್ಯಾತ ಪ್ರಜೆಗಳು ರಾಜ್ಯಾಡಳಿತದಲ್ಲಿ ನೇರವಾಗಿ ಭಾಗವಹಿಸಲು ಆಗುವುದಿಲ್ಲ. ಎಲ್ಲ ಪ್ರಜೆಗಳಿಗೂ ರಾಜ್ಯವನ್ನು ಆಳುವ, ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವಷ್ಟು ಬುದ್ಧಿವಂತಿಕೆ, ಸಮಯ, ಕೌಶಲ್ಯ... ಇತ್ಯಾದಿ ಇರಲಾರದು. ಆದ್ದರಿಂದ, ಪ್ರಜೆಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುವ ಜವಾಬ್ದಾರಿಯನ್ನು ಇತರರಿಗೆ ನೀಡುತ್ತಾರೆ-- ಅವರೇ ಜನಪ್ರತಿನಿಧಿಗಳು. ಜನಪ್ರತಿನಿಧಿಗಳನ್ನು ಗುರುತಿಸುವುದು ಹೇಗೆ? ಅವರನ್ನು ಆಯ್ಕೆ ಮಾಡುವುದು ಹೇಗೆ? ಪ್ರಜೆಗಳು ತಮಗಿಷ್ಟವಾದ ವ್ಯಕ್ತಿಗಳನ್ನು ಆಯ್ಕೆ ಮಾಡುವ ವಿಧಾನವೇ ‘ಚುನಾವಣೆ’. ನೀವು ಯುಗಾದಿ, ದೀಪಾವಳಿ, ಸಂಕ್ರಾAತಿ, ಕ್ರಿಸ್‌ಮಸ್, ರಂಜಾನ್ ಇತ್ಯಾದಿ ಹಬ್ಬಗಳನ್ನು ಸಂಭ್ರಮದಿAದ ಆಚರಿಸುವಂತೆ ಪ್ರಜಾಪ್ರಭುತ್ವದ ಹಬ್ಬವನ್ನು ಚುನಾವಣೆಯಲ್ಲಿ ಭಾಗವಹಿಸುವ ಮೂಲಕ ಆಚರಿಸಬೇಕು. ಚುನಾವಣೆಯ ದಿನ ಮತಗಟ್ಟೆಗೆ ಹೋಗಿ ಉತ್ತಮ ಅಭ್ಯರ್ಥಿಗಳಿಗೆ ಮತವನ್ನು ಹಾಕಬೇಕು. ಪ್ರತಿಯೊಬ್ಬ ಅರ್ಹ ಪ್ರಜೆಗೆ ಭಾರತದ ಸಂವಿಧಾನ ಮತ ಚಲಾಯಿಸುವ ಹಕ್ಕನ್ನು ನೀಡಿದೆ. ಹಾಗಾಗಿ, ಮತದಾನ ಪ್ರಜೆಗಳ ಜವಾಬ್ದಾರಿ. ನೀವು ಚುನಾವಣೆ ಬಗ್ಗೆ ಕೇಳಿರಬಹುದು. ದಿನಪತ್ರಿಕೆ, ನಿಯತಕಾಲಿಕೆಗಳಲ್ಲಿ ಮತ್ತು ನಿಮ್ಮ ಪಠ್ಯಪುಸ್ತಕದಲ್ಲೂ ಚುನಾವಣೆ ಬಗ್ಗೆ ಓದಿರಬಹುದು. ಟಿವಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಚುನಾವಣೆಯ ಬಗ್ಗೆ ಸಾಕಷ್ಟು ಮಾಹಿತಿ ಇರಬಹುದು. ಆದರೆ, ವಿದ್ಯಾರ್ಥಿಗಳಿಗೆ ಸರಳವಾದ ರೀತಿಯಲ್ಲಿ ಚುನಾವಣೆಯ ಬಗ್ಗೆ ಮಾಹಿತಿ ನೀಡಿ, ಅವರನ್ನು ಪ್ರಜಾಪ್ರಭುತ್ವದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮಾಡುವುದು ಈ ಕಿರುಪುಸ್ತಕದ ಉದ್ದೇಶ. -ವೈ.ಜಿ. ಮುರಳೀಧರನ್

Related Books